Vinesh Phogat: ಭಾರದ ಮನಸ್ಸಿನಿಂದ ಒಲಿಂಪಿಕ್ಸ್ ಗ್ರಾಮ ಬಿಟ್ಟ ವಿನೇಶ್, ಕೋರ್ಟ್ ಆದೇಶ ವಿಳಂಬ ಏಕೆ?
ಭಾರತದ ಸ್ಟಾರ್ ಕುಸ್ತಿ ಪಟು ವಿನೇಶ್ ಪೋಗಟ್ ಮಹಿಳೆಯರ 50 ಕೆ.ಜಿ ಫ್ರಿ ಸ್ಟೈಲ್ ವಿಭಾಗದ ಫೈನಲ್‌ಗೂ ಮುನ್ನ ಅನರ್ಹರಾಗಿ ನಿರಾಸೆ ಅನುಭವಿಸಿದ್ದರು. ಹೀಗಾಗಿ ಅವರ ಕೊರಳಿಗೆ ಯಾವುದೆ ಪದಕ ಬಿದ್ದಿಲ್ಲ. ತಮ್ಮನ್ನು ಅನರ್ಹ ಗೊಳಿಸಿದ್ದನ್ನು ಪ್ರಶ್ನಿಸಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಕೋರ್ಟ್ ಇನ್ನು ತನ್ನ ತೀರ್ಮಾನವನ್ನು ಬಹಿರಂಗ ಪಡಿಸಿಲ್ಲ.
ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ ಶೀಘ್ರದಲ್ಲಿ ತನ್ನ ನಿರ್ಣಯ ತೆಗೆದುಕೊಳ್ಳ ಬಹುದು ಎಂದು ವಿನೇಶ್ ಭಾವಿಸಿದ್ದರು. ಆದರೆ ಒಲಿಂಪಿಕ್ಸ್ ಕ್ರೀಡಾ ಕೂಟ ಮುಗಿದರೂ ಕೋರ್ಟ್ ಇನ್ನು ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ. ಹೀಗಾಗಿ ಒಲಿಂಪಿಕ್ಸ್ ಕ್ರೀಡಾ ಕೂಟದ ಸಮಯವೂ ಮುಗಿದಿದ್ದರಿಂದ ವಿನೇಶ್ ಒಲಿಂಪಿಕ್ಸ್ ಗ್ರಾಮವನ್ನು ಖಾಲಿ ಮಾಡಿದ್ದಾರೆ.

ಖಾಲಿ ಕೈಯಲ್ಲಿ ವಾಪಸ್
ವಿನೇಶ್ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕದೊಂದಿಗೆ ಒಲಿಂಪಿಕ್ಸ್ ಗ್ರಾಮಕ್ಕೆ ಗುಡ್ ಬೈ ಹೇಳಬಹುದು ಎಂದು ಭಾವಿಸಿದ್ದರು. ಆದರೆ, ಆಸೆ ಫಲಿಸಲಿಲ್ಲ. ಅವರು ಕ್ರೀಡಾ ಗ್ರಾಮದಿಂದ ಬರೀ ಗೈಯಲ್ಲಿ ವಾಪಸ್ ಆಗಿದ್ದಾರೆ. ವಿನೇಶ್ ಅವರು ಕ್ರೀಡಾ ಗ್ರಾಮವನ್ನು ತೊರೆಯುತ್ತಿರುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿವೆ.
ವಿನೇಶ್ ಪೋಗಟ್ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೋರ್ಟ್ ತೀರ್ಪು ಇನ್ನು ಬಂದಿಲ್ಲ. ಹೀಗಾಗಿ ವಿನೇಶ್ ಅವರ ಕಾಯುವಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕೋರ್ಟ್‌ನಲ್ಲಿ ವಿನೇಶ್ ಜಂಟಿಯಾಗಿ ಬೆಳ್ಳಿ ಪದಕವನ್ನು ನೀಡಬೇಕೆಂದು ಮನವಿಯನ್ನು ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆಯ ಈಗ ಪೂರ್ಣಗೊಂಡಿದೆ.
ಭಾರತೀಯ ಕ್ರೀಡಾಭಿಮಾನಿಗಳ ಚಿತ್ತ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೇಲೆ ನೆಟ್ಟಿದೆ. ಇಂದು ವಿನೇಶ್ ಪದಕದ ಭವಿಷ್ಯ ನಿರ್ಧಾರವಾಗುವುದಾಗಿ ತಿಳಿದು ಬಂದಿತ್ತು. ಆದರೆ ಆದರೆ ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ವಿನೇಶ್ ಅವರು ಆಗಸ್ಟ್ 14 ರ ವರೆಗೆ ಕಾಯಬೇಕಾಗುತ್ತದೆ ಎಂದು ವರದಿ ಮಾಡಿದೆ.
100 ಗ್ರಾಮ್ ಹೆಚ್ಚಳ
ವಿನೇಶ್ ಪೋಗಟ್ ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್ ವಿಭಾಗದಲ್ಲಿ ಸೆಮಿಫೈನಲ್ ಗೆದ್ದು, ಫೈನಲ್ ಪ್ರವೇಶಿಸಿದ್ದ ಮೊದಲ ಭಾರತೀಯ ಮಹಿಳಾ ಕುಸ್ತಿ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಫೈನಲ್‌ಗೂ ಮುನ್ನ ದಿನ ನಡೆಯುವ ತೂಕ ಪರೀಕ್ಷೆಯಲ್ಲಿ ವಿನೇಶ್ ಅರ್ನಹರಾಗಿದ್ದಾರೆ. ಅವರು ನಿಗದಿತ ತೂಕಕ್ಕಿಂತ ನೂರು ಗ್ರಾಮ್ ತೂಕ ಹೆಚ್ಚು ಹೊಂದಿದ್ದರಿಂದ ಅವರನ್ನು ಡಿಸ್‌ಕ್ವಾಲಿಫೈ ಮಾಡಲಾಯಿತು. ಹೀಗಾಗಿ ವಿನೇಶ್ ಅವರೊಂದಿಗೆ ಸೆಮೀಸ್‌ನಲ್ಲಿ ಕಾದಾಟ ನಡೆಸಿದ್ದ ಕುಸ್ತಿ ಪಟು ಫೈನಲ್‌ಗೆ ಅರ್ಹತೆ ಪಡೆದರು. ವಿನೇಶ್ ಅನರ್ಹತೆಯನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೊಗಿದ್ದಾರೆ.
ಮೂರನೇ ಒಲಿಂಪಿಕ್ಸ್
ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅವರು ಸ್ಟಾರ್ ಕುಸ್ತಿ ಪಟುಗಳನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದರು. ಈ ವೇಳೆ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರ ಸವಾಲನ್ನು ಮೀರಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಅನರ್ಹತೆಯಿಂದಾಗಿ ಅಂಗಳಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದರಿಂದ ನಿರಾಸೆ ಗೊಂಡ ವಿನೇಶ್ ಕುಸ್ತಿಗೆ ನಿವೃತ್ತಿ ಘೋಷಿಸಿದರು. ವಿನೇಶ್‌ಗೆ ಪ್ರಪಂಚದಾದ್ಯಂತದ ಕುಸ್ತಿಪಟುಗಳಿಂದ ಬೆಂಬಲ ಸಿಕ್ಕಿದೆ. ವಿನೇಶ್ ಗೆ ಬೆಳ್ಳಿ ಪದಕ ನೀಡಲು ಸ್ಟಾರ್ ಅಥ್ಲೀಟ್ ಗಳು ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದಾರೆ. ವಿನೇಶ್ ತಮ್ಮ ವೃತ್ತಿ ಜೀವನದ ಮೂರನೇ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಹೊಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications