Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪುತ್ರಿಯ ಫೋಟೋ ಶೇರ್ ಮಾಡಿ ಹೆಸರು ಬಹಿರಂಗಪಡಿಸಿದ ಉಸೇನ್ ಬೋಲ್ಟ್

Usain Bolt shares first pictures of his newborn daughter

ಕಿಂಗ್‌ಸ್ಟನ್, ಜುಲೈ 8: ಒಲಿಂಪಿಕ್ಸ್‌ನಲ್ಲಿ 8 ಬಾರಿ ಬಂಗಾರದ ಪದಕ ಗೆದ್ದಿರುವ ವೇಗದರಸ, ಮಾಜಿ ಸ್ಪ್ರಿಂಟರ್ ಉಸೇನ್ ಬೋಲ್ಟ್ ತಾನು ಅಪ್ಪನಾಗುತ್ತಿರುವ ಖುಷಿ ಹಂಚಿಕೊಂಡಿದ್ದಾರೆ. ತನಗೆ ಹೆಣ್ಣುಮಗು ಜನಿಸಿರುವುದನ್ನು ಜಮೈಕಾದ ಮಾಜಿ ಅಥ್ಲೀಟ್ ಬೋಲ್ಟ್ ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ. ಉಸೇನ್ ಬೋಲ್ಟ್ ಮತ್ತು ಗೆಳತಿ ಕಾಸಿ ಬೆನೆಟ್‌ ಜೂನ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಆದರೆ ಬೋಲ್ಟ್ ಮಗುವಿನ ಚಿತ್ರವನ್ನಾಗಲಿ, ಹೆಸರನ್ನಾಗಲಿ ಬಹಿರಂಗಪಡಿಸಿರಲಿಲ್ಲ.

ಉಸೇನ್ ಬೋಲ್ಟ್ ಅವರ ಗೆಳತಿ ಬೆನೆಟ್‌ ಅವರ ಹುಟ್ಟುಹಬ್ಬ ಜುಲೈ 7ರಂದಿತ್ತು. ಇದೇ ದಿನ ತಾಯಿ-ಮಗುವಿನ ಚಿತ್ರವನ್ನು ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬೋಲ್ಟ್, ಗೆಳತಿಗೆ ಹುಟ್ಟುಹಬ್ಬದ ಶುಭಾಶಯ ಕೋರುವುದರ ಜೊತೆಗೆ ಮಗುವಿನ ಹೆಸರನ್ನೂ ತಿಳಿಸಿದ್ದಾರೆ.

ಕ್ರೀಡಾಲೋಕದಲ್ಲಿ ವಿಶ್ವ ದಾಖಲೆಯ ಸರದಾರನಾಗಿ, ಮಿಂಚಿನ ಓಟಗಾರನಾಗಿ ಮಿನುಗಿದ ಉಸೇನ್ ಬೋಲ್ಟ್ ತನ್ನ ಪುತ್ರಿಗೆ ಏನು ಹೆಸರಿಟ್ಟಿರಬಹುದು ಅನ್ನೋ ಕುತೂಹಲವಿದ್ದರೆ, ಇದೇ ಸಾಲಿನ ಬೆನ್ನು ಹಿಡಿದು ಹಾಗೇ ಬನ್ನಿ..

ಬೋಲ್ಟ್ ಪುತ್ರಿಯ ಹೆಸರು ಬಹಿರಂಗ

ಬೋಲ್ಟ್ ಪುತ್ರಿಯ ಹೆಸರು ಬಹಿರಂಗ

ಒಲಿಂಪಿಕ್ಸ್ ಮಾಜಿ ಚಾಂಪಿಯನ್ ಆಗಿರುವುದರಿಂದ ಬೋಲ್ಟ್ ತನ್ನ ಪುತ್ರಿಗೆ 'ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್' ಅಂತ ನಾಮಕರಣ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಬೆನೆಟ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಬೋಲ್ಟ್, ತಾನು ಅಪ್ಪನಾಗಿರುವ ಖುಷಿಯನ್ನೂ ಹೇಳಿಕೊಂಡಿದ್ದಾರೆ.

ಖುಷಿಯಲ್ಲದೆ ಬೇರೇನೂ ಬೇಡ

ಖುಷಿಯಲ್ಲದೆ ಬೇರೇನೂ ಬೇಡ

ಇನ್‌ಸ್ಟಾಗ್ರಾಮ್‌ನಲ್ಲಿ ಬೋಲ್ಟ್, 'ನಾನು ನನ್ನ ಗೆಳತಿ ಕಾಸಿ ಬೆನೆಟ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಬಯಸುತ್ತಿದ್ದೇನೆ. ನಿನ್ನ ಜೊತೆಗೆ ಈ ವಿಶೇಷ ದಿನ ಕಳೆಯಲು ನನಗೆ ಖುಷಿ ಅನ್ನೋದನ್ನೂ ನಿನಗೆ ತಿಳಿಸುತ್ತಿದ್ದೇನೆ. ನಿನ್ನ ಖುಷಿಯನ್ನಲ್ಲದೆ ನಾನು ಬೇರೇನೂ ಬಯಸಲಾರೆ. ನಿನ್ನ ಮುಖದಲ್ಲಿ ನಗು ಮುಂದುವರೆಯಲು ನನ್ನಿಂದ ಬೆಸ್ಟ್ ಏನು ಮಾಡಲು ಸಾಧ್ಯವೋ ಅದನ್ನು ನಾನು ಮಾಡುತ್ತಿರುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದೇವೆ

ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದೇವೆ

ಮುಂದುವರೆದ ಸಾಲಿನಲ್ಲಿ, 'ನಾವೀಗ ಪುತ್ರಿ ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್ ಜೊತೆಗೆ ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದೇವೆ. ಭವಿಷ್ಯವು ನಮಗೆ ಏನನ್ನು ತರುತ್ತದೆ ಎಂದು ನಾನು ಎದುರು ನೋಡುತ್ತಿದ್ದೇನೆ ಆದರೆ ನಾನು ಈ ಕುಟುಂಬವನ್ನು ಖುಷಿಯಲ್ಲಿಡುತ್ತೇನೆ ಎಂದು ಧೈರ್ಯ ತುಂಬುತ್ತಿದ್ದೇನೆ. ಐ ಲವ್ ಯೂ. 21ನೇ ಹುಟ್ಟುಹಬ್ಬದ ಶುಭಾಯಶಗಳು' ಎಂದು ಬರೆಯಲಾಗಿದೆ.

ಬೋಲ್ಟ್-ಬೆನೆಟ್‌ರದ್ದು 5 ವರ್ಷಗಳ ಸಂಬಂಧ

ಬೋಲ್ಟ್-ಬೆನೆಟ್‌ರದ್ದು 5 ವರ್ಷಗಳ ಸಂಬಂಧ

100 ಮೀ., 200 ಮೀ., 4X100 ಮೀ, 4X400 ಮೀ. ಓಟದ ಸ್ಪರ್ಧೆಗಳಲ್ಲಿ 8 ಒಲಿಂಪಿಕ್ಸ್ ಬಂಗಾರದ ಪದಕಗಳನ್ನು ಗೆದ್ದಿರುವ ಉಸೇನ್ ಬೋಲ್ಟ್ ಒಟ್ಟಿಗೆ ವಿಶ್ವ ಕ್ರೀಡಾಕೂಟಗಳಲ್ಲಿ 23 ಬಂಗಾರ, 5 ಬೆಳ್ಳಿ, 1 ಕಂಚಿನ ಪದಕ ಜಯಿಸಿದ್ದಾರೆ. 33ರ ಹರೆಯದ ಬೋಲ್ಟ್ ಹೆಸರಿನಲ್ಲಿ ಈಗಲೂ 100 ಮೀ. ವಿಶ್ವದಾಖಲೆ (9.58 ಸೆ.) ಇದೆ. ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದ ಬೋಲ್ಟ್-ಬೆನೆಟ್‌ಗೆ ಜೂನ್ 14ರಂದು ಮಗು ಜನಿಸಿತ್ತು.

Story first published: Wednesday, July 8, 2020, 12:42 [IST]
Other articles published on Jul 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+