ವರ್ಲ್ಡ್ ರಸ್ಲಿಂಗ್ ಚಾಂಪಿಯನ್ ಶಿಪ್ಸ್ ನಿಂದ ವಿನೇಶ್ ಫೋಗಟ್ ಹೊರಕ್ಕೆ

ನವದೆಹಲಿ, ಸೆಪ್ಟೆಂಬರ್ 23: ಇಂಡೋನೇಷ್ಯಾ ಗೇಮ್ಸ್ ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದ ಭಾರತದ ಸ್ಟಾರ್ ರಸ್ಲರ್ ವಿನೇಶ್ ಫೋಗಟ್ ಅವರು ಮುಂಬರಲಿರುವ ವರ್ಲ್ಡ್ ರಸ್ಲಿಂಗ್ ಚಾಂಪಿಯನ್ ಶಿಪ್ಸ್ ನಿಂದ ಹೊರ ಬಿದ್ದಿದ್ದಾರೆ. ವಿನೇಶ್ ಮೊಣಕೈ ಗಾಯಕ್ಕೆ ಈಡಾಗಿರುವುದು ಇದಕ್ಕೆ ಕಾರಣ.
ಲಕ್ನೋದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಕೇಂದ್ರದಲ್ಲಿ ಶುಕ್ರವಾರ (ಸೆ. 21) ಅಭ್ಯಾನ ನಡೆಸುತ್ತಿದ್ದಾಗ ವಿನೇಶ್ ಗಾಯಕ್ಕೊಳಗಾದರು. ವಿನೇಶ್ ಅವರ ಕೈಯ ಲಿಗಮೆಂಟ್ (ಅಸ್ಥಿರಜ್ಜು)ಗೆ ಗಂಭೀರ ಗಾಯವಾಗಿತ್ತು. ಹೀಗಾಗಿ ಅಕ್ಟೋಬರ್ 20-28ರ ವರೆಗೆ ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯಲಿರುವ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
24ರ ಹರೆಯದ ಫೋಗಟ್ ಅವರಿಗೆ ಬುಡಾಪೆಸ್ಟ್ ನಲ್ಲಿ ನಡೆಯಲಿರುವ ಪ್ರಮುಖ ಚಾಂಪಿಯನ್ ಶಿಪ್ ನಿಂದ ಹೊರಗಿದ್ದು, ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿರುವುದರಿಂದ ವಿನೇಶ್ ಚಿಕಿತ್ಸೆಗಾಗಿ ಮುಂಬೈಗೆ ಪಯಣಿಸಿದ್ದಾರೆ.
Story first published: Sunday, September 23, 2018, 23:36 [IST]
Other articles published on Sep 23, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications