ಏಷ್ಯನ್ ಅಥ್ಲೆಟಿಕ್ಸ್ ಗೆ ಕೊನೆಗೂ ಕನ್ನಡಿಗ ವಿಕಾಸ್ ಗೌಡಗೆ ಸಿಕ್ತು ಚಾನ್ಸ್
ನವದೆಹಲಿ, ಜುಲೈ 05 : ಡಿಸ್ಕಸ್ ಎಸೆತಗಾರ ಕನ್ನಡಿಗ ವಿಕಾಸ್ ಗೌಡ ಅವರು 22ನೇ ಆವೃತ್ತಿಯ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಬಗ್ಗೆ ಇದ್ದ ಹಲವು ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ.
ರಾಷ್ಟ್ರೀಯ ಫೆಡರೇಶನ್ ಸುದೀರ್ಘ ಚರ್ಚೆ ನಡೆಸಿ ಬಳಿಕ ಕೊನೆ ಕ್ಷಣದಲ್ಲಿ ಕನ್ನಡಿಗ ವಿಕಾಸ್ ಗೌಡರಿಗೆ ಜುಲೈ 06ರಿಂದ ಭುವನೇಶ್ವರದಲ್ಲಿ ನಡೆಯಲಿರುವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಆಡಲು ಅವಕಾಶ ನೀಡಿದೆ.

ಕಳಿಂಗ ಸ್ಟೇಡಿಯಂನಲ್ಲಿ ಟ್ರಯಲ್ ನಲ್ಲಿ ನಿರತರಾಗಿದ್ದ ಮುಂಬೈ ಕನ್ನಡಿಗ ಸಿದ್ಧಾಂತ್ ತಿಂಗಳಾಯು (110 ಮೀ. ಹರ್ಡಲ್ಸ್) ಕೂಡ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ.
ಅಮೆರಿಕಾದಲ್ಲಿ ನೆಲೆಸಿರುವ 34 ಪ್ರಾಯದ ವಿಕಾಸ್ ಗೌಡ. 2011ರ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಜಯಿಸಿದ್ದರು. ಹಾಗೂ 2014 ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ.
22ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ ಶಿಪ್ ಅತಿಥ್ಯ ವಹಿಸಿಕೊಳ್ಳಲಿರುವ ಭಾರತ 46 ಮಹಿಳಾ ಕ್ರೀಡಾಪಟುಗಳು ಸೇರಿದಂತೆ ಒಟ್ಟು 95 ಕ್ರೀಡಾಪಟುಗಳ ತಂಡವನ್ನು ಕಣಕ್ಕಿಳಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications