For Quick Alerts
ALLOW NOTIFICATIONS  
For Daily Alerts

'ಬ್ಯಾಟಲ್ ಆನ್ ಶಿಪ್ 2021'ನಲ್ಲಿ ಭಾರತದ ಬಾಕ್ಸರ್ ವಿಜೇಂದರ್ ಫೈಟ್

Vijender Singh to fight in Battle On Ship 2021 on March 19

ನವದೆಹಲಿ: ಭಾರತದ ಅತ್ಯಂತ ವಿಶ್ವಾಸಾರ್ಹ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್, ಪೋಕರ್‌ಬಾಜಿ.ಕಾಮ್, ಗೋವಾದಲ್ಲಿ ಆಯೋಜಿಸಲಾದ ಪ್ರತಿಷ್ಠಿತ 'ಬ್ಯಾಟಲ್ ಆನ್ ಶಿಪ್ 2021' ಕಾರ್ಯಕ್ರಮಕ್ಕೆ ಸಹಾಯಕ ಪ್ರಾಯೋಜಕರಾಗಿ ಐಒಎಸ್ ಬಾಕ್ಸಿಂಗ್ ಪ್ರಚಾರಗಳೊಂದಿಗೆ ಕೈಜೋಡಿಸಿದೆ.

ರಷ್ಯಾದ ಸೂಪರ್-ಮಿಡಲ್ ವೇಟ್ ಬಾಕ್ಸರ್ ಆರ್ಟಿಶ್ ಲೋಪ್ಸನ್ ವಿರುದ್ಧ ಮಾರ್ಚ್ 19ರಂದು ಗೋವಾದಲ್ಲಿ ನಡೆಯುವ ಪಂದ್ಯದ ವೇಳೆ ರಿಂಗ್‌ಗೆ ಮರಳಲು ಒಲಿಂಪಿಕ್ ಕಂಚಿನ ಪದಕ ವಿಜೇತ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ತಯಾರಾಗಿದ್ದಾರೆ. ಅವರನ್ನು ಸ್ವಾಗತಿಸಲು ಈ ಕಾರ್ಯಕ್ರಮ ಸಜ್ಜಾಗಿದೆ.

2020ರ ಇಸವಿಯಲ್ಲಿ ಈಗಾಗಲೇ 3 ಸ್ಪರ್ಧೆಗಳಲ್ಲಿ ಗುದ್ದಾಡಿದ್ದ ಲೋಪ್ಸನ್ ಈಗ ವಿಜೇಂದರ್ ಅವರನ್ನು ಎದುರುಗೊಳ್ಳಲಿದ್ದಾರೆ. ಕೊರೊನಾ ಕಾರಣ ವಿಜೇಂದರ್ ಸುಮಾರು ಒಂದು ವರ್ಷದಿಂದ ರಿಂಗ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ರಿಂಗ್‌ನಲ್ಲಿ ಈಗಾಗಲೇ 12-0ಯ ವಿನ್ನಿಂಗ್ಸ್ ಸ್ಟ್ರೀಕ್ (ಸತತ ಗೆಲುವು) ಹೊಂದಿರುವ ವಿಜೇಂದರ್ ಈ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯಿದೆ.

ಯಾವುದೇ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸ್ವದೇಶಿ ಪ್ರತಿಭೆಗಳನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಪೋಕರ್‌ಬಾಜಿ.ಕಾಮ್ ಯಾವಾಗಲೂ ಉತ್ಸುಕವಾಗಿದೆ. ಇದೇ ಕಾರಣಕ್ಕೆ ಪ್ರತಿಭಾನ್ವಿತ ವಿಜೇಂದರ್‌ಗೆ ಪ್ರಾಯೋಜಕತ್ವ ನೀಡಲು ಪೋಕರ್ ಬಾಜಿ ಮುಂದಾಗಿದೆ.

Story first published: Tuesday, March 16, 2021, 8:02 [IST]
Other articles published on Mar 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+