ಮೈಸೂರಲ್ಲಿ ಟೂರ್ ಆಫ್ ನೀಲಗಿರೀಸ್ ಸೈಕಲ್ ಯಾತ್ರೆಗೆ ಚಾಲನೆ
ಮೈಸೂರು, ಡಿಸೆಂಬರ್ 8: ರೈಡ್ ಎ ಸೈಕಲ್ ಫೌಂಡೇಷನ್ (ಆರ್‍ಎಸಿ-ಎಫ್) ಆಯೋಜಿಸಿರುವ ಭಾರತದ ಅತ್ಯಂತ ದೊಡ್ಡ ಹಾಗೂ ಪ್ರೀತಿಪಾತ್ರವಾದ ಸೈಕಲ್ ಯಾತ್ರೆ ಟೂರ್ ಆಫ್ ನೀಲಗಿರೀಸ್ (ಟಿನ್‍ಎಫ್‍ಎನ್)ಗೆ ಇಂದು ಮೈಸೂರಿನ ಸೆಂಟ್ರಲ್ ಹೆರಾಲ್ಡ್‍ನಲ್ಲಿ ಚಾಲನೆ ನೀಡಲಾಯಿತು.
ಮೈಸೂರಿನಿಂದ ಆರಂಭಿಸಿ ಸೈಕ್ಲಿಸ್ಟ್ ಗಳು ಹಾಸನ, ಚಿಕ್ಕಮಗಳೂರು, ಕುಶಾಲನಗರ, ಸುಲ್ತಾನ್ ಬತ್ತೇರಿ, ಉದಕಮಂಡಲಂ (ಊಟಿ) ಮೂಲಕ ಯಾತ್ರೆ ಕೈಗೊಂಡು ಡಿಸೆಂಬರ್ 15ಕ್ಕೆ ಮೈಸೂರಿಗೆ ಮರಳಲಿದ್ದಾರೆ.
ಮೊದಲ ದಿನ ಸೈಕ್ಲಿಸ್ಟ್ ಗಳು131 ಕಿಲೋಮೀಟರ್ ಸವಾರಿ ಕೈಗೊಂಡು ಕೆ.ಆರ್.ನಗರ, ಹೊಳೆನರಸೀಪುರ ಮೂಲಕ ಹಾಸನಕ್ಕೆ ಆಗಮಿಸಲಿದ್ದಾರೆ. ರಾತ್ರಿ ಹಾಸನದಲ್ಲಿ ವಾಸ್ತವ್ಯ ಹೂಡಿ 2ನೇ ದಿನ ಚಿಕ್ಕಮಗಳೂರಿಗೆ 118 ಕಿಲೋಮೀಟರ್ ಯಾತ್ರೆ ಕೈಗೊಳ್ಳುವರು. ಎಂಟನೇ ದಿನ ಸೈಕ್ಲಿಸ್ಟ್ ಗಳು ಇಡೀ ಸವಾರಿ ಪೂರ್ಣಗೊಳಿಸಿ ಊಟಿಯಿಂದ 90 ಕಿಲೋಮೀಟರ್ ಅಂತರ ಕ್ರಮಿಸಿ ಮೈಸೂರಿಗೆ ಮರಳುವರು.

ಆರ್‍ಎಸಿ-ಎಫ್ ಸಹಸಂಸ್ಥಾಪಕ ದೀಪಕ್
ಆರ್‍ಎಸಿ-ಎಫ್ ಸಹಸಂಸ್ಥಾಪಕ ದೀಪಕ್ ಮಾಜಿಪಾಟೀಲ್ ಅವರು ಹೇಳುವಂತೆ, "ಅತ್ಯುತ್ತಮ ಸೈಕ್ಲಿಸ್ಟ್ ಗಳನ್ನು ಆಕರ್ಷಿಸುವ ಮತ್ತು ಉತ್ತಮ ಸ್ವಯಂಸೇವಾ ಬೆಂಬಲ ಪಡೆಯುವ ಉತ್ತಮ ಅದೃಷ್ಟ ನಮ್ಮದಾಗಿದೆ. ಇದರಿಂದಾಗಿ ನಾವು ಇಂಥ ವೃತ್ತಿಪರ ಯಾತ್ರೆ ಸಂಘಟಿಸುವುದು ಸಾಧ್ಯವಾಗಿದೆ. ಸೈಕಲ್ ಸವಾರರು ದೇಶದ ಅತ್ಯಂತ ಶ್ರೇಷ್ಠ ಪರಿಸರ ಮತ್ತು ಸವಾಲುದಾಯಕ ಅನುಭವವನ್ನು ಪಡೆಯಲಿದ್ದು, ಇದು ಅವರ ಇತಿಮಿತಿಗಳಿಗೆ ಪರೀಕ್ಷೆಯಾಗಿದೆ"
ಉತ್ತಮ ಸಾಮಾಜಿಕ ಕಾರಣಕ್ಕೆ ಬದ್ಧತೆಯ ಅಂಗವಾಗಿ ಸೈಕಲ್ ಸವಾರರು ಎಲ್ಲ ಆವೃತ್ತಿಗಳಲ್ಲೂ ನಿಧಿ ಸಂಗ್ರಹಿಸಿದ್ದು, ಇದಕ್ಕೆ 12ನೇ ಆವೃತ್ತಿ ಕೂಡಾ ಹೊರತಾಗಿಲ್ಲ. ಈ ಆವೃತ್ತಿಯಲ್ಲಿ ಇಕ್ಷಾ ಫೌಂಡೇಷನ್, ಕೆನೆತ್ ಆ್ಯಂಡರ್‍ಸನ್ ನೇಚರ್ ಸೊಸೈಟಿ ಮತ್ತು ಸೀತಾ ಭತೇಜಾ ಸ್ಪೆಷಾಲಿಟಿ ಆಸ್ಪತ್ರೆ ಹೀಗೆ ಮೂರು ಸಾಮಾಜಿಕ ಸಂಸ್ಥೆಗಳ ಸೈಕ್ಲಿಸ್ಟ್ ಗಳು ಸವಾರಿ ಮಾಡುತ್ತಿದ್ದಾರೆ.

ಬ್ರಿಗೇಡಿಯರ್ ರಾಜಾ ಭಟ್ಟಾಚಾರ್‍ಜೀ ಮಾತನಾಡಿ,
ಬ್ರಿಗೇಡಿಯರ್ ರಾಜಾ ಭಟ್ಟಾಚಾರ್‍ಜೀ ಅವರು ಇಷ್ಕಾ ಫೌಂಡೇಷನ್‍ಗೆ ನಿಧಿ ಸಂಗ್ರಹಿಸುವ ಸಲುವಾಗಿ ಸವಾರಿ ಕೈಗೊಳ್ಳುವರು. ರಾಜಾ ಅವರು ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಾಯುತ್ತಿರುವ ಮಕ್ಕಳ ನೆರವಿನ ಕಾರಣಕ್ಕಾಗಿ ನಿಧಿ ಸಂಗ್ರಹ ಮಾಡುವರು. ಈ ನಿಟ್ಟಿನಲ್ಲಿ ರಾಜಾ ಅವರು ಕನಿಷ್ಠ ಆರು ಲಕ್ಷ ರೂಪಾಯಿಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದು, ಇಷ್ಕಾ ಫೌಂಡೇಷನ್ ಮೂಲಕ ಮಗುವಿಗೆ ಹೊಸ ಬೆಳಕು ಕಾಣಿಸುವ ನಿರೀಕ್ಷೆ ಹೊಂದಿದ್ದಾರೆ.

12ನೇ ಆವೃತ್ತಿಯ ಸೈಕಲ್ ಯಾತ್ರೆ
ಟಿಎಫ್‍ಎನ್ ನಿರಂತರವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದು, ಪ್ರತಿ ಆವೃತ್ತಿ ಕೂಡಾ ಹೊಸ ಸೈಕ್ಲಿಸ್ಟ್ ಗಳಿಗೆ ವಿಶೇಷಣೆ ಎನಿಸಿದೆ. ಅದು ಮಾರ್ಗ, ಗಿರಿ ಕಂದಕ, ಭೌಗೋಳಿಕ ಪ್ರದೇಶ ಮತ್ತಿತರ ಅಂಶಗಳ ವಿಶೇಷಣೆಗಳಿಂದ ಕೂಡಿರುತ್ತದೆ. 12ನೇ ಆವೃತ್ತಿಯಲ್ಲಿ 2ನೇ ದಿನ ಸೈಕಲ್ ಸವಾರಿ ಹಾಸನದಿಂದ ಚಿಕ್ಕಮಗಳೂರಿಗೆ ತೆರಳಲಿದೆ. ಇದು ಸವಾರರಿಗೆ ವಿಶಿಷ್ಟ ಮಲೆನಾಡಿನ ಸೊಬಗಿನ ಅಪೂರ್ವ ಅನುಭವವನ್ನು ಉಣಿಸಲಿದೆ. ಟಿಎಫ್‍ಎನ್‍ಗಾಗಿ ಹೊಸ ಮಾರ್ಗವನ್ನು ರೂಪಿಸಲಾಗಿದ್ದು, ಸೈಕ್ಲಿಸ್ಟ್ ಗಳು ಅತ್ಯಪೂರ್ವ ಪ್ರವಾಸಿ ತಾಣಗಳಾದ, ಹೊಯ್ಸಳ ಯುಗದ ಶಿಲ್ಪಕಲೆ ಮತ್ತು ಐತಿಹಾಸಿಕ ಪರಂಪರೆಗೆ ಹೆಸರಾದ ಬೇಲೂರು, ಹಳೇಬೀಡು ಮತ್ತಿತರ ಪ್ರದೇಶಗಳ ಮೂಲಕ ಕ್ರಮಿಸಲಿದ್ದಾರೆ.

ಟಿಎಫ್ ಎನ್ ನಿಂದ ದತ್ತಿ ಕಾರ್ಯ
ಟಿಎಫ್‍ಎನ್‍ನ ಇನ್ನೊಂದು ಪ್ರಮುಖ ಆಯಾಮವೆಂದರೆ, ಸವಾರರು ತಮ್ಮ ಸೈಕಲ್ ತುಳಿಯುವ ಸಂಖ್ಯೆಗೆ ಅನುಗುಣವಾಗಿ ಸಮಾಜಕ್ಕೆ ಕೊಡುಗೆ ನೀಡಲಿದ್ದು, ಟಿಎಫ್‍ಎನ್‍ನಲ್ಲಿ ದತ್ತಿ ಕಾರ್ಯಕ್ಕಾಗಿ ಸವಾರಿ ಮಾಡಲಿದ್ದಾರೆ. ಈ ವರ್ಷ ಚಾರಿಟಿ ಸವಾರರು, ಕೆನ್ನೆತ್ ಆ್ಯಂಡರ್‍ಸನ್, ನೇಚರ್ ಸೊಸೈಟಿ ಮತ್ತು ಸೀತಾ ಬತೇಜಾ ಸ್ಪೆಷಾಲಿಟಿ ಹಾಸ್ಪಿಟಲ್ ಮತ್ತಿತರ ಸಂಘ ಸಂಸ್ಥೆಗಳಿಗೆ ಸೇರಿದವರಾಗಿದ್ದು, ತಮ್ಮ ಆಯಾ ಸಾಮಾಜಿಕ ಕಾರಣಕ್ಕಾಗಿ ನೆರವು ನೀಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications