ಟೋಕಿಯೋ ಪ್ಯಾರಾಲಿಂಪಿಕ್ಸ್: ಕಂಚಿನ ಪದಕ ಗೆದ್ದು ಇತಿಹಾಸ ಬರೆದ ಹರ್ವಿಂದರ್ ಸಿಂಗ್

ಟೋಕಿಯೋ, ಸೆಪ್ಟೆಂಬರ್ 3: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಆರ್ಚರ್ ಹರ್ವಿಂದರ್ ಸಿಂಗ್ ಪುರುಷರ ವೈಕ್ತಿಕ ರಿಕ್ಯೂರ್ವ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಇದು ಆರ್ಚರಿ ವಿಭಾಗದಲ್ಲಿ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಮೊದಲ ಪದಕವಾಗಿದೆ. ದಕ್ಷಿಣ ಕೊರಿಯಾದ ಮಿನ್ ಸು ಕಿಮ್ ವಿರುದ್ಧದ ಪಂದ್ಯದಲ್ಲಿ 6-5 ಅಂತರದಿಮದ ಗೆಲುವು ಸಾಧಿಸುವ ಮೂಲಕ ಹರ್ವಿಂದರ್ ಸಿಂಗ್ ಪದಕ ಗೆದ್ದು ಬೀಗಿದ್ದಾರೆ.
ಕಂಚಿನ ಪದಕ್ಕಾಗಿ ನಡೆದ ಕಾದಾಟದಲ್ಲಿ ಹರ್ವಿಂದರ್ ಸಿಂಗ್ ಅದ್ಭುತವಾದ ಆರಂಭವನ್ನು ಪಡೆದರು. 10, 7, 9 ಅಂಕಗಳಿಗೆ ಹರ್ವಿಂದರ್ ಗುರಿಯಿಟ್ಟರು. ಇದಕ್ಕೆ ಪ್ರತಿಯಾಗಿ ಎದುರಾಳಿ ಮಿನ್ ಸು ಕಿಮ್ 9, 6, 9 ಅಂಕಗಳನ್ನು ಸಂಪಾದಿಸಿದರು. ಈ ಮೂಲಕ ಮೊದಲ ಸೆಟ್‌ನಲ್ಲಿ ಕಿಮ್ ವಿರುದ್ಧ ಮುನ್ನಡೆ ಪಡೆದರು. ಆದರೆ ಎರಡನೇ ಸುತ್ತಿನಲ್ಲಿ ದಕ್ಷಿಣ ಕೊರೊಯಾದ ಆಟಗಾರ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದರು. ಎರಡನೇ ಸುತ್ತಿನಲ್ಲಿ 29 ಅಂಕಗಳನ್ನು ಪಡೆದಿದ್ದಾರೆ ಹರ್ವಿಂದರ್ ಸಿಂಗ್.
ಮೂರನೇ ಸುತ್ತಿನಲ್ಲಿ ಭಾರತದ ಹರ್ವಿಂದರ್ ಸಿಂಗ್ ಮತ್ತೊಮ್ಮೆ ಮೇಲುಗೈ ಸಾಧಿಸಿದರು. ಮೂರನೇ ಸೆಟ್‌ನಲ್ಲಿ ಹರ್ವಿಂದರ್ 28-25 ಅಂಕಗಳನ್ನು ಪಡೆದುಕೊಳ್ಳುವ ಮುನ್ನಡೆ ಸಾಧಿಸಿದರು. ಆದರೆ ನಾಲ್ಕನೇ ಸುತ್ತಿನಲ್ಲಿ ಎರಡು ಆಟಗಾರರು ಕೂಡ ಸಮಬಲವನ್ನು ಸಾಧಿಸುವ ಮೂಲಕ ಸ್ಪರ್ಧೆ ನಿರ್ಣಾಯಕ ಸುತ್ತನ್ನು ಪ್ರವೇಶಿಸಿತ್ತು. ರೋಚಕವಾಗಿ ಸಾಗಿದ ಈ ನಿರ್ಣಾಯಕ ಸುತ್ತಿನಲ್ಲಿ ಅಂತಿಮ ಅವಕಾಶದಲ್ಲಿ ಹರ್ವಿಂದರ್ 10 ಅಂಕಕ್ಕೆ ಗುರಿಯಿಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಕೊರಿಯಾದ ಆಟಗಾರ 8 ಅಂಕವನ್ನು ಗಳಿಸಿದರು. ಈ ಮೂಲಕ ಕಂಚಿನ ಪದಕವನ್ನು ಹರ್ವಿಂದರ್ ಖಚಿತಪಡಿಸಿದರು.
ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಅಮೆರಿಕಾದ ಕೆವಿನ್ ಮ್ಯಾಥರ್ ವಿರುದ್ಧ ಹರ್ವಿಂದರ್ ಸಿಂಗ್ 6-4 ಅಂತರದಿಂದ ಸೋಲು ಕಂಡಿದ್ದರು. ಈ ಮೂಲಕ ಫೈನಲ್‌ಗೆ ಪ್ರವೇಶ ಪಡೆದು ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಆದರೆ ಹರ್ವಿಂದರ್ ಸಿಂಗ್ ಪ್ಲೇಆಫ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 13ನೇ ಪದಕವನ್ನು ಗೆದ್ದಂತಾಗಿದೆ. ಇದರಲ್ಲಿ 2 ಚಿನ್ನದ ಪದಕಗಳು ಸಹ ಸೇರಿವೆ. ಈ ಸ್ಪರ್ಧೆಯಲ್ಲಿ ಭಾರತದ ಪರ ಪದಕ ಗೆದ್ದಿರುವ ಕ್ರೀಡಾಪಟುಗಳ ವಿವರ ಈ ಕೆಳಗಿನಂತಿದೆ..
1. ಭವೀನಾಬೆನ್ ಪಟೇಲ್- ಬೆಳ್ಳಿ ಪದಕ- ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ C4
2. ನಿಶಾದ್ ಕುಮಾರ್ - ಬೆಳ್ಳಿ ಪದಕ - ಪುರುಷರ ಹೈಜಂಪ್ ಟಿ 47
3. ಅವನಿ ಲೇಖರ - ಚಿನ್ನದ ಪದಕ - ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1
4. ದೇವೇಂದ್ರ ಝಝಾರಿಯಾ - ಬೆಳ್ಳಿ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
5. ಸುಂದರ್ ಸಿಂಗ್ ಗುರ್ಜಾರ್ - ಕಂಚಿನ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
6. ಯೋಗೀಶ್ ಕಠುನಿಯಾ - ಬೆಳ್ಳಿ ಪದಕ - ಪುರುಷರ ಡಿಸ್ಕಸ್ ಥ್ರೋ ಎಫ್ 56
7. ಸುಮಿತ್ ಆಂಟಿಲ್ - ಚಿನ್ನದ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 64
8. ಸಿಂಗರಾಜ್ ಅಧಾನ - ಕಂಚಿನ ಪದಕ - ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಎಸ್‌ಎಚ್ 1
9. ಮರಿಯಪ್ಪನ್ ತಂಗವೇಲು - ಬೆಳ್ಳಿ ಪದಕ - ಪುರುಷರ ಹೈ ಜಂಪ್ ಟಿ 42
10. ಶರದ್ ಕುಮಾರ್ - ಕಂಚಿನ ಪದಕ - ಪುರುಷರ ಹೈಜಂಪ್ ಟಿ 42
11. ಪ್ರವೀಣ್ ಕುಮಾರ್ - ಬೆಳ್ಳಿ ಪದಕ - ಪುರುಷರ ಎತ್ತರ ಜಿಗಿತ ಟಿ 64
12. ಅವನಿ ಲೇಖರ - ಕಂಚಿನ ಪದಕ - ಮಹಿಳೆಯರ 50 ಮೀ ರೈಫಲ್ ಎಸ್‌ಹೆಚ್ 1
13. ಹರ್ವಿಂದರ್ ಸಿಂಗ್- ಕಂಚಿನ ಪದಕ- ಪುರುಷರ ಆರ್ಚರಿ ಸಿಂಗಲ್ಸ್ ರಿಕ್ಯೂರ್ವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications