For Quick Alerts
ALLOW NOTIFICATIONS  
For Daily Alerts

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ, ಐತಿಹಾಸಿಕ ಸಾಧನೆ ಮಾಡಿದ ಭಾರತ

Tokyo Paralympics closing ceremony: Avani Lekhara leads record-breaking Indian contingent

ಟೋಕಿಯೋ, ಸೆಪ್ಟೆಂಬರ್ 5: ಟೋಕಿಯೋದಲ್ಲಿ ನಡೆಯುತ್ತಿದ್ದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ತೆರೆಕಂಡಿದೆ. ಭಾನುವಾರ ಟೋಕಿಯೋ ನಗರದ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಸಮಾರೋಪ ಸಮಾರಂಭದ ಮೂಲಕ ಈ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆಬಿದ್ದಿದೆ. ಈ ಸಮಾರಂಭದಲ್ಲಿ ಭಾರತದ ಪರವಾಗಿ ಎರಡು ಪದಕಗಳನ್ನು ಗೆದ್ದ ಅವನಿ ಲೇಖರ ಧ್ವಜ ಹಿಡಿದು ಮುನ್ನಡೆಯುವ ಗೌರವ ಪಡೆದುಕೊಂಡರು. ಈಸಮಾರೋಪ ಸಮಾರಂಭದಲ್ಲಿ ಭಾರತದ ಒಟ್ಟು 11 ಕ್ರೀಡಾಪಟುಗಳು ಭಾಗಿಯಾಗಿದ್ದಾರೆ.

13 ದಿನಗಳ ಕಾಲ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಕೊರೊನಾವೈರಸ್‌ನ ಮಧ್ಯೆ ಯಶಸ್ವಿಯಾಗಿ ನಡೆದ ಈ ಕ್ರೀಡಾಕೂಟದಲ್ಲಿ ದಾಖಲೆ ಸಂಖ್ಯೆಯ 4,405 ಕ್ರೀಡಾಪಟುಗಳು ಭಾಗಿಯಾಗಿದ್ದರು. ದಾಖಲೆ ಪ್ರಮಾಣದ ದೇಶಗಳು ಪದಕವನ್ನು ಗೆದ್ದಿವೆ. ಇನ್ನು ಈ ಕ್ರೀಡಾಕೂಟದಲ್ಲಿ ಇಬ್ಬರು ಅಪ್ಘಾನಿಸ್ತಾನ ಕ್ರೀಡಾಪಟುಗಳು ಕೂಡ ಭಾಗಿಯಾಗಿದ್ದರು. ಇಬ್ಬರೂ ತಡವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಇತಿಹಾಸ ಬರೆದ ಭಾರತ: ಇನ್ನು ಈ ಬಾರಿಯ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಟ್ಟು 19 ಪದಕಗಳನ್ನು ಈ ಕ್ರೀಡಾಕೂಟದಲ್ಲಿ ಭಾರತ ಗೆದ್ದು ಬೀಗಿದೆ. ಒ,ದಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅತ್ಯುನ್ನತ ಸಾಧನೆ ಇದಾಗಿದೆ. ಇದರಲ್ಲಿ ಭಾರತ ಐದು ಚಿನ್ನದ ಪದಕ ಗೆದ್ದಿದ್ದರೆ 8 ಬೆಳ್ಳಿ ಪದಕ ಹಾಗೂ 6 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತ ಪದಕ ಪಟ್ಟಿಯಲ್ಲಿ ಅಗ್ರ 25ರ ಒಳಗೆ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಭಾರತ ಪದಕಪಟ್ಟಿಯಲ್ಲಿ 24ನೇ ಸ್ಥಾನ ಸಂಪಾದಿಸಿ ದಾಖಲೆ ಬರೆದಿದೆ.

ಭವಾನಿಬೆನ್ ಪಟೇಲ್ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಆರಂಭವಾದ ಭಾರತದ ಕ್ರೀಡಾಪಟುಗಳ ಈ ಪದಕ ಬೇಟೆ ಟೂರ್ನಿಯ ಕೊನೆಯ ದಿನವಾದ ಇಂದು ಒಂದು ಬೆಳ್ಳಿ ಹಾಗೂ ಒಂದು ಚಿನ್ನದ ಪದಕ ಗೆಲ್ಲುವ ಮೂಲಕ ಅಂತ್ಯಕಂಡಿದೆ. ಸಮಾರೋಪ ಸಮಾರಂಭದ ಈ ದಿನ ಕೃಷ್ಣ ನಗರ್ ಚಿನ್ನದ ಪದಕ ಗೆದ್ದಿದ್ದರೆ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅವನಿ ಲೇಖಿರಾ ಚಿನ್ನ ಹಾಗೂ ಕಂಚಿನ ಪದಕ ಗೆದ್ದರೆ ಸಿಂಗ್‌ರಾಜ್ ಶೂಟಿಂಗ್‌ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳ ವಿವರ:

1. ಭವೀನಾಬೆನ್ ಪಟೇಲ್- ಬೆಳ್ಳಿ ಪದಕ- ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ C4
2. ನಿಶಾದ್ ಕುಮಾರ್ - ಬೆಳ್ಳಿ ಪದಕ - ಪುರುಷರ ಹೈಜಂಪ್ ಟಿ 47
3. ಅವನಿ ಲೇಖರ - ಚಿನ್ನದ ಪದಕ - ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1
4. ದೇವೇಂದ್ರ ಝಝಾರಿಯಾ - ಬೆಳ್ಳಿ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
5. ಸುಂದರ್ ಸಿಂಗ್ ಗುರ್ಜಾರ್ - ಕಂಚಿನ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
6. ಯೋಗೀಶ್ ಕಠುನಿಯಾ - ಬೆಳ್ಳಿ ಪದಕ - ಪುರುಷರ ಡಿಸ್ಕಸ್ ಥ್ರೋ ಎಫ್ 56
7. ಸುಮಿತ್ ಆಂಟಿಲ್ - ಚಿನ್ನದ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 64
8. ಸಿಂಗರಾಜ್ ಅಧಾನ - ಕಂಚಿನ ಪದಕ - ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಎಸ್‌ಎಚ್ 1
9. ಮರಿಯಪ್ಪನ್ ತಂಗವೇಲು - ಬೆಳ್ಳಿ ಪದಕ - ಪುರುಷರ ಹೈ ಜಂಪ್ ಟಿ 42
10. ಶರದ್ ಕುಮಾರ್ - ಕಂಚಿನ ಪದಕ - ಪುರುಷರ ಹೈಜಂಪ್ ಟಿ 42
11. ಪ್ರವೀಣ್ ಕುಮಾರ್ - ಬೆಳ್ಳಿ ಪದಕ - ಪುರುಷರ ಎತ್ತರ ಜಿಗಿತ ಟಿ 64
12. ಅವನಿ ಲೇಖರ - ಕಂಚಿನ ಪದಕ - ಮಹಿಳೆಯರ 50 ಮೀ ರೈಫಲ್ ಎಸ್‌ಹೆಚ್ 1
13. ಹರ್ವಿಂದರ್ ಸಿಂಗ್‌- ಕಂಚಿನ ಪದಕ- ಪುರುಷರ ಆರ್ಚರಿ ಸಿಂಗಲ್ಸ್ ರಿಕ್ಯೂರ್ವ್
14. ಮನೀಷ್ ನರ್ವಾಲ್ - ಚಿನ್ನದ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
15. ಸಿಂಗ್‌ರಾಜ್ - ಬೆಳ್ಳಿ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
14. ಮನೀಷ್ ನರ್ವಾಲ್ - ಚಿನ್ನದ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
16. ಸಿಂಗ್‌ರಾಜ್ - ಬೆಳ್ಳಿ ಪದಕ - ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆ
17. ಪ್ರಮೋದ್ ಭಗತ್- ಬೆಳ್ಳಿ ಪದಕ - ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್-3 ವಿಭಾಗ
18. ಸುಹಾಸ್ ಯತಿರಾಜ್- ಬೆಳ್ಳಿ ಪದಕ- ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗ
19. ಕೃಷ್ಣ ನಗರ್- ಚಿನ್ನದ ಪದಕ- ಪುರುಷರ ಬ್ಯಾಡ್ಮಿಂಟನ್ ಎಸ್‌ಹೆಚ್ 6 ವಿಭಾಗ

Story first published: Monday, September 6, 2021, 10:37 [IST]
Other articles published on Sep 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+