ಪ್ಯಾರೀಸ್ ಒಲಿಂಪಿಕ್ಸ್‌ನ ಮಹಿಳೆಯರ ಪ್ರಿ ಸ್ಟೈಲ್ ಕುಸ್ತಿ ವಿಭಾಗದ ಫೈನಲ್‌ಗೂ ಮುನ್ನ ಅನರ್ಹರಾಗಿದ್ದ ವಿನೇಶ್ ಪೋಗಟ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಬಳಿಕ ವಿನೇಶ್, ಕುಸ್ತಿಗೆ ಗುಡ್ ಬಾಯ್ ಹೇಳಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಅಲ್ಲದೆ ಇತ್ತೀಚಿಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯನ್ನು ಪ್ರವೇಶಿಸಿದ್ದರು. ಈಗ ಇವರು ಹರಿಯಾಣ ಸರ್ಕಾರ ನೀಡಿದ್ದ ಬಹುಮಾನವನ್ನು ಸ್ವೀಕರಿಸಿ ಸುದ್ದಿಯಲ್ಲಿದ್ದಾರೆ.
ವಿನೇಶ್ ಪೋಗಟ್ ಪ್ಯಾರೀಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಫೈನಲ್‌ಗೆ ಅರ್ಹತೆಯನ್ನು ಪಡೆದಿದ್ದರು. ಆದರೆ ಫೈನಲ್‌ಗೂ ಮುನ್ನ ಇವರು ನಿಗದಿತ ತೂಕಕ್ಕಿಂತ ನೂರು ಗ್ರಾಮ ಹೆಚ್ಚಿದ್ದಾರೆ ಎಂದು ಅವರನ್ನು ಅನರ್ಹ ಗೊಳಿಸಲಾಗಿತ್ತು. ಇಲ್ಲದಿದ್ದರೇ ವಿನೇಶ್ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ನಿಂತಿದ್ದರು. ಇವರು ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದರು. ಇನ್ನು ಈ ಪಂದ್ಯವಾಳಿಯಲ್ಲಿ ಮೈದಾನಕ್ಕೆ ಇಳಿದರೆ ಇವರಿಗೆ ಪದಕ ಖಚಿತವಾಗಿತ್ತು. ಆದರೆ ಅದಕ್ಕೂ ಮುನ್ನವೇ ಇವರು ಅನರ್ಹಗೊಂಡರು. ಇದಾದ ಬಳಿಕ ಇವರು ಬರೀಗೈಯಲ್ಲಿ ವಾಪಸ್ ಆದರು. ಇವರ ಸಾಧನೆಯನ್ನು ಹರಿಯಾಣ ಸರ್ಕಾರ ಗುರುತಿಸಿ ಪುರಸ್ಕರಿಸಿತ್ತು.

ಹರಿಯಾಣ ಬಿಜೆಪಿ ಸರ್ಕಾರ ಇವರ ಸಾಧನೆಯನ್ನು ಗುರುತಿಸಿ ಇವರಿಗೆ ಮೂರು ಆಫರ್‌ಗಳನ್ನು ನೀಡಿತ್ತು. ಇದರಲ್ಲಿ ಇವರು ಯಾವುದನ್ನಾದ್ರೂ ಸೆಲೆಕ್ಟ್ ಮಾಡಬಹುದಿತ್ತು. ಫೈನಲಿ ವಿನೇಶ್ 4 ಕೋಟಿ ರೂಪಾಯಿ ಕೊಡುಗೆ ಸ್ವೀಕರಿಸಿದ್ದಾರೆ. ಸರ್ಕಾರ ನೀಡಿದ್ದ ಇನ್ನು ಎರಡು ಆಫರ್‌ಗಳು ಎಂದರೆ, ಸರ್ಕಾರ ಕೆಲಸ ಅಥವಾ ನಿವೇಶನವಾಗಿತ್ತು. ನಗದು ಬಹುಮಾನಕ್ಕೆ ಸಂಬಂಧಿಸಿದಂತೆ ವಿನೇಶ್ ಫೋಗಟ್ ಅವರ ಒಪ್ಪಿಗೆ ಪತ್ರವನ್ನು ಕ್ರೀಡಾ ಇಲಾಖೆ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ. ಅವರಿಗೆ ಮೊತ್ತವನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ಸರ್ಕಾರ ನೀಡಿದ್ದ ಗೌರವವನ್ನು ವಿನೇಶ್ ಬಜೇಟ್ ಅಧಿವೇಶನದಲ್ಲೇ ತಿಳಿಸಿದ್ದರು. ಸರ್ಕಾರ ತನಗೆ ಬೆಳ್ಳಿ ಪದಕಕ್ಕೆ ಸಮಾನವಾದ ಗೌರವವನ್ನು ನೀಡುವುದಾಗಿ ಘೋಷಿಸಿದೆ. ಆದರೆ 8 ತಿಂಗಳ ಕಳೆದಿದೆ ಇನ್ನು ಏನು ಸಿಕ್ಕಿಲ್ಲ ಎಂಬ ನಿರಾಸೆಯನ್ನು ಅವರು ಹೊರ ಹಾಕಿದ್ದರು. ಇದಾದ ಬಳಿಕ ಸಿಎಂ ನಾಯಬ್ ಸಿಂಗ್ ಸೈನಿ ಕ್ಯಾಬಿನೇಟ್ ಮೀಟಿಂಗ್‌ನಲ್ಲಿ, 2019ರಲ್ಲಿ ನಗದು ಬಹುಮಾನದ ನಿಯಮದ ಅನುಸಾರ ಸರ್ಕಾರಿ ನೌಕರಿ, ಎಚ್‌ಎಸ್‌ವಿಪಿ ಫ್ಲ್ಯಾಟ್, ಇಲ್ಲವೇ ನಾಲ್ಕು ಕೋಟಿ ರೂ. ನೀಡುವುದಾಗಿ ತಿಳಿಸಿತ್ತು. ವಿನೇಶ್ ಈ ಮೂರರಲ್ಲಿ ಒಂದನ್ನು ಸೆಲಕ್ಟ್ ಮಾಡಿಕೊಂಡಿದ್ದಾರೆ.
ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಆಗಸ್ಟ್ 6, 2024 (ಒಂದೇ ದಿನ) ರಂದು 50 ಕೆಜಿ ತೂಕದ ವಿಭಾಗದಲ್ಲಿ 3 ಪಂದ್ಯಗಳನ್ನು ಆಡಿ ಜಯ ಸಾಧಿಸಿದ್ದರು.

ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿದ ಕ್ರೀಡಾ ಪಟುವಿಗೆ 6 ಕೋಟಿ, ಬೆಳ್ಳಿ ಸಾಧನೆ ಮಾಡಿದವರಿಗೆ 4 ಕೋಟಿ, ಕಂಚಿನ ನಗೆ ಬೀರಿದ ಆಟಗಾರರಿಗೆ 2.5 ಕೋಟಿ ನೀಡುವುದಾಗಿದೆ.