ಪ್ಯಾರಾಲಂಪಿಕ್ಸ್: ರಜತ ಗೆದ್ದ ಪ್ರವೀಣ್ ಕುಮಾರ್; 11ಕ್ಕೇರಿದ ಪದಕಗಳ ಸಂಖ್ಯೆ

ಟೋಕಿಯೋ, ಸೆಪ್ಟೆಂಬರ್ 3: ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 11ಕ್ಕೆ ಏರಿಕೆ ಕಂಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶುಕ್ರವಾರ ( ಸೆಪ್ಟೆಂಬರ್ 3 ) ಮುಂಜಾನೆ ನಡೆದ ಟಿ64 ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟು ಪ್ರವೀಣ್ ಕುಮಾರ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವದ ಅತ್ಯುತ್ತಮ ಹೈಜಂಪ್ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವ ಪ್ರವೀಣ್ ಕುಮಾರ್ 2.07 ಮೀಟರ್ ಹೈಜಂಪ್ ಮಾಡುವುದರ ಮೂಲಕ ಭಾರತಕ್ಕೆ ಹನ್ನೊಂದನೇ ಪದಕವನ್ನು ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಂದುಕೊಟ್ಟಿದ್ದಾರೆ.
ಸದ್ಯ ಭಾರತಕ್ಕೆ ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೊಂದು ಪದಕವನ್ನು ತಂದು ಕೊಟ್ಟಿರುವ 18 ವರ್ಷದ ಕ್ರೀಡಾಪಟು ಪ್ರವೀಣ್ ಕುಮಾರ್ ಅವರಿಗೆ ಸಾಮಾಜಿಕ ಜಾಲತಾಣದ ತುಂಬಾ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಭಾರತದ ಹಲವಾರು ಮಾಜಿ ಕ್ರಿಕೆಟಿಗರು ಕ್ರೀಡಾಪಟುಗಳು ಹಾಗೂ ಸಾಮಾನ್ಯ ಜನರು ಕೂಡ ಪ್ರವೀಣ್ ಕುಮಾರ್ ಸಾಧನೆಗೆ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ಪುರುಷರ ಟಿ 64 ಹೈಜಂಪ್ ಫೈನಲ್ ಸುತ್ತಿನಲ್ಲಿ ಭಾಗವಹಿಸಿದ್ದ ಭಾರತದ ಪ್ರವೀಣ್ ಕುಮಾರ್ 2.07 ಮೀಟರ್ ಸಾಧನೆ ಮಾಡುವುದರ ಮೂಲಕ ಏಷ್ಯನ್ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಹೀಗೆ ಫೈನಲ್ ಸುತ್ತಿನಲ್ಲಿ ಭಾರತದ ಪ್ರವೀಣ್ ಕುಮಾರ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ರಜತ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದೇ ಸುತ್ತಿನಲ್ಲಿ ಭಾಗವಹಿಸಿದ್ದ ಗ್ರೇಟ್ ಬ್ರಿಟನ್ ದೇಶದ ಕ್ರೀಡಾ ಪಟು ಜೋನಾಥನ್ ಬ್ರೂಮ್ ಎಡ್ವರ್ಡ್ಸ್ 2.10 ಮೀಟರ್ ಹೈಜಂಪ್ ಮಾಡುವುದರ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಭಾರತದ ಪ್ಯಾರಾಥ್ಲೀಟ್ ಪ್ರವೀಣ್ ಕುಮಾರ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಹೀಗೆ ಭಾಗವಹಿಸಿದ ಮೊದಲನೇ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಪ್ರವೀಣ್ ಕುಮಾರ್ ಸ್ಪರ್ಧೆ ಮುಗಿದ ನಂತರ ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಫೈನಲ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು ನಂತರ ಮಾತನಾಡಿದ ಪ್ಯಾರಾಥ್ಲೀಟ್ ಪ್ರವೀಣ್ ಕುಮಾರ್ ತನಗೆ ಯಾವ ರೀತಿಯ ಅನುಭವ ಆಗುತ್ತಿದೆ ಮತ್ತು ಎಷ್ಟರ ಮಟ್ಟಿಗೆ ಖುಷಿ ಆಗುತ್ತಿದೆ ಎಂಬುದನ್ನು ಹೇಳಿಕೊಳ್ಳಲು ಆಗುತ್ತಿಲ್ಲ, ಇದು ತನ್ನ ಮೊದಲನೇ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಮುಂದಿನ ದಿನಗಳಲ್ಲಿ ಇನ್ನೂ ಯಾವ ಯಾವ ಸ್ಪರ್ಧೆಗಳು ಎದುರಾಗಲಿವೆಯೋ ಅವುಗಳಿಗೆ ಕಾಯುತ್ತಾ ಇದ್ದೇನೆ ಎಂದು ಪ್ರವೀಣ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 11 ಪದಕಗಳನ್ನು ಗೆದ್ದಿದ್ದು ಇದರಲ್ಲಿ 2 ಚಿನ್ನದ ಪದಕಗಳು ಸಹ ಸೇರಿವೆ. ಈ ಸ್ಪರ್ಧೆಯಲ್ಲಿ ಭಾರತದ ಪರ ಪದಕ ಗೆದ್ದಿರುವ ಕ್ರೀಡಾಪಟುಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ..
1. ಭಾವಿನ ಪಟೇಲ್ - ಬೆಳ್ಳಿ ಪದಕ - ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ C4
2. ನಿಶಾದ್ ಕುಮಾರ್ - ಬೆಳ್ಳಿ ಪದಕ - ಪುರುಷರ ಹೈಜಂಪ್ ಟಿ 47
3. ಅವನಿ ಲೇಖರ - ಚಿನ್ನದ ಪದಕ - ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1
4. ದೇವೇಂದ್ರ ಜಜಾರಿಯಾ - ಬೆಳ್ಳಿ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
5. ಸುಂದರ್ ಸಿಂಗ್ ಗುರ್ಜಾರ್ - ಕಂಚಿನ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46
6. ಯೋಗೀಶ್ ಕಠುನಿಯಾ - ಬೆಳ್ಳಿ ಪದಕ - ಪುರುಷರ ಡಿಸ್ಕಸ್ ಥ್ರೋ ಎಫ್ 56
7. ಸುಮಿತ್ ಆಂಟಿಲ್ - ಚಿನ್ನದ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 64
8. ಸಿಂಗರಾಜ್ ಅಧಾನ - ಕಂಚಿನ ಪದಕ - ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಎಸ್ ಎಚ್ 1
9. ಮರಿಯಪ್ಪನ್ ತಂಗವೇಲು - ಬೆಳ್ಳಿ ಪದಕ - ಪುರುಷರ ಹೈ ಜಂಪ್ ಟಿ 42
10. ಶರದ್ ಕುಮಾರ್ - ಕಂಚಿನ ಪದಕ - ಪುರುಷರ ಹೈಜಂಪ್ ಟಿ 42
11. ಪ್ರವೀಣ್ ಕುಮಾರ್ - ಬೆಳ್ಳಿ ಪದಕ - ಪುರುಷರ ಎತ್ತರ ಜಿಗಿತ ಟಿ 64
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications