ಅಂಡರ್‌ಟೇಕರ್ vs ಬ್ರಾಕ್ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ

ಬೆಂಗಳೂರು, ಡಿಸೆಂಬರ್ 14: ಅಂಡರ್ ಟೇಕರ್ ಡಬ್ಲ್ಯೂಡಬ್ಲ್ಯೂಇ ರಿಂಗ್‌ಗೆ ಎಂಟ್ರಿ ಕೊಟ್ಟರೆಂದರೆ ಸಾಕು; ಅರೆನಾದಲ್ಲಿ ಕೂತ ಪ್ರೇಕ್ಷಕರೆಲ್ಲರಲ್ಲಿ ಹೊಸ ಹುಮ್ಮಸ್ಸು ಆವರಿಸಿಬಿಡುತ್ತದೆ. ಡಬ್ಲ್ಯೂಡಬ್ಲ್ಯೂಇ ದಂತಕತೆ ಅಂಡರ್‌ಟೇಕರ್ ಅಭಿಮಾನಿಗಳನ್ನು ಅಷ್ಟರಮಟ್ಟಿಗೆ ರಂಜಿಸುತ್ತ ಬಂದವರು.
ನೀವು ರಸ್ಲಿಂಗ್ ಪ್ರಿಯರಾಗಿದ್ದರೆ ಡೆಡ್‌ಮ್ಯಾನ್ ಖ್ಯಾತಿಯ ಅಮೆರಿಕನ್ ರಸ್ಲರ್ ಅಂಡರ್‌ಟೇಕರ್ ('ಮಾರ್ಕ್ ವಿಲಿಯಮ್ ಕ್ಯಾಲವೆ' ನಿಜ ಹೆಸರು), ಸುಪ್ಲೆಕ್ಸ್ ಸಿಟಿಯ ಬ್ರಾಕ್ ಲೆಸ್ನರ್, ಟ್ರಿಪಲ್ ಎಚ್, ಬಿಗ್ ರನ್ ಮೆಷೀನ್ ಕೇನ್, ರೇ ಮೆಸ್ಟೀರಿಯೋ, ಗೋಲ್ಡ್ ಬರ್ಗ್, ಬಿಗ್ ಶೋ ಇಂಥ ಸ್ಟಾರ್‌ಗಳ ಕಾಳಗವನ್ನು ಎಷ್ಟು ನೋಡಿದರೂ ಬೋರ್ ಅನ್ನಿಸೋದಿಲ್ಲ.
ಅದರಲ್ಲೂ ಅಂಡರ್‌ಟೇಕರ್ ಮತ್ತು ಬ್ರಾಕ್‌ಲೆಸ್ನರ್ ಗುದ್ದಾಟಕ್ಕೆ ಇರುವ ಪ್ರೇಕ್ಷಕರ ಸಮೂಹ ದೊಡ್ಡದು. ಟೇಕರ್-ಲೆಸ್ನರ್ ನಡುವಿನ ಕಾಳಗದ ವೇಳೆ ಇಡೀ ಅರೆನಾವೇ ಎದ್ದುನಿಂತು ಟೇಕರ್‌ಗೆ ಗೌರವ ಸಲ್ಲಿಸಿದ ರೋಮಾಂಚನಕಾರಿ ವಿಡಿಯೋ ನೋಡಿದ್ದೀರಾ? ಸುಮಾರು 5 ವರ್ಷಗಳ ಹಿಂದಿನ ವೀಡಿಯೋ ಮತ್ತೆ ಮತ್ತೆ ನೋಡಿದರೂ ಬೇಜಾರು ಅನ್ನಿಸಲ್ಲ.
ಈ ರಸಲ್‌ಮೇನಿಯಾ 30 ಪಂದ್ಯ ನಡೆದಿದ್ದು 2014ರ ಏಪ್ರಿಲ್‌ನಲ್ಲಿ. ಅಂಡರ್ ಟೇಕರ್ ಗೆಲ್ಲುತ್ತಾರೆಂದು ಎದುರು ನೋಡುತ್ತಿದ್ದ ಮ್ಯಾಚಿನಲ್ಲಿ ಬ್ರಾಕ್ ಲೆಸ್ನರ್ ಗೆದ್ದುಬಿಟ್ಟರು. ಅದೂ ಸುಲಭಕ್ಕೆ ಅಂತ್ಯ ಕಾಣದ ಜಿದ್ದಾಜಿದ್ದಿಯ ಸುದೀರ್ಘ ಕಾಳಗದಲ್ಲಿ ಲೆಸ್ನರ್ ಆವತ್ತು ಮೇಲುಗೈ ಸಾಧಿಸಿದ್ದರು.
21 ಬಾರಿ ಸತತ ಗೆಲುವುಗಳನ್ನು ಕಂಡಿದ್ದ ಟೇಕರ್ ಗೆಲುವಿನೋಟ (ಸ್ಟ್ರೀಕ್) ಅಲ್ಲಿಗೆ ಕೊನೆಗೊಂಡಿತ್ತು. ಗೆಲುವಿನೋಟದಲ್ಲಿದ್ದ ಅಂಡರ್ ಟೇಕರ್ ಸ್ಟ್ರೀಕ್ ಅನ್ನು 21-1ರಿಂದ ಲೆಸ್ನರ್ ಕೊನೆಗೊಳಿಸಿದ್ದರು. ಆವತ್ತು ಕಾಮೆಂಟೇಟರ್ ಕೂಡ ಫಲಿತಾಂಶ ನೋಡಿ ಆಘಾತಗೊಂಡಿದ್ದರು. ಟೇಕರ್ ಆ ದಿನ ಸೋತಿದ್ದರಾದರೂ ಇಡೀ ಅರೇನವೇ ಎದ್ದುನಿಂತು ರಸ್ಲಿಂಗ್ ದಂತಕತೆಗೆ ಗೌರವ ಸೂಚಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications