ಮಹಿಳಾ ರೆಸ್ಲರ್ ತಳ್ಳಾಡಿದ ಪೊಲೀಸ್; ಕಣ್ಣೀರಿಟ್ಟ ವಿನೀಶ್ ಫೋಗಟ್, ಪದಕ ವಾಪಸ್ ಪಡೆಯಿರಿ ಎಂದ ಪೂನಿಯಾ!

ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ( WFI ) ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿ ಕಿರುಕುಳದ ಗಂಭೀರ ಆರೋಪ ಮಾಡಿರುವ ಭಾರತದ ರೆಸ್ಲರ್‌ಗಳು ಕಳೆದ ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನ ಆಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಣ ತೊಟ್ಟಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಿ ಭಾರತದ ಟಾಪ್ ರೆಸ್ಲರ್‌ಗಳಾದ ವಿನೀಶ್ ಫೋಗಟ್, ಭಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲ್ಲಿಕ್ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ( WFI ) ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿ ಕಿರುಕುಳದ ಗಂಭೀರ ಆರೋಪವನ್ನು ಮಾಡಿದ್ದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಿ ಎಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ದೆಹಲಿ ಪೊಲೀಸರಿಗೆ ದೂರನ್ನೂ ಸಹ ನೀಡಿದ್ದರು. ಆದರೆ ದೂರು ನೀಡಿ ಮೂರು ತಿಂಗಳುಗಳು ಕಳೆದರೂ ಸಹ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಮತ್ತೆ ರೆಸ್ಲರ್‌ಗಳು ರೊಚ್ಚಿಗೆದ್ದಿದ್ದಾರೆ.
ಈ ಬಾರಿ ಏಳು ಮಹಿಳಾ ರೆಸ್ಲರ್‌ಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಆ ಪೈಕಿ ಓರ್ವ ಬಾಲಕಿ ಸಹ ಇದ್ದಾಳೆ ಎನ್ನಲಾಗಿದೆ. ಹೀಗೆ ಏಳು ರೆಸ್ಲರ್‌ಗಳು ದೂರು ನೀಡಿದರೂ ಯಾವುದೇ ಫಲ ಸಿಗದ ಕಾರಣ ರೆಸ್ಲರ್‌ಗಳು ಜಂತರ್ ಮಂತರ್ ಮೈದಾನದಲ್ಲಿಯೇ ಬೀಡುಬಿಟ್ಟು ಪ್ರತಿಭಟನೆ ಮುಂದುವರಿಸಿದ್ದಾರೆ.
ಇನ್ನು ದೆಹಲಿಯಲ್ಲಿ ಮಳೆಯಾಗಿ ಹಾಸಿಗೆಗಳು ಒದ್ದೆಯಾದ ಕಾರಣ ರೆಸ್ಲರ್‌ಗಳು 'ಫೋಲ್ಡೆಬಲ್ ಮ್ಯಾಸ್ಟ್ರೆಸ್‌ಗಳನ್ನು' ತಂದಿದ್ದರು. ಆದರೆ ಇದಕ್ಕೆ ಅನುವು ಮಾಡಿಕೊಡದ ದೆಹಲಿ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ರೆಸ್ಲರ್‌ಗಳು ಕಣ್ಣೀರು ಹಾಕಿದ್ದಾರೆ.
ಈ ಘಟನೆಯಿಂದ ಕಣ್ಣೀರು ಹಾಕಿದ ರೆಸ್ಲರ್ ವಿನೇಶ್ ಫೋಗಟ್ ಈ ದಿನವನ್ನು ನೋಡಲು ನಾವು ದೇಶಕ್ಕಾಗಿ ಪದಕ ಗೆದ್ದೆವಾ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಪ್ರತಿಭಟನಾನಿರತ ರೆಸ್ಲರ್‌ಗಳನ್ನು ತಳ್ಳಿದ್ದಾರೆ, ಮಹಿಳಾ ಪೊಲೀಸರು ಸ್ಥಳದಲ್ಲಿ ಯಾಕಿಲ್ಲ, ಈ ರೀತಿ ಪ್ರವರ್ತಿಸಲು ನಾವೇನೂ ಕ್ರಿಮಿನಲ್‌ಗಳಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಗಳಿಂದ ಮನನೊಂದ ನಾಲ್ಕು ಅಂತರರಾಷ್ಟ್ರೀಯ ರೆಸ್ಲಿಂಗ್ ಪದಕಗಳನ್ನು ಗೆದ್ದ ಭಜರಂಗ್ ಪೂನಿಯಾ ನನ್ನ ಪದಕಗಳನ್ನೆಲ್ಲಾ ಮರಳಿ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಎನ್‌ಡಿಟಿವಿ ಜತೆ ಮಾತನಾಡಿದಾಗ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications