Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಎಸ್ ಕಿಡ್ಸ್ ಗಾಲ್ಫ್ ಟೂರ್ನಿಯಲ್ಲಿ ಸಾನ್ವಿ ಸೋಮು ಚಾಂಪಿಯನ್

US Kids Golf India Tour Successfully Held in Bengaluru

ವಿಶ್ವದ ಅತಿದೊಡ್ಡ ಜೂನಿಯರ್ ಗಾಲ್ಫ್ ಫೌಂಡೇಷನ್ ಯುಎಸ್ ಕಿಡ್ಸ್ ಗಾಲ್ಫ್ ಬೆಂಗಳೂರಿನ ಈಗಲ್ಟನ್ ಗಾಲ್ಫ್ ರೆಸಾರ್ಟ್‍ನಲ್ಲಿ ಅಯೋಜಿಸಿದ ಟೂರ್ನಿಯಲ್ಲಿ ಬೆಂಗಳೂರಿನ ಸಾನ್ವಿ ಸೋಮು 10 ವಯೋಮಿತಿ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

6 ರಿಂದ 18 ವಯೋಮಿತಿ ವಿಭಾಗದಲ್ಲಿ ನಡೆದ ಟೂರ್ನಿಗೆ ಬೆಂಗಳೂರು, ದೆಹಲಿ, ಕೋಲ್ಕತ, ಹೈದರಬಾದ್, ವಿವಿಧ ನಗರಗಳಿಂದ 51 ಉದಯೋನ್ಮುಖ ಗಾಲ್ಫರ್ ಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ವೃತ್ತಿಪರ ಗಾಲ್ಫರ್ ಚಿಕ್ಕರಂಗಪ್ಪ ಎಸ್ ಉದಯೋನ್ಮುಖ ಗಾಲ್ಫರ್ ಗಳಿಗೆ ಪ್ರಶಸ್ತಿ ವಿತರಿಸಿದರು.

US Kids Golf India Tour Successfully Held in Bengaluru

2018 & 19ರ ಪದಾರ್ಪಣಾ ಆವೃತ್ತಿಯ 8 ಟೂರ್ನಮೆಂಟ್‍ಗಳು ದೇಶದ ಆರು ನಗರಗಳಲ್ಲಿ ನಡೆಯುತ್ತಿವೆ. ದೆಹಲಿಯ ರಾಷ್ಟ್ರ ರಾಜಧಾನಿ ವಲಯದಲ್ಲಿ ಮೂರು ಟೂರ್ನಿಗಳು ನಡೆದರೆ, ಕೋಲ್ಕತ, ಬೆಂಗಳೂರು, ಹೈದರಾಬಾದ್, ಚಂಡೀಗಢ ಹಾಗೂ ಪುಣೆಯ ಗಾಲ್ಫ್ ಕೋರ್ಸ್‍ಗಳಲ್ಲಿ ಉಳಿದ ಟೂರ್ನಮೆಂಟ್‍ಗಳು ನಡೆಯಲಿವೆ.

ಕಳೆದ 20 ವರ್ಷಗಳಲ್ಲಿ ಯುಎಸ್ ಕಿಡ್ಸ್ ಗಾಲ್ಫ್, ವಿಶ್ವದ ಅಗ್ರ ಜೂನಿಯರ್ ಗಾಲ್ಫ್ ಅಭಿವೃದ್ಧಿ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ. ಅದಲ್ಲದೆ, ತನ್ನದೇ ಕೆಲ ವಿಭಾಗಗಳ ಮೂಲಕ ವಿಶ್ವದ 10 ಲಕ್ಷಕ್ಕೂ ಅಧಿಕ ಯುವ ಆಟಗಾರರ ಕ್ರೀಡಾ ಜೀವನವನ್ನು ರೂಪಿಸುವಲ್ಲಿ ನೆರವಾಗಿದೆ.

ಪ್ರತಿಷ್ಠಿತ ಪಿಜಿಎ ಚಾಂಪಿಯನ್‍ಷಿಪ್, ರೈಡರ್ ಕಪ್ ಹಾಗೂ ಯುಎಸ್ ಓಪನ್‍ಗೆ ಆತಿಥ್ಯವಹಿಸಿಕೊಂಡಿರುವ ಪೈನ್‍ಹರ್ಸ್ಟ್ ನಲ್ಲಿ ಪ್ರತಿವರ್ಷ ಯುಎಸ್ ಕಿಡ್ಸ್ ವಿಶ್ವ ಚಾಂಪಿಯನ್‍ಷಿಪ್ ಹಾಗೂ ಯುಎಸ್ ಕಿಡ್ಸ್ ಟೀನ್ ವಿಶ್ವ ಚಾಂಪಿಯನ್‍ಷಿಪ್ ನಡೆಯುತ್ತಿದೆ.

Story first published: Thursday, January 10, 2019, 20:36 [IST]
Other articles published on Jan 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+