ನವದೆಹಲಿ: ಭಾರತದ ಕ್ರೀಡಾಕ್ಷೇತ್ರಕ್ಕೂ ಬಜೆಟ್‌ನಲ್ಲಿ ಬಂಪರ್ ಸಿಕ್ಕಿದೆ. ಫೆಬ್ರವರಿ 1 ರಂದು ನಿರ್ಮಲಾ ಸೀತಾರಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡೆ ಇಲಾಖೆ ಭಾರೀ ಮೊತ್ತವನ್ನು ಪಡೆದಿದೆ.
ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ ದಾಖಲೆಗಳ ಪ್ರಕಾರ, 2026-27ರ ಹಣಕಾಸು ವರ್ಷದಲ್ಲಿ ಕ್ರೀಡಾ ಸಚಿವಾಲಯ ₹45,000 ಕೋಟಿ ದಾಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸದರೆ ಇದು ಗಣನೀಯ ಏರಿಕೆ ಆಗಿದೆ. ಕ್ರೀಡೆ, ಯುವ ಸಬಲೀಕರಣ ಮತ್ತು ಮೂಲಸೌಕರ್ಯ ಸುಧಾರಣೆಯತ್ತ ಸರ್ಕಾರ ಚಿತ್ತ ಹರಿಸಿದೆ ಎಂದು ತಿಳಿದು ಬರುತ್ತದೆ.

ಬಜೆಟ್‌ನಲ್ಲಿ ಕ್ರೀಡಾ ಇಲಾಖೆಗೆ ಹರಿದು ಬಂದ ಹಣವು ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಸೃಷ್ಟಿ ಮತ್ತು ಭಾರತದ ಜಾಗತಿಕ ಕ್ರೀಡಾ ಮಹತ್ವಾಕಾಂಕ್ಷೆಗಳಿಗೆ ಸರ್ಕಾರ ಹಿಡಿದ ಕೈಗನ್ನಡಿಯಾಗಿದೆ. ಇದರಲ್ಲಿ ಭಾರತ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸುವ ಆಶಯವನ್ನು ಹೊಂದಿದ್ದು ಎತ್ತಿ ತೋರಿಸುತ್ತದೆ.
ಬಜೆಟ್ ದಾಖಲೆಗಳಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡೆಗಳಿಗೆ ಸುಮಾರು ₹45,482 ಕೋಟಿ ಹಣವನ್ನು ತೆಗೆದಿಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷದ ಆಯ್ಯವ್ಯದಲ್ಲಿ ಇದರ ಗಾತ್ರ ₹45,482 ಕೋಟಿ ಆಗಿತ್ತು. ಒಂದೇ ವರ್ಷದಲ್ಲಿ ಕ್ರೀಡಾಭಿವೃದ್ಧಿಗೆ ಸರ್ಕಾರ ₹2,800 ಕೋಟಿ ಹಣವನ್ನು ಹೆಚ್ಚುವಾರಿಯಾಗಿ ನೀಡಿದ್ದು ಸ್ಪಷ್ಟವಾಗಿ ಕಾಣುತ್ತದೆ. ಈ ಸ್ಥಿರವಾದ ಏರಿಕೆಯು ಕ್ರೀಡಾ ನೀತಿಯಲ್ಲಿನ ನಿರಂತರತೆಯನ್ನು ಸೂಚಿಸುತ್ತದೆ. ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಉತ್ಪಾದನೆಗೆ ಪೂರಕವಾಗಿದೆ ಎಂದು ತಿಳಿಸುತ್ತದೆ.
ವಿಸ್ತೃತ ಹಂಚಿಕೆಯ ಮೊತ್ತವನ್ನು ಖೇಲೋ ಇಂಡಿಯಾ, ಖೆಲೋ ಇಂಡಿಯಾ ಮಿಷನ್ , ಅಲ್ಲದೆ ರಾಜ್ಯಗಳಲ್ಲಿ ಕ್ರೀಡಾಂಗಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯಕವಾಗಲಿದೆ. ಭಾರತ ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಆತಿಥ್ಯ ನೀಡುವ ಕನಸು ಕಾಣುತ್ತಿದೆ. 2030ರಲ್ಲಿ ಭಾರತ 100ನೇ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಲಿದೆ. ಇನ್ನು ಅನುದಾನ ಹೆಚ್ಚಳದಲ್ಲಿ ತರಬೇತಿ ಕೇಂದ್ರಗಳಿ, ಮೈದಾನಗಳ ಅಭಿವೃದ್ಧಿಗೆ ಒತ್ತು ನೀಡುವ ಸಾಧ್ಯತೆ ಇದೆ. ಸಚಿವಾಲಯದ ಹಂಚಿಕೆಯು ಯುವಜನ ವ್ಯವಹಾರಗಳು, ಕೌಶಲ ಅಭಿವೃದ್ಧಿಗೆ ಅನುದಾನವನ್ನು ಬಳಸುವ ನಿರೀಕ್ಷೆ ಇದೆ. ಈ ಬಜೆಟ್ ಮೂಲಕ ಕೇಂದ್ರ ಸರ್ಕಾರ ದೀರ್ಘಾವಧಿಯ ಯೋಜನೆಯತ್ತ ಚಿತ್ತವನ್ನು ನೆಟ್ಟಿದೆ.