For Quick Alerts
ALLOW NOTIFICATIONS  
For Daily Alerts

ಟೋಕಿಯೋ ಪ್ಯಾರಾಲಿಂಪಿಕ್ಸ್: ಟೇಬಲ್ ಟೆನಿಸ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಭವೀನಾಬೆನ್ ಪಟೇಲ್

Tokyo Paralympics: Indian athlete Bhavinaben Patel reaches table tennis quarter-finals

ಟೋಕಿಯೋ, ಆಗಸ್ಟ್ 27: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಬ್ರೆಜಿಲ್‌ನ ಜೋಯ್ಸ್ ಡಿ ಒಲಿವೈರಾ ವಿರುದ್ಧ 3-0 ಅಂತರದಿಮದ ಗೆಲುವು ಸಾಧಿಸಿ ಭವೀನಾಬೆನ್ ಪಟೇಲ್ ಅಂತಿಮ 8ರ ಘಟ್ಟವನ್ನು ಪ್ರವೇಶಿಸಿದ್ದಾರೆ.

16ರ ಘಟ್ಟದ ಪಂದ್ಯದಲ್ಲಿ ಭವೀನಾ ಬೆನ್ ಪಟೇಲ್ 23 ನಿಮಿಷಗಳಲ್ಲಿ ಎದುರಾಳಿ ಜೋಯ್ಸ್ ಡಿ ಒಲಿವೈರಾ ವಿರುದ್ಧ ಗೆಲುವು ಸಾಧಿಸಿದ್ದಾರೆ. 12-10, 13-11, 11-6 ಅಂತರದಿಂದ ಗೆಲುವು ಸಾಧಿಸಿದರು. ಈ ಮೂಲಕ ಕ್ವಾರ್ಟರ್‌ಫೈನಲ್‌ಗೆ ತಲಿಪಿದ್ದಾರೆ.

ಇನ್ನು ಕ್ವಾರ್ಟರ್‌ಫೂನಲ್ ಹಂತದಲ್ಲಿ ಭವೀನಾಬೆನ್ ಪಟೇಲ್‌ಗೆ ಕಠಿಣ ಸವಾಲು ಎದುರಾಗಲಿದೆ. ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಸರ್ಬಿಯಾದ ಬೊರಿಸ್ಲೇವಾ ಪೆರಿಕ್ ರಾಂಕೋವಿಕ್ ವಿರುದ್ಧ ಹೋರಾಟ ನಡೆಸಲಿದ್ದಾರೆ. ಈ ಪಂದ್ಯ ಶುಕ್ರವಾರ ನಡೆಯಲಿದೆ.

ನನ್ನ ತಂತ್ರ ಎದುರಾಳಿಯ ದೇಹದ ಕಡೆಗೆ ಹೆಚ್ಚು ಗುರುಯಾಗಿಸಿರುವುದಾಗಿತ್ತು. ನನ್ನ ತರಬೇತುದಾರ ಇದನ್ನೇ ತಿಳಿಸಿದ್ದರು. ನಾನು ಈ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇನೆ "ಎಂದು ಪಂದ್ಯದ ನಂತರ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮುಂದಿನ ಸವಾಲಿನ ಬಗ್ಗೆಯೂ ಪಟೇಲ್ ಪ್ರತಿಕ್ರಿಯಿಸಿದ್ದು "ನನ್ನ ಮುಂದಿನ ಎದುರಾಳಿ ವಿಶ್ವದ ನಂಬರ್ 2 ಆಟಗಾರ್ತಿ. ಹೀಗಾಗಿ ನಾನು ನನ್ನ ಆಟದ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಿದೆ. ಪಂದ್ಯವನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದೇನೆ" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಪವರ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸಕೀನಾ ಖತುನ್ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಏಶ್ಯನ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತೆ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನ ಕಂಚಿನ ಪದಕ ವಿಜೇತೆಯಾಗಿರುವ ಸಕೀನಾ ಮೊದಲ ಪ್ರಯತ್ನದಲ್ಲಿ 90 ಕೆಜಿ ಭಾರವನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದರು. ಅದರೆ ನಂತರದ ಪ್ರಯತ್ನಗಳಲ್ಲಿ ಇದಕ್ಕೆಂತ ಹೆಚ್ಚಿನ ಭಾರ ಎತ್ತುವಲ್ಲಿ ಅವರು ವಿಫಲವಾದರು.

ಈ ವಿಭಾಗದಲ್ಲಿ ಚೀನಾದ ಪವರ್‌ಲಿಫ್ಟರ್ ಹು ಡಂಡನ್ 120 ಕೆಜಿ ಭಾರವನ್ನು ಎತ್ತುವ ಮೂಲಕ ಚಿನ್ನದ ಪ್ಕ ಗೆದ್ದುಕೊಂಡಿದ್ದಾರೆ. ಈಜಿಫ್ಟ್‌ನ ರಿಹಾಬ್ ಅಹ್ಮದ್ ಬೆಳ್ಳಿಯ ಪದಕಲ ಗೆದ್ದುಕೊಂಡಿದ್ದಾರೆ. ಗ್ರೇಟ್‌ ಬ್ರಿಟನ್‌ನ ಒಲಿವಿಯಾ ಬ್ರೂಮ್ ಈ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

Story first published: Friday, August 27, 2021, 13:10 [IST]
Other articles published on Aug 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+