Olympics 2024: ವಿನೇಶ್ ಅನರ್ಹ ಗೊಳಿಸಿದ್ದು ಷಡ್ಯಂತ್ರ ಆಗಿರಬಹುದು?
ಮಂಗಳವಾರ ತಡ ರಾತ್ರಿ ಮಹಿಳೆಯರ 50 ಮೀಟರ್ ಫ್ರಿ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ವಿನೇಶ್ ಪೋಗಟ್ ಇತಿಹಾಸ ನಿರ್ಮಿಸಿದ್ದರು. ಆದರೆ ಬುಧವಾರ ಬೆಳಗ್ಗೆ ಅವರಿಗೆ ಆಘಾತ ಕಾದಿತ್ತು. ಅವರ ತೂಕದಲ್ಲಿ ಏರಿಕೆ ಆಗಿದ್ದರಿಂದ ಅವರನ್ನು ಒಲಿಂಪಿಕ್ಸ್ ಕ್ರೀಡಾ ಕೂಟದಿಂದ ಅನರ್ಹ ಗೊಳಿಸಲಾಗಿದೆ.
ಬುಧವಾರ ಕುಸ್ತಿ ಪಟುಗಳ ತೂಕವನ್ನು ಒಲಿಂಪಿಕ್ಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಈ ವೇಳೆ ವಿನೇಶ್ ಪೋಗಟ್ ಅವರ ನಿಗದಿತ ತೂಕಕ್ಕಿಂತ 100 ಗ್ರಾಮ್ ಹೆಚ್ಚಿನ ತೂಕವನ್ನು ಹೊಂದಿದ್ದರು ಎಂದು ತಿಳಿದು ಬಂದಿದ್ದು, ಅವರನ್ನು ಅನರ್ಹ ಗೊಳಿಸಲಾಗಿದೆ. ಈಗ ಈ ಸಂಬಂಧ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕ್ರೀಡಾ ಪಟು ವಿಜೇಂದರ್ ಸಿಂಗ್ ತುಟಿ ಬಿಚ್ಚಿದ್ದಾರೆ.

ವಿಜೇಂದರ್ ಹೇಳಿದ್ದೇನು?
ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಅನರ್ಹ ಗೊಳಿಸಿರುವುದು ಸಹ ಒಂದು ಪಿತೂರಿ ಆಗಿರಬಹುದು ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಆರೋಪಿಸಿದ್ದಾರೆ. ವಿನೇಶ್ ಅವರಂತಹ ಸ್ಟಾರ್ ಆಟಗಾರರಿಗೆ ತೂಕ ಕಡಿಮೆ ಮಾಡುವ ತಂತ್ರ ಮೊದಲಿನಿಂದಲೂ ಗೊತ್ತಿರುತ್ತದೆ ಎಂದು ಅವರು ಹೇಳಿದ್ದಾರೆ. ವಿಜೇಂದರ್ ಒಲಿಂಪಕ್ಸ್ ಪದಕ ಗೆದ್ದ ಮೊದಲ ಪುರುಷ ಬಾಕ್ಸರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.
ಅಥ್ಲಿಟ್‌ಗಳು ಒಂದು ರಾತ್ರಿಯಲ್ಲಿ ಐದರಿಂದ ಆರು ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅಂತಹದ್ದರಲ್ಲಿ 100 ಗ್ರಾಮ್ ಹೆಚ್ಚಾಗಿದೆ ಎಂದರೆ ತಮಾಷೆಯ ಮಾತು ಅಲ್ಲವೇ ಅಲ್ಲ. ಅಥ್ಲಿಟ್‌ಗಳಿಗೆ ಬಾಯಾರಿಕೆ ಹಾಗೂ ಹಸಿವನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಚೆನ್ನಾಗಿ ಅರಿವಿರುತ್ತದೆ. ಭಾರತದ ಕ್ರೀಡಾ ಪಟುಗಳು ಉನ್ನತ ಸಾಧನೆ ಮಾಡುತ್ತಿರುವುದನ್ನು ನೋಡಲು ಬೇರೆಯವರಿಗೆ ಆಗುತ್ತಿಲ್ಲ ಎಂದು ವಿಜೇಂದರ್ ತಿಳಿಸಿದ್ದಾರೆ.

ವಿನೇಶ್ ಪೋಗಟ್ ಒಬ್ಬ ಗಟ್ಟಿಗಿತ್ತಿ.. ಹಲವು ಸಮಸ್ಯೆಗಳನ್ನು ಮೆಟ್ಟಿ ನಿಂತು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ. ಇವರ ನೋವು ಈಗ ಯಾರಿಗೆ ಅರ್ಥವಾಗಬೇಕು ಹೇಳಿ. ಅವರಿಗೂ ಸಹ ತನ್ನಿಂದ ಇಂತಹ ಒಂದು ತಪ್ಪು ಆಗುತ್ತದೆ ಎಂದು ಅರಿವು ಇರಲು ಸಹ ಸಾಧ್ಯವೇ ಇಲ್ಲ. ಅವರು ಈ ಒಂದು ಆಘಾತದಿಂದ ಬೇಗ ಹೊರ ಬಂದು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಮೇಲ್ಮನವಿ
ಮಹಿಳಾ ಸ್ಟಾರ್ ಕುಸ್ತಿ ಪಟು ವಿನೇಶ್ ಅವರನ್ನು ಅನರ್ಹ ಗೊಳಿಸಿದ್ದು ಆಘಾತ ಕಾರಿ ವಿಷಯ. ಕೆಲವು ದಿನಗಳ ಹಿಂದೆ ಒಲಿಂಪಿಕ್ಸ್ ಗ್ರಾಮದಲ್ಲಿ ವಿನೇಶ್ ಅವರನ್ನು ಭೇಟಿ ಆಗಿ ಬೆಂಬಲ ಸೂಚಿಸಿದ್ದೆ. ಇನ್ನು ವಿನೇಶ್ ಅವರ ಅನರ್ಹತೆಯನ್ನು ಮರು ಪರಿಶೀಲಿಸುವಂತೆ ಈಗಾಗಲೇ UWW ಗೆ ಮನವಿ ಮಾಡಲಾಗಿದೆ. ರಾತ್ರಿ ಇಡಿ ಬೆವರು ಹರಿಸಿದ್ದಾಳೆ. ಅಲ್ಲದೆ ಡಿಹ್ಯಾಡ್ರೆಷನ್‌ನಿಂದ ಬಳಲಿ ಪ್ಯಾರಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತೀಯರು ವಿನೇಶ್ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ವಿಶ್ವಾಸ ಇದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿಟಿ ಉಷಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications