For Quick Alerts
ALLOW NOTIFICATIONS  
For Daily Alerts

ಮಿಸ್ ಆಗಿದ್ದ ಉಗಾಂಡ ಲಿಫ್ಟರ್ ಮೈಯಲ್ಲಿ ಭಾರತೀಯ ಟ್ರ್ಯಾಕ್‌ ಜಾಕೆಟ್!

Ugandan weightlifter Julius Ssekitoleko who went missing seen wearing old India track jacket

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ಗೆ ತೆರಳಿದ್ದ ಉಗಾಂಡಾದ ವೇಟ್ ಲಿಫ್ಟರ್ ಜೂಲಿಯಸ್ ಸೆಕಿಟೋಲೆಕೊ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ಯಾಕೆಂದರೆ ಸೆಕಿಟೋಲೆಕೊ ಒಲಿಂಪಿಕ್ಸ್ ಅಭ್ಯಾಸ ಶಿಬಿರದಿಂದ ಕಾಣೆಯಾಗಿದ್ದರು. ಅದಾಗಿ ಕೆಲ ದಿನಗಳ ಹಿಂದಷ್ಟೇ ಸೆಕಿಟೋಲೆಕೊ ಜಪಾನ್‌ ಪೊಲೀಸರ ಕೈಗೆ ಸಿಕ್ಕಿದ್ದರು. ಆದರೆ ಈಗ ಸೆಕಿಟೋಲೆಕೊ ಮತ್ತೆ ಸುದ್ದಿಯಾಗಿದ್ದಾರೆ.

ತಪ್ಪಿಸಿಕೊಂಡಿದ್ದ ಜೂಲಿಯಸ್ ಸೆಕಿಟೋಲೆಕೊ ಪೊಲೀಸರ ಕೈಗೆ ಸಿಗುವಾಗ ಅವರು ಭಾರತೀಯರ ಹಿಂದಿನ ಟ್ರ್ಯಾಕ್‌ ಜಾಕೆಟ್ ಧರಿಸಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಟೋಕಿಯೋ ಒಲಿಂಪಿಕ್ಸ್‌ಗಾಗಿ ಸದ್ಯ ಜಪಾನ್‌ನಲ್ಲಿರುವ ಭಾರತೀಯ ಒಲಿಂಪಿಕ್ಸ್ ತಂಡಕ್ಕೂ ಈ ಸಂಗತಿ ಅಚ್ಚರಿಗೀಡು ಮಾಡಿದೆ.

ಉಗಾಂಡದಲ್ಲಿ ನನ್ನ ಬದುಕು ಬಹಳ ಕಷ್ಟ ಅನ್ನಿಸುತ್ತಿದೆ. ಹೀಗಾಗಿ ನಾನು ಜಪಾನ್‌ನಲ್ಲೇ ಬದುಕಲು ಬಯಸಿದ್ದೇನೆ ಎಂದು ನಾಪತ್ತೆಯಾಗುವ ಮೊದಲು ಸೆಕಿಟೋಲೆಕೊ ನೋಟ್‌ನಲ್ಲಿ ಬರೆದಿಟ್ಟಿದ್ದರು. ಆದರೆ ಹಾಗೆ ತಪ್ಪಿಸಿಕೊಂಡಿದ್ದ ಸೆಕಿಟೋಲೆಕೊ ಕೈಗೆ ಭಾರತೀಯರ ಹಳೆಯ ಟ್ರ್ಯಾಕ್‌ ಜಾಕೆಟ್ ಸಿಕ್ಕಿದ್ದು ಹೇಗೆ ಅನ್ನೋದೇ ಗೊತ್ತಾಗಿಲ್ಲ.

20ರ ಹರೆಯದ ಸೆಕಿಟೋಲೆಕೊ ಟೋಕಿಯೋದ ನರಿಟಾದಲ್ಲಿರುವ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದರು. ಆಗ ಅವರು ಕೆಂಪು ಬಣ್ಣದ ಟ್ರ್ಯಾಕ್ ಜಾಕೆಟ್ ಧರಿಸಿದ್ದರು. ಈ ಜಾಕೆಟ್‌ನಲ್ಲಿ 'ಇಂಡಿಯಾ' ಎಂದು ಬರೆದಿತ್ತು ಎಂದು ಎಐಟಿವಿ ಚಾನೆಲ್ ವರದಿ ಹೇಳಿದೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಒಲಿಂಪಿಕ್ಸ್ ನಡೆಯಲಿದೆ.

Story first published: Sunday, July 25, 2021, 22:01 [IST]
Other articles published on Jul 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+