ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಭವೀನಾಬೆನ್ ಪಟೇಲ್

ಟೋಕಿಯೋ, ಆಗಸ್ಟ್ 29: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಪದಕ ಬೇಟೆಯನ್ನು ಆರಂಭಿಸಿದೆ. ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಪದಕ ಬೇಟೆಯನ್ನು ಆರಂಭಿಸಿದೆ.
34ರ ಹರೆಯದ ಭಾರತದ ಈ ಆಟಗಾರ್ತಿ ಈ ಬಾರಿಯ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದರು. ಅಗ್ರ ಶ್ರೇಯಾಂಕದ ಆಟಗಾರರ ವಿರುದ್ಧವೂ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರು. ಆದರೆ ಫೈನಲ್‌ನಲ್ಲಿ ಚೀನಾದ ಪೆಡ್ಲರ್ ಝಿಂಗ್ ಝೌವಿರುದ್ಧ 7-11, 5-11, 6-11 ಅಂತರದಿಂದ ಸೋಲು ಅನುಭವಿಸಿದರು. 19 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತ್ತು. ಈ ಮೂಲಕ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ. ಝೌ ವಿರುದ್ಧ ಗ್ರೂಪ್ ಹಂತದಲ್ಲಿಯೂ ಹೋರಾಟ ನಡೆಸಿ ಸೋಲು ಅನುಭವಿಸಿದ್ದರು ಭವೀನಾಬೆನ್ ಪಟೇಲ್.
ಚೀನಾದ ಆಟಗಾರ್ತಿ ಝಿಂಗ್ ಝೌ ಈಗಾಗಲೇ ಐದು ಪ್ಯಾರಾಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ ಬೀಜಿಂಗ್ ಹಾಗೂ ಲಂಡನ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕಗಳು ಕೂಡ ಸೇರಿದೆ. ಈಗ ಮೂರನೇ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದಿದ್ದಾರೆ ಚೀನಾದ ಝೌ.
ಭವೀನಾಬೆನ್ ಪಟೇನ್ ಸೆಮಿಫೈನಲ್‌ನಲ್ಲಿ ಕೂಡ ಚೀನಾದ ಆಟಗಾರ್ತಿಯನ್ನು ಎದುರಿಸಿದ್ದರು. ವಿಶ್ವದ ನಂಬರ್ 3 ಶ್ರೇಯಾಂಕಿಯಾಗಿರುವ ಮಿಯಾವೋ ಝಾಂಗ್ ವಿರುದ್ಧ ಭವೀನಾ ಬೆನ್ ಪಟೇಲ್ 7-11 11-7 11-4 9-11 11-8 ಅಂತರದಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications