ಟೋಕಿಯೋ ಪ್ಯಾರಾಲಿಂಪಿಕ್ಸ್: ಶಟ್ಲರ್ ಪ್ರಮೋದ್ ಭಗತ್‌ಗೆ ಬಂಗಾರದ ಪದಕ

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪ್ರಮೋದ್ ಭಗತ್ ಬಂಗಾರ ಗೆದ್ದಿದ್ದಾರೆ. ಶನಿವಾರ (ಸೆಪ್ಟೆಂಬರ್ 4) ನಡೆದ ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್-3 ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಮೋದ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಸೋಲಿಸಿ ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಇದು ಭಾರತಕ್ಕೆ ಕ್ರೀಡಾಕೂಟದಲ್ಲಿ ಲಭಿಸುತ್ತಿರುವ ನಾಲ್ಕನೇ ಬಂಗಾರದ ಪದಕ.
ಫೈನಲ್ ಪಂದ್ಯದಲ್ಲಿ ಪ್ರಮೋದ್ ಭಗತ್ ಅವರು ಎದುರಾಳಿ ಡೇನಿಯಲ್ ಬೆಥೆಲ್ ಅವರನ್ನು 21-14, 21-17ರ ಅಂತರದಿಂದ ಸೋಲಿಸಿದ್ದಾರೆ. ಭಾರತದ ಪದಕ ಪಟ್ಟಿಯಲ್ಲಿ ಈಗ ಒಟ್ಟು 17 ಪದಕಗಳಿಗೆ. ಇದರಲ್ಲಿ 4 ಬಂಗಾರ, 7 ಬೆಳ್ಳಿ, 6 ಕಂಚಿನ ಪದಕಗಳು ಸೇರಿವೆ.
ಪ್ಯಾರಾ ಬ್ಯಾಡ್ಮಿಂಟನ್ ರ್‍ಯಾಂಕಿಂಗ್‌ನಲ್ಲಿ ಸದ್ಯ ವಿಶ್ವ ನಂ.1 ಸ್ಥಾನದಲ್ಲಿರುವ ಪ್ರಮೋದ್, ಎಸ್‌ಎಲ್-3 ಕ್ಲಾಸ್ ಮೊದಲ ಸೆಮಿಫೈನಲ್ ಸ್ಪರ್ಧೆಯಲ್ಲಿ ಜಪಾನ್‌ನ ಡೈಸುಕೆ ಫುಜಿಹಾರ ವಿರುದ್ಧ 21-11 21-16ರ ಜಯ ಗಳಿಸಿದ್ದರು. ಇಬ್ಬರ ನಡುವಿನ ಪಂದ್ಯ 36 ನಿಮಿಷಗಳಲ್ಲಿ ಕೊನೆಯಾಗಿತ್ತು.
ಭಾರತಕ್ಕೆ ಸಿಕ್ಕ ಪದಕಗಳ ಪಟ್ಟಿ
ಮಹಿಳಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭವಿನಾಬೆನ್ ಪಟೇಲ್ ಬೆಳ್ಳಿ, ಪುರುಷರ ಹೈ ಜಂಪ್ ಸ್ಪರ್ಧೆಯಲ್ಲಿ ನಿಶಾದ್ ಕುಮಾರ್ ಬೆಳ್ಳಿ, ಮಹಿಳಾ 10 ಮೀಟರ್ ಏರ್ ರೈಫಲ್‌ನಲ್ಲಿ ಅವನಿ ಲೇಖರ ಬಂಗಾರ, ಪುರುಷರ ಜಾವೆಲಿನ್ ಥ್ರೋನಲ್ಲಿ ದೇವೇಂದ್ರ ಝಝಾರಿಯಾ ಬೆಳ್ಳಿ, ಪುರುಷರ ಜಾವೆಲಿನ್ ಥ್ರೋನಲ್ಲಿ ಸುಂದರ್ ಸಿಂಗ್ ಗುರ್ಜರ್ ಕಂಚು, ಪುರುಷರ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥುನಿಯಾಗೆ ಬೆಳ್ಳಿ, ಪುರುಷರ ಜಾವೆಲಿನ್ ಥ್ರೋನಲ್ಲಿ ಸುಮಿತ್ ಅಂತಿಲ್‌ಗೆ ಬಂಗಾರ, ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಸಿಂಗ್‌ರಾಜ್ ಅಧಾನ ಕಂಚು, ಪುರುಷರ ಹೈಜಂಪ್‌ನಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ, ಪುರುಷರ ಹೈ ಜಂಪ್‌ನಲ್ಲಿ ಶರದ್ ಕುಮಾರ್‌ಗೆ ಕಂಚು, ಪುರುಷರ ಹೈಜಂಪ್‌ನಲ್ಲಿ ಪ್ರವೀಣ್ ಕುಮಾರ್‌ಗೆ ಬೆಳ್ಳಿ, ಮಹಿಳಾ 50 ಮೀಟರ್ ರೈಫಲ್ ತ್ರಿ ಪೊಸಿಶನ್‌ನಲ್ಲಿ ಅವನಿ ಲೇಖರ ಕಂಚು, ಪುರುಷರ ಆರ್ಚರಿಯಲ್ಲಿ ಹರ್ವೀಂದರ್ ಸಿಂಗ್‌ಗೆ ಕಂಚಿನ ಪದಕಗಳು ಸಿಕ್ಕಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications