ವೀಡಿಯೋ : ಬೋಲ್ಟ್ 100 ಮೀ ವಿಶ್ವ ಚಾಂಪಿಯನ್
ಬೀಜಿಂಗ್, ಆಗಸ್ಟ್ 24: ಜಮೈಕಾದ ದಿಗ್ಗಜ ಅಥ್ಲೀಟ್ ಉಸೇನ್ ಬೋಲ್ಟ್ ಮತ್ತೊಮ್ಮೆ ವಿಶ್ವ ಚಾಂಪಿಯನ್ ಕಿರೀಟ ಧರಿಸಿದ್ದಾರೆ. ಇಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ 100 ಮೀಟರ್ ಓಟದಲ್ಲಿ ಕೂದಲೆಳೆ ಅಂತರದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಬೋಲ್ಟ್ ಸಾಧನೆಗೆ ಕ್ರಿಕೆಟರ್ ಕ್ರಿಸ್ ಗೇಲ್ ಸೇರಿದಂತೆ ಅನೇಕ ಮಂದಿ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ 100 ಮೀಟರ್ ಓಟದಲ್ಲಿ ವಿಶ್ವದ ವೇಗದ ಓಟಗಾರ ಜಮೈಕಾದ 29 ವರ್ಷ ವಯಸ್ಸಿನ ಉಸೇನ್ ಬೋಲ್ಟ್ ಅವರು ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ಅವರನ್ನು 0.01 ಸೆಕೆಂಡ್ ಅಂತರದಲ್ಲಿ ಸೋಲಿಸಿದ್ದಾರೆ.
ಇದೇ ಅಥ್ಲೆಟಿಕ್ಸ್ ಚಾಂಪಿಯನ್ಸ್ ನ ಮಹಿಳೆಯ ವಿಭಾಗದಲ್ಲಿ ಬ್ರಿಟನ್ನ ಜೆಸ್ಸಿಕಾ ಎನ್ನಿಸ್ ಹೆಪ್ಟ್ ಥ್ಲಾನ್ನಲ್ಲಿ ಚಿನ್ನ ಗೆದ್ದು ಕೊಂಡಿದ್ದಾರೆ. ಶಾಟ್ಪುಟ್ ಸ್ಪರ್ಧೆಯಲ್ಲಿ ಭಾರತದ ಭರವಸೆಯ ಎಸೆತಗಾರ ಇಂದ್ರಜಿತ್ ಸಿಂಗ್ ಫೈನಲ್ನಲ್ಲಿ 11ನೇ ಸ್ಥಾನ ಪಡೆದು ನಿರಾಶೆ ಮೂಡಿಸಿದರು.
ಬೀಜಿಂಗ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ 100 ಮೀ. ಸ್ಪರ್ಧೆಯಲ್ಲಿ ಜಮೈಕಾದ ತಾರೆ ಬೋಲ್ಟ್ 9.79 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೂ ಮುಂದಿನ ಒಲಿಂಪಿಕ್ಸ್ ನಲ್ಲಿ ಕಠಿಣ ಸವಾಲು ಎದುರಿಸಬೇಕಾಗುತ್ತದೆ. ಪ್ರಬಲ ಪ್ರತಿಸ್ಪರ್ಧಿ ಜಸ್ಟಿನ್ ಗ್ಯಾಟ್ಲಿನ್ (9.80ಸೆ.) ಅಂತರದಿಂದ ಮಾತ್ರ ಹಿಂದೆ ಉಳಿದಿದ್ದರು. ರಿಯೋ ಒಲಿಂಪಿಕ್ಸ್ನಲ್ಲಿ ಬೋಲ್ಟ್ಗೆ ಸವಾಲು ಹಾಕಬಲ್ಲ ಓಟಗಾರ ಸಿಕ್ಕಿದ್ದಾನೆ ಎಂದು ವಿಶ್ವದ ಹಲವಾರು ಮಾಧ್ಯಮಗಳು ಗ್ಯಾಟ್ಲಿನ್ ಸಾಧನೆಯನ್ನು ಪ್ರಶಂಸಿಸಿವೆ.

ಓಟಕ್ಕೂ ಮುನ್ನ ಬೋಲ್ಟ್ ಕಾಣಿಸಿದ್ದು ಹೀಗೆ
ಬೋಲ್ಟ್ 9.79 ಸೆಕೆಂಡ್, ಜಸ್ಟಿನ್ ಗ್ಯಾಟ್ಲಿನ್ (9.80ಸೆ.) ನಂತರ 3ನೇ ಸ್ಥಾನದಲ್ಲಿ ಅಮೆರಿಕದ ಟ್ರೇವನ್ ಬ್ರೋಮೆಲ್(9.92ಸೆ.) ಹಾಗೂ ಕೆನಡಾದ ಆಂಡ್ರೆ ಡಿ ಗ್ರೆಸಿ(9.92ಸೆ.) ಕಂಚಿನ ಪದಕ ಗೆದ್ದರು.

ತಾಯಿಯೊಂದಿಗೆ ಉಸೇನ್ ಬೋಲ್ಟ್
ವಿಶ್ವ ಚಾಂಪಿಯನ್ ಶಿಪ್ ಗೆದ್ದ ಖುಷಿಯನ್ನು ತಾಯಿ ಜೆನ್ನಿಫರ್ ಬೋಲ್ಟ್(ಎಡಬದಿ) ಹಾಗೂ ತಂದೆ ವೆಲ್ಲೆಸ್ಲಿ ಬೋಲ್ಟ್ (ಬಲಗಡೆ) ಅವರಿಗೆ ಹಂಚಿಕೊಂಡ ಉಸೇನ್ ಬೋಲ್ಟ್. ಚಿತ್ರ; ಪಿಟಿಐ

ಬೀಜಿಂಗ್ ನಲ್ಲಿ ನಡೆದ ಕ್ರೀಡಾಕೂಟ
ಬೀಜಿಂಗ್ ನ ಬರ್ಡ್ಸ್ ನೆಸ್ಟ್ ಸ್ಟೇಡಿಯಂನಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಮೈಕಾದ ಉಸೇನ್ ಬೋಲ್ಟ್ ಸಾಧನೆ.AP/PTI
ಉಸೇನ್ 100 ಮೀಟರ್ ಓಡಿದ್ದು ಹೀಗೆ
ಉಸೇನ್ 100 ಮೀಟರ್ ಓಡಿದ ವಿಡಿಯೋ ನೋಡಿ
ವಿಶ್ವಕ್ಕೆ ಬಾಸ್ ನಮ್ಮ ಉಸೇನ್ ಬೋಲ್ಟ್
ವಿಶ್ವಕ್ಕೆ ಬಾಸ್ ನಮ್ಮ ಉಸೇನ್ ಬೋಲ್ಟ್ ಎಂದು ಹಾಡಿಹೊಗಳಿದ ಜಮೈಕಾದ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್.
ವಿಶ್ವದ ಅನೇಕ ಪತ್ರಿಕೆಗಳಲ್ಲಿ ಬೋಲ್ಟ್
ವಿಶ್ವದ ಅನೇಕ ಪತ್ರಿಕೆಗಳಲ್ಲಿ ಬೋಲ್ಟ್ ಸುದ್ದಿ ಮುಖಪುಟದಲ್ಲಿ ರಾರಾಜಿಸುತ್ತಿದೆ.
ನಮ್ಮ ಕಾಲದ ಸೂಪರ್ ಸ್ಟಾರ್ ಅಥ್ಲೀಟ್
ರೋಜರ್ ಫೆಡರರ್ ,ಉಸೇನ್ ಬೋಲ್ಟ್ ,ಮೈಕಲ್ ಫೆಲ್ಫ್ಸ್ ನಮ್ಮ ಕಾಲದ ಸೂಪರ್ ಸ್ಟಾರ್ ಅಥ್ಲೀಟ್ ಗಳಿವರು
ಬೋಲ್ಟ್ -ಗ್ಯಾಟ್ಲಿನ್ ಅಂತರ ಹೆಚ್ಚೇನು ಇಲ್ಲ
ಬೋಲ್ಟ್ -ಗ್ಯಾಟ್ಲಿನ್ ಓಟದಲ್ಲಿ ಅಂತರ ಹೆಚ್ಚೇನು ಇಲ್ಲ
ಬೋಲ್ಟ್ ಈಗಲೂ ಚಾಂಪಿಯನ್
ಬೋಲ್ಟ್ ಈಗಲೂ ಚಾಂಪಿಯನ್, ಅದರೆ, ಕಠಿಣ ಸ್ಪರ್ಧೆ ಮುಂದೆ ಕಾದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications