ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದ ವಿನೇಶ್ ಪೋಗಟ್‌ಗೆ ಹಿನ್ನಡೆ: ಶೋಕಾಸ್ ನೋಟಿಸ್ ಜಾರಿ
ಅಶಿಸ್ತು ಮತ್ತು ಡೋಪಿಂಗ್ ವಿರೋಧಿ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯೂಎಫ್‌ಐ) ಶನಿವಾರ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಜೂನ್ 26, 2026ರ ವರೆಗೆ ದೇಶೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಫೆಡರೇಶನ್ ನಿಷೇಧಿಸಿದೆ. ಇವರು ನಿವೃತ್ತಿಯನ್ನು ವಾಪಸ್ ಪಡೆದಿದ್ದರು. ಅಲ್ಲದೆ ಗೊಂಡಾದಲ್ಲಿ ನಡೆಯಲಿರುವ ರಾಷ್ಟ್ರೀಯ ಶ್ರೇಯಾಂಕಿತ ಕುಸ್ತಿಯಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದರು. 18 ತಿಂಗಳ ಬಳಿಕ ಕುಸ್ತಿ ಅಖಾಡಕ್ಕೆ ಮರಳುವ ಕನಸು ಕಂಡಿದ್ದ ವಿನೇಶ್‌ಗೆ ಇದು ದೊಡ್ಡ ಹಿನ್ನಡೆಯಾಗಿದೆ.
15 ಪುಟಗಳ ನೋಟಿಸ್‌ನಲ್ಲಿ ಭಾರತೀಯ ಕುಸ್ತಿ ಸಂಸ್ಥೆ ವಿನೇಶ್ ಅವರ ಮೇಲೆ ಕೆಲವು ಗಂಭೀರ ಆರೋಪಗಳನ್ನು ಮಾಡಿದೆ. ಇವರ ನಡವಳಿಕೆ ದೇಶದ ಗೌರವಕ್ಕೆ ಧಕ್ಕೆ ಮಾಡಿದೆ. ಅಲ್ಲದೆ ಕ್ರೀಡೆಗೆ ಹಾನಿ ಮಾಡಿದೆ ಎಂದು ಫೆಡರೇಶನ್ ಹೇಳುತ್ತದೆ. ಇವರ ನಡೆ ಡಬ್ಲ್ಯೂಎಫ್‌ಐ ನಿಯಮ, ಯುನೈಟೆಡ್ ವರ್ಲ್ಡ್ ಕುಸ್ತಿಯ ಅಂತರರಾಷ್ಟ್ರೀಯ ನಿಯಮಗಳು ಮತ್ತು ಡೋಪಿಂಗ್ ವಿರೋಧಿ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಲಾಗಿದೆ. ಸಂಸ್ಥೆ ವಿನೇಶ್ ಅವರಿಗೆ ನಾಲ್ಕು ಆರೋಪಗಳ ಮೇಲೆ ಸ್ಪಷ್ಟತೆ ಕೇಳಿದೆ.

ಸಂಸ್ಥೆ ವಿನೇಶ್ ಅವರಲ್ಲಿ ಪ್ಯಾರಿಸ್‌ನಲ್ಲಿ ನಡೆದ 2024ರ ಒಲಿಂಪಿಕ್ಸ್‌ನಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಆಗದೇ ಇರುವ ಕಾರಣವನ್ನು ಸಹ ಕೇಳಿದೆ. ಡೋಪಿಂಗ್ ವಿರೋಧಿ ನಿಯಮಗಳಡಿ ನಿಗದಿತ ಸ್ಥಳದಲ್ಲಿ ಇಲ್ಲದೇ ಇರುವ ಆರೋಪ, ಮಾರ್ಚ್ 2024ರಲ್ಲಿ ನಡೆದ ಆಯ್ಕೆ ಪ್ರಕ್ರಿಯಿಯಲ್ಲಿ ವಿನೇಶ್ ಎರಡು ವಿಭಿನ್ನ ತೂಕ ವಿಭಾಗಗಳಲ್ಲಿ ಸ್ಪರ್ಧಿಸುವುದ ಸಹ ಸೇರಿದೆ.
ಕುಸ್ತಿ ಸಂಸ್ಥೆ ಹೇಳುವುದು ಏನು?
ಡಬ್ಲ್ಯೂಎಫ್‌ಐ ತಾನು ನೋಟಿಸ್ ನೀಡಿದಕ್ಕೆ ಕಾರಣಗಳನ್ನು ಸಹ ಸ್ಪಷ್ಟವಾಗಿ ತಿಳಿಸಿದೆ. ಒಬ್ಬ ಕುಸ್ತಿ ಪಟು ನಿವೃತ್ತಿಯನ್ನು ಹಿಂಪಡೆದಲ್ಲಿ ಡೋಪಿಂಗ್ ವಿರೋಧಿ ನಿಯಮಗಳ ಅಡಿಯಲ್ಲಿ ಆರು ತಿಂಗಳ ನೋಟಿಸ್ ಅವಧಿಯನ್ನು ಇವರು ಪೂರ್ಣಗೊಳಿಸಿಲ್ಲ. ಹೀಗಾಗಿ ದೇಶೀಯ ಮಟ್ಟದಲ್ಲಿ ಯಾವುದೇ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಕುಸ್ತಿ ಅಖಾಡಕ್ಕೆ ಕಮ್‌ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದ ವಿನೇಶ್ ಪೋಗಟ್ಗೆ ಹಿನ್ನಡೆಯಾಗಿದೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ನೀವು ಮತ್ತೆ ಕುಸ್ತಿ ಅಖಾಡಕ್ಕೆ ಇಳಿಯಲು ಬಯಸಿದ್ದರೆ. ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯನ್ನು ನೀವು ಮಾಡಿಲ್ಲ ಎಂದು ಸಂಸ್ಥೆ ಖಚಿತಪಡಿಸಿಕೊಳ್ಳಬೇಕು ಎಂದು ಕುಸ್ತಿ ಪಟು ವಿನೇಶ್‌ಗೆ ನೀಡಿದ ನೋಟಿಸ್‌ನಲ್ಲಿ ಸಂಸ್ಥೆ ತಿಳಿಸಿದೆ.
ಕ್ರಿಕೆಟ್ ಆಟಗಾರರಿಗೂ ಶಾಕ್
ನಾಡಾ ಈಗಾಗಲೇ ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟ್ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಶಫಾಲಿ ವರ್ಮಾಗೂ ನೋಟಿಸ್ ನೀಡಿದೆ. ಈ ಇಬ್ಬರೂ ಆಟಗಾರರು ನೋಂದಾಯಿತ ಪರೀಕ್ಷಾ ಪೂಲ್ (ಆರ್‌ಟಿಪಿ)ನಲ್ಲಿ ಇವರು ಭಾಗವಹಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications