Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಲ್ಲಂ ಸಾಯ್ ಹಾಸ್ಟೆಲ್‌ನಲ್ಲಿ ಇಬ್ಬರು ಕ್ರೀಡಾಪಟುಗಳ ಆತ್ಮಹತ್ಯೆ

ಕೇರಳದ ಕೊಲ್ಲಂನಲ್ಲಿ ಗುರುವಾರ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನಡೆಸುತ್ತಿರುವ ಹಾಸ್ಟೆಲ್‌ನಲ್ಲಿ ಇಬ್ಬರು ಐಊಔ ಕ್ರೀಡಾಪಟುಗಳ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ಕೋಚಿಕೋಡ್‌ನ ವೈಷ್ಣವಿ (15 ವರ್ಷ), ತಿರುವನಂತಪುರಂನ ಸಂದ್ರಾ ಎಂದು ಗುರುತಿಸಲಾಗಿದೆ.

ಗುರುವಾರ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಈ ದುರಂತ ಬೆಳಕಿಗೆ ಬಂದಿದೆ. ಬಾಲಕಿಯರು ತರಬೇತಿಗೆ ಹಾಜರಾಗದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಕ್ರೀಡಾಪಟುಗಳ ಕೊಠಡಿಗೆ ತೆರಳಿ ಪ್ರವೇಶಿಸಿದ್ದಾರೆ. ಕೋಣೆಯ ಹೊರಗಡೆ ನಿಂತು ಪದೆ ಪದೆ ಕರೆದರೂ ಸಹ ಕ್ರೀಡಾಪಟುಗಳು ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಾಗ, ಸಿಬ್ಬಂದಿಗಳು ಬಾಗಿಲನ್ನು ಒಡೆದು ಒಳಗೆ ಪ್ರಾಲಕಿವೇಶಿಸಿದ್ದಾರೆ. ಆಗ ಬಾಲಕಿಯರಿಬ್ಬರ ಮೃತದೇಹಗಳು ಕಂಡು ಬಂದಿವೆ.

Tragedy in Kerala Two Teenage Athletes Found Dead at SAI Hostel in Kollam

ಮೃತ ಸಾಂಡ್ರಾ ಅವರು 12ನೇ ತರಗತಿಯನ್ನು ಓದುತ್ತಿದ್ದ ಅಥ್ಲೀಟ್‌. ಇನ್ನು ವೈಷ್ಣವಿ 10ನೇ ತರಗತಿ ಓದುತ್ತಿದ್ದು ಕಬಡ್ಡಿ ಆಟಗಾರ್ತಿ. ಇವರಿಬ್ಬರಿಗೂ ಪ್ರತೇಕ ರೂಮ್‌ಗಳನ್ನು ನೀಡಿದ್ದರೂ ಸಹ ಬುಧವಾರ ಕ್ರೀಡಾಪಟುಗಳು ಸಾಂಡ್ರಾ ರೂಮ್‌ನಲ್ಲಿ ಕಳಿದಿದ್ದಾರೆ. ಇದೇ ವೇಳೆ ಸಾಂಡ್ರಾ ತಮ್ಮ ರೂಮ್‌ ಮೇಟ್‌ಗಳನ್ನು ಕೋಣೆ ಬಿಡುವಂತೆ ಸೂಚಿಸಿದ್ದಾರೆ. ಇವರಿಬ್ಬರೂ ಬೆಳಗ್ಗೆಯ 5 ಗಂಟೆಯ ತರಬೇತಿಗೆ ಬಾರದೇ ಇದ್ದಾಗ, ಕೋಠಡಿಗೆ ಹೋಗಿ ಬಾಗಿಲು ಒಡೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇಬ್ಬರೂ ಸಹಿ ಮಾಡಿರುವ ಆತ್ಮಹತ್ಯಾ ಪತ್ರ (ಸುಸೈಡ್‌ ನೋಟ್‌) ಪತ್ತೆಯಾಗಿದೆ. ಈ ಪತ್ರದಲ್ಲಿ ಇಬ್ಬರೂ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಅವರು ತಮ್ಮ ಪೋಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಈ ವಿಷಯದ ಕುರಿತು ಸದ್ಯ ತನಿಖೆ ನಡೆಯುತ್ತಿದೆ. ಈ ಆತ್ಮಹತ್ಯೆಯ ಬಗ್ಗೆ ಮೃತರ ಕುಟುಂಬಸ್ಥರು ಯಾವುದೇ ಅನುಮಾನ, ದೂರುಗಳನ್ನು ನೀಡಿಲ್ಲ.

ಸಾಯ್‌ ಕೇಂದ್ರ

ಈ ಸಾವನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಾವಿನ ತನಿಖೆ ನಡೆದಿದೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸಾವಿನ ತನಿಖೆ ತಿವ್ರಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲಮ್ ಸಾಯ್‌ ಕೇಂದ್ರದ ಉಸ್ತುವಾರಿಯನ್ನು ರಾಜೀವ್ ಥಾಮಸ್‌ ಹೊಂದಿದ್ದಾರೆ. ಈ ಕೇಂದ್ರದಲ್ಲಿ 40 ಕ್ರೀಡಾಪಟುಗಳು ಇದ್ದಾರೆ. ಇದರಲ್ಲಿ ಅಥ್ಲೀಟಿಕ್ಸ್‌, ಹಾಕಿ, ಕಬಡ್ಡಿ ಕ್ರೀಡಾಪಟುಗಳು ಇದ್ದಾರೆ. ಸಾಯ್‌ ಅಧಿಕಾರಿಗಳು ಪೊಲೀಸರ ತನಿಖೆಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ.

Story first published: Friday, January 16, 2026, 15:19 [IST]
Other articles published on Jan 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+