ಕೇಂದ್ರ ಬಜೆಟ್ 2022: ಕ್ರೀಡಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಸಿಕ್ಕ ಕೊಡುಗೆಯೇನು?

2022-23ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್ ಮಂಡನೆ ಮಾಡಿದ್ದು 1 ಗಂಟೆ 30 ನಿಮಿಷಗಳ ಕಾಲ ಬಜೆಟ್ ಪ್ರತಿಯನ್ನು ಓದಿ ಮುಂದಿನ ಒಂದು ವರ್ಷಗಳ ಅವಧಿಗೆ ಸರ್ಕಾರದ ಆರ್ಥಿಕ ರೂಪುರೇಶೆಗಳ ವಿವರಣೆಯನ್ನು ನೀಡಿದ್ದಾರೆ. ಈ ಸುದೀರ್ಘ ಅವಧಿಯ ಭಾಷಣದಲ್ಲಿ ಕ್ರೀಡಾ ವಿಭಾಗದ ಬಗ್ಗೆ ಸಚಿವರು ಯಾವುದೇ ಉಲ್ಲೇಖವನ್ನು ಮಾಡಿರಲಿಲ್ಲ.
ಆದರೆ ಬಳಿಕ ಬಜೆಟ್‌ನ ಪೂರ್ಣ ಮಾಹಿತಿ ಲಭ್ಯವಾಗಿದ್ದು ಕಳೆದ ಬಾರಿಗಿಂತ 300 ಕೋಟಿ ಹೆಚ್ಚು ಮೊತ್ತವನ್ನು ಕ್ರೀಡಾ ಕ್ರೇತ್ರಕ್ಕೆ ಮೀಸಲಿರಿಸಲಾಗಿದೆ. ಈ ಅವಧಿಯಲ್ಲಿ ಭಾರತದ ಕ್ರೀಡಾಪಟುಗಳು ಕೇವಲ ಕಾಮನ್‌ವೆಲ್ತ್ ಗೇಮ್ಸ್‌ಬಲ್ಲಿ ಮಾತ್ರವೇ ಭಾಗವಹಿಸುತ್ತಿಲ್ಲ. ಏಷ್ಯನ್ ಗೇಮ್ಸ್ ಕೂಡ ನಡೆಯಲಿದೆ ಎಂಬುದು ಗಮನಾರ್ಹ ಅಂಶ.
2021-22ರ ಅವಧಿಯಲ್ಲಿ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ 2757.02 ಕೋಟಿ ರೂಪಾಯಿ ನೀಡಿತ್ತು. ಈ ಮೊತ್ತವನ್ನು 2022-23ರ ಅವಧಿಯ ಬಜೆಟ್‌ನಲ್ಲಿ 3062.60 ಕೋಟಿ ರೂಪಾಯಿಗೆ ಏರಿಸಲಾಗಿದೆ. ಅಂದರೆ 305.58 ಕೋಟಿ ರೂಪಾಯಿ ಈ ಬಾರಿ ಕ್ರೀಡಾ ಕ್ಷೇತ್ರಕ್ಕೆ ಕಳೆದ ಬಾರಿಗಿಂತ ಹೆಚ್ಚು ದೊರೆತಿದೆ.
ಇದಲ್ಲದೆ ರಾಷ್ಟ್ರೀಯ ಯುವ ಸಬಲೀಕರಣ ಕಾರ್ಯಕ್ರಮಕ್ಕೆ ಕೂಡ ಕೇಂದ್ರ ಸರ್ಕಾರ ಬಜೆಟ್ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ 108 ಕೋಟಿ ರೂಪಾಯಿ ನಿಗದಿ ಪಡಿಸಲಾಗಿತ್ತು. ಈ ಬಾರಿ ಇದಕ್ಕೆ 138 ಕೋಟಿ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ. ಇನ್ನು ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಕೂ ಬಜೆಟ್‌ನಲ್ಲಿ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ. ಕಳೆದ ವರ್ಷ ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 879 ಕೋಟಿ ಮಂಜೂರು ಮಾಡಿತ್ತು. ಈ ವರ್ಷದ ಆರ್ಥಿಕ ಬಜೆಟ್‌ನಲ್ಲಿ ಈ ಯಫಜನೆಗಾಗಿ 974 ಕೋಟಿ ನಿಗದಿಪಡಿಸಿದೆ.
ಕ್ರೀಡಾ ಕ್ಷೇತ್ರಕ್ಕೆ ನೀಡಿರುವ ಬಜೆಟ್ ಒಲಂಪಿಕ್ಸ್ ಅಥ್ಲೀಟ್‌ಗಳ ತರಬೇತಿ ಮತ್ತು ತಯಾರಿಗಾಗಿ ವ್ಯಯಿಸುವ ಹಣದ ಮೊತ್ತದ ಜೊತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ, ಅಥ್ಲೆಟಿಕ್ಸ್ ಅಥಾರಿಟಿ ಆಫ್ ಇಂಡಿಯಾದಂತಹ ಸಂಸ್ಥೆಗಳ ಬಜೆಟ್ ಅನ್ನು ಒಳಗೊಂಡಿರುತ್ತದೆ.
ಕಳೆದ ವರ್ಷ ಒಲಿಂಪಿಕ್ಸ್ ವರ್ಷವಾಗಿದ್ದರೂ ಕೊರೊನಾವೈರಸ್ ಕಾರಣದಿಂದಾಗಿ ಆರ್ಥಿಕತೆಗೆ ಹಿನ್ನಡೆಯುಂಟಾಗಿದ್ದ ಕಾರಣ ಕ್ರೀಡಾ ಬಜೆಟ್‌ಅನ್ನು ಕಡಿಮೆಗೊಳಿಸಲಾಗಿತ್ತು. ಹಾಗಿದ್ದರೂ ಇಂಥಾ ಹಲವಾರು ಅಡೆತಡೆಗಳ ಮಧ್ಯೆಯೂ ಒಲಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾ ಕೂಟಗಳಲ್ಲಿ ಭಾರತದ ಕ್ರೀಡಾಪಟುಗಳು ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯವಾಗುವಂತೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications