Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೌಂಟ್‌ ಎವರೆಸ್ಟ್‌ ತುದಿಯಲ್ಲೂ ಟ್ರಾಫಿಕ್‌ ಜಾಮ್‌! ಮೂವರು ಭಾರತೀಯರ ಸಾವು

Two Indians die in Mount Everest traffic jam

ಹೊಸದಿಲ್ಲಿ, ಮೇ 24: ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದವರಿಗೇ ಗೊತ್ತು ಅದರ ಹಿಂಸೆ. ಅಂದಹಾಗೆ ಮೌಂಟ್‌ ಎವರೆಸ್ಟ್‌ನ ತುದಿಯಲ್ಲೂ ಟ್ರಾಫಿಕ್‌ ಜಾಮ್‌ ಆಗುತ್ತದೆ ಎಂದರೆ ಅಚ್ಚರಿಯಾಗುವುದು ಖಂಡಿತಾ. ದುರದೃಷ್ಟವಶಾತ್‌ ಎವರೆಸ್ಟ್‌ ತುದಿಯಲ್ಲಿನ ಈ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಬಿದ್ದ ಇಬ್ಬರು ಭಾರತೀಯ ಪರ್ವತಾರೋಹಿಗಳು ಅಸುನೀಗಿದ್ದಾರೆ.

ಭಾರತದ ಅನುಭವಿ ಪರ್ವತಾರೋಹಿ 52 ವರ್ಷದ ಕಲ್ಪನಾ ದಾಸ್‌ ಎಂಬುವವರು ಎಚರೆಸ್ಟ್‌ ತುದಿ ತಲುಪಿದ ನಂತರ ಹಿಂದಿರುಗುವಾಗ ಹತ್ತುವ ಮತ್ತು ಇಳಿಯುವವರ ಸಂಖ್ಯೆ ಹೆಚ್ಚಾಗಿ ಮಾರ್ಗದಲ್ಲೇ 26,247 ಅಡಿಗಳ ಎತ್ತರದ ಸ್ಥಳದಲ್ಲಿ ಗಂಟೆಗಳ ಕಾಲ ಕಾಯುವಂತಾಗಿ ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ ಅಂಜಲಿ ಕುಲಕರ್ಣಿ (55) ಎಂಬುವವರೂ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಇದೇ ಸಂದರ್ಭದಲ್ಲಿ ಪರ್ವತಾರೋಹಣದಲ್ಲಿ ತೊಡಗಿದ್ದ ನೇಪಾಳ ಮೂಲದ ಶೆರ್ಪಾ ಒಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊಗಳನ್ನು ಪ್ರಕಟಿಸಿದ್ದು, ಬುಧವಾರ ಬೆಳಗ್ಗೆ 320ಕ್ಕೂ ಹೆಚ್ಚು ಜನ ಏಕಕಾಲದಲ್ಲಿ ಎವರೆಸ್ಟ್‌ ತುದಿ ತಲುಪಿದರಿಂದ ಭಾರಿ ಟ್ರಾಫಿಕ್‌ ಜಾಮ್‌ ಸಂಭವಿಸಿತ್ತು ಎಂದು ಬರೆದಿದ್ದಾರೆ.

ಇದೇ ವೇಳೆ 27 ವರ್ಷದದ ಭಾರತೀಯ ಯುವಕನೊಬ್ಬ ಕೂಡ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ದಣಿವಿನಿಂದಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇನ್ನು ಮತ್ತೊಬ್ಬ ಪರ್ವತಾರೋಹಿಯೊಬ್ಬರು ಎವರೆಸ್ಟ್‌ ತುದಿಯಲ್ಲಿ ಸಂಭವಿಸಿರುವ ಟ್ರಾಫಿಕ್‌ ಜಾಮ್‌ ಫೋಟೊವೊಂದನ್ನು ಟ್ವೀಟ್‌ ಮಾಡಿದ್ದು ಸಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್‌ ಆಗಿದೆ.


ಭಾರತೀಯರ ಹೊರತಾಗಿ ಅಮೆರಿಕದ 55 ವರ್ಷದ ಪರ್ವತಾರೋಹಿ ಡೊನಾಲ್ಡ್‌ ಲಿನ್‌ ಕ್ಯಾಶ್‌ ಪರ್ವತದಿಂದ ಇಳಿಯುವ ಸಂದರ್ಭದಲ್ಲಿ ಟ್ರಾಫಿಕ್‌ ಜಾಮ್‌ ಎದುರಿಸಿ ದಣಿವಿನಿಂದ ಮೂರ್ಚೆಬಿದ್ದು ಕೊನೆಗೆ ದುರಂತ ಸಾವನ್ನು ಕಂಡಿದ್ದಾರೆ.

Story first published: Friday, May 24, 2019, 21:22 [IST]
Other articles published on May 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+