For Quick Alerts
ALLOW NOTIFICATIONS  
For Daily Alerts

Olympic Wrestling: ಸೆಮಿಫೈನಲ್‌ ಪ್ರವೇಶಿಸಿದ ಭಾರತದ ವಿನೇಶ್‌ ಪೋಗಟ್‌

ಭಾರತದ ಭರವಸೆಯ ಕುಸ್ತಿ ಪಟು ವಿನೇಶ್ ಪೋಗಟ್‌ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಅವರು 50 ಕೆಜಿ ಮಹಿಳೆಯರ ಫ್ರಿ ಸ್ಟೈಲ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಪದಕಕ್ಕೆ ಒಂದು ಹೆಜ್ಜೆ ಹತ್ತಿರ ನಿಂತಿದ್ದಾರೆ.

ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನೇಶ್‌ ಪೋಗಟ್‌ ಆದಿದ ಧಾಟಿ, ಎಲ್ಲರನ್ನು ಚಕಿತ ಗೊಳಿಸಿತ್ತು. ಇವರು ವಿಶ್ವದ ನಂಬರ್‌ 1 ಕುಸ್ತಿ ಪಟುವಿನ ಪಟ್ಟುಗಳನ್ನು ಬುಡಮೇಲು ಮಾಡಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಅಲ್ಲದೆ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಉಕ್ರೇನ್ ಒಕ್ಸಾನಾ ಲಿವಾಚ್ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಉಪಾಂತ್ಯಕ್ಕೆ ಪ್ರವೇಶ ಪಡೆದರು.

Vinesh Phogat Advances to Paris 2024 Olympics Semi-Finals with Victory Over Ukraine s Okshana Livach

ಮಹತ್ವದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿನೇಶ್‌ ಅವರು ಮನಮೋಹಕ ಆಟದ ಪ್ರದರ್ಶನ ನೀಡಿದರು. ಉಕ್ರೇನ್‌ ಒಕ್ಸಾನಾ ಎದುರಾಳಿಯ ಪಟ್ಟುಗಳನ್ನು ಅರಿತು ಆಡಿದ ವಿನೇಶ್‌ ಅಂಕಗಳನ್ನು ಎದುರಾಳಿಗೆ ಸುಲಭವಾಗಿ ನೀಡಲಿಲ್ಲ. ಒಂದು ಹಂತದಲ್ಲಿ ಉಭಯ ಆಟಗಾರ್ತಿಯರ ನಡುವೆ ಜಿದ್ದಾಜಿದ್ದಿನ ಕಾಳಗ ಕಂಡು ಬಂದಿತ್ತು. ಆದರೆ ವಿನೇಶ್‌ ತಮ್ಮಲ್ಲಿರುವ ಚಾಣಕ್ಯ ನಡೆಯಿಂದ ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿದರು. ಎದುರಾಳಿ ಕುಸ್ತಿ ಪಟುವನ್ನು ಅಂಕಣದಿಂದ ಹೊರಕ್ಕೆ ದೂಡಿದ ಅವರು ಅಂಕದ ಬೇಟೆಗೆ ಚುರುಕು ಮುಟ್ಟಿಸಿದರು.

ನಂಬರ್‌1 ಕುಸ್ತಿ ಪಟುವಿಗೆ ಆಘಾತ

ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿನೇಶ್‌ ಪೋಗಟ್‌ ಹಾಗೂ ಜಪಾನ್‌ನ ಯುಯಿ ಸುಸಾಕಿ ಅವರ ನಡುವೆ ಭರ್ಜರಿ ಕಾಳಗ ಕಂಡು ಬಂದಿತು. ಈ ವೇಳೆ ಉಭಯ ಆಟಗಾರರ್ತಿಯರು ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಆದರೆ ಈ ವೇಳೆ ವಿನೇಶ್‌ ರೆಫ್ರಿ ನೀಡಿದ್ದ ಸಮಯದಲ್ಲಿ ಅಂಕಗಳನ್ನು ಗಳಿಸದೇ ಇದ್ದಾಗ, ಎದುರಾಳಿಗೆ ಒಂದು ಅಂಕ ನೀಡಲಾಯಿತು. ಹೀಗೆ ಪಂದ್ಯದಲ್ಲಿ ಎರಡು ಬಾರಿ ಆಯಿತು. ಇದು ವಿನೇಶ್‌ ಅವರ ಹಿನ್ನಡೆಗೆ ಕಾರಣವಾಯಿತು.

ಕೊನೆಯ 10 ಸೆಕೆಂಡ್‌

ಅಂಕ ಬೇಟೆಯಲ್ಲಿ ವಿನೇಶ್‌ 0-2 ರಿಂದ ಹಿನ್ನಡೆ ಅನುಭವಿಸಿದರೂ ಧೃತಿ ಗೆಡದೆ, ಮಾಜಿ ಒಲಿಂಪಿಕ್ಸ್‌ ಚಾಂಪಿಯನ್ ಆಟಗಾರ್ತಿಗೆ ಖೆಡ್ಡಾ ತೋಡಿದರು. ಕೊನೆಯ 10 ಸೆಕೆಂಡ್‌ಗಳಲ್ಲಿ ವಿನೇಶ್‌ ಎದುರಾಳಿಯ ಕಾಲುಗಳನ್ನು ಹಿಡಿದು ಮ್ಯಾಟ್‌ಗೆ ಮುಟ್ಟಿಸುವಲ್ಲಿ ಸಫಲರಾಗಿ ಎರಡು ಮಹತ್ವದ ಅಂಕಗಳನ್ನು ಗಳಿಸಿದರು. ಹೀಗಾಗಿ ಇವರು ಸುಲಭವಾಗಿ ಪಂದ್ಯ ಗೆದ್ದು ಅಚ್ಚರಿ ಮೂಡಿಸಿದರು.

Story first published: Tuesday, August 6, 2024, 17:16 [IST]
Other articles published on Aug 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+