Tokyo Paralympics: ಆರಂಭೋತ್ಸವದಲ್ಲಿ ದೇಶಿ ತಂಡ ಮುನ್ನಡೆಸಿದ ಟೆಕ್ ಚಂದ್

ಟೋಕಿಯೋ: ಜಪಾನ್‌ನ ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆರಂಭೋತ್ಸವದಲ್ಲಿ ಭಾರತದ ಅಥ್ಲೀಟ್ ಟೆಕ್ ಚಂದ್ ಭಾರತದ ತ್ರಿವರ್ಣ ಧ್ವಜ ಹಿಡಿದು ದೇಶಿ ತಂಡವನ್ನು ಮುನ್ನಡೆಸಿದ್ದಾರೆ. ಜಪಾನ್ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭ ಆಗಸ್ಟ್ 24ರ ಮಂಗಳವಾರ ನಡೆದಿದೆ.
ಅಸಲಿಗೆ ಉದ್ಘಾಟನಾ ಸಮಾರಂಭದಲ್ಲಿ ಪ್ಯಾರಾಲಂಪಿಕ್ಸ್ ಬಂಗಾರದ ಪದಕ ವಿಜೇತ ಮರಿಯಪ್ಪನ್ ತಾಂಗವೇಲು ಭಾರತದ ತ್ರಿವರ್ಣ ಧ್ವಜ ಹಿಡಿದು ತಂಡ ಮುನ್ನಡೆಸಬೇಕಿತ್ತು. ಆದರೆ ತಾಂಗವೇಲು ಕ್ವಾರಂಟೈನ್ ಪಾಲಿಸುತ್ತಿರುವುದರಿಂದ ತಂಡ ಮುನ್ನಡೆಸುವ ಜವಾಬ್ದಾರಿ ಟೆಕ್ ಚಂದ್ ಹೊತ್ತುಕೊಂಡಿದ್ದರು.
ಟೋಕಿಯೋಗೆ ಪ್ರಯಾಣಿಸುವ ವೇಳೆ ವಿಮಾನದಲ್ಲಿ ತಾಂಗವೇಲು ಅವರು ಕೋವಿಡ್ ಸೋಂಕಿತ ವಿದೇಶಿ ಪ್ರಯಾಣಿಕನನ್ನು ಸಂಪರ್ಕಿಸಿದ್ದರು. ಹೀಗಾಗಿ ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಆದರೆ ತಾಂಗವೇಲು ಅವರಿಗೆ ಈವರೆಗೆ ಮಾಡಲಾದ ಎಲ್ಲಾ ಪರೀಕ್ಷೆಗಳ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದು ಬಂದಿದೆ.
ಟೋಕಿಯೋ ಒಲಿಂಪಿಕ್ಸ್ ಮುಕ್ತಾಯಗೊಂಡು ಎರಡು ವಾರಗಳ ಬಳಿಕ ಟೋಕಿಯದಲ್ಲಿ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳುತ್ತಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಒಟ್ಟು 54 ಸ್ಪರ್ಧಿಗಳು 9 ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಶೂಟಿಂಗ್, ಪ್ಯಾರಾ ಆರ್ಚರಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳ ಭರವಸೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications