Paris Olympics: ವಿನೇಶ್ ಪೋಗಟ್ ಕೋರ್ಟ್ ಮುಂದೆ ಹೇಳಿದ್ದೇನು: ತೀರ್ಪು ಯಾವಾಗ?
ಭಾರತದ ಸ್ಟಾರ್ ಕುಸ್ತಿ ಪಟು ವಿನೇಶ್ ಪೋಗಟ್ ಫೈನಲ್‌ಗೂ ಮುನ್ನ ಅನರ್ಹಗೊಂಡಿದ್ದರು. 50 ಕೆ.ಜಿ ಫ್ರಿ ಸ್ಟೈಲ್ ವಿಭಾಗದ ಮಹಿಳೆಯರ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ನಿಗದಿತ ತೂಕಕ್ಕಿಂತ 100 ಗ್ರಾಮ್ ಹೆಚ್ಚಿನ ತೂಕವನ್ನು ಹೊಂದಿದ್ದರು. ಆದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ (ಸಿಎಸ್ಎ) ಮೊರೆ ಹೋಗಿದ್ದರು. ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ತೂಕ ಹೇಗೆ ಹೆಚ್ಚಾಯಿತು? ಇದಕ್ಕೆ ಈಗ ವಿನೇಶ್ ಫೋಗಟ್ ಉತ್ತರ ನೀಡಿದ್ದಾರೆ.
ವಿನೇಶ್ ಅವರ ಅನರ್ಹತೆ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ವಿಚಾರಣೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ನಡೆಸುತ್ತಿದೆ. ಈ ವೇಳೆ ವಿನೇಶ್ ಪರ ವಕೀಲರು ತೂಕ ಹೆಚ್ಚಾಗಲು ಕಾರಣಗಳನ್ನು ತಿಳಿಸಿದ್ದಾರೆ. ಕುಸ್ತಿ ಪಂದ್ಯವನ್ನು ಚಾಂಪ್ ಡಿ ಮಾರ್ಸ್ ಅರೆನಾದಲ್ಲಿ ನಡೆಸಲಾಯಿತು. ಈ ಮೈದನಾದಿಂದ ಒಲಿಂಪಿಕ್ ಗ್ರಾಮ ದೂರ ಇದ್ದಿದ್ದರಿಂದ ವಿನೇಶ್‌ಗೆ ತೂಕ ಇಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಮೊದಲ ದಿನ ವಿನೇಶ್ ದೇಹ ದಣಿದಿತ್ತು. ಆ ದಿನವೇ ಅವರು ಮೂರು ಪಂದ್ಯಗಳನ್ನು ಆಡಿದ್ದರು. ಸಂಜೆ ವೇಳೆಗೆ ಅವರ ತೂಕ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ನ್ಯಾಯಲಾಯದಲ್ಲಿ ವಕೀಲರು ಮಂಡಿಸಿದ ವಾದ ಏನು?
- ಬೆಳಗ್ಗೆ ವಿನೇಶ್ ಅವರಿಗೆ ತೂಕ ಇಳಿಸಿಕೊಳ್ಳಲು ಸಮಯ ಸಿಗಲಿಲ್ಲ.
- 100 ಗ್ರಾಮ್ ತೂಕ ಹೆಚ್ಚಾಗಿರುವುದ ದೊಡ್ಡ ವಿಷಯವೇ ಅಲ್ಲ.
- ಬೇಸಗಿಯ ವೇಳೆ ದೇಹದಲ್ಲಿ ನೀರಿನ ಅಂಶ ಹೆಚ್ಚಾಗುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ. ಹೀಗಾಗಿ 100 ಗ್ರಾಮ್ ಹೆಚ್ಚಾಗಿದೆ.
- ಒಂದು ದಿನದಲ್ಲಿ 3 ಸ್ಪರ್ಧೆಗಳು ಇದ್ದವು. ಹೀಗಾಗಿ ದೇಹದಲ್ಲಿ ರಕ್ತ ಸಂಚಾರವೂ ಹೆಚ್ಚಾಗುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಅಗಸ್ಟ್ 13 ರಂದು ತೀರ್ಪು ಸಾಧ್ಯತೆ
ಕೋರ್ಟ್ ಮುಂದೆ ವಿನೇಶ್ ಪರ ವಕೀಲರು, ಫೈನಲ್‌ನಿಂದ ಇವರನ್ನು ಅನರ್ಹಗೊಳಿಸಲಾಗಿದೆ. ಹೀಗಾಗಿ ಬಹಳ ಬದಲಾವಣೆಗಳು ನಡೆದವು. ಶ್ರಮಪಟ್ಟು ಇವರು ಸೆಮಿಫನಲ್ಲಿ ಜಯ ಸಾಧಿಸಿದ್ದರು. ಹೀಗಾಗಿ ಅವರು ಬೆಳ್ಳಿ ಪದಕಕ್ಕೆ ಅರ್ಹರು ಎಂದು ವಾದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ CSA ತನ್ನ ನಿರ್ಧಾರವನ್ನು ಆಗಸ್ಟ್ 13 ರಂದು ನೀಡಬಹುದು. ಆದರೆ ಅದಕ್ಕೂ ಮುನ್ನವೇ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ವಿನೇಶ್ ಫೋಗಟ್ ನತ್ತ ಬೊಟ್ಟು ತೋರಿಸುತ್ತಿದೆ.

ಐಒಎ ಹೇಳಿದ್ದೇನು?
ಕುಸ್ತಿ, ಬಾಕ್ಸಿಂಗ್ ಮತ್ತು ಜೂಡೋದಂತಹ ಕ್ರೀಡೆಗಳಲ್ಲಿ ತೂಕವನ್ನು ನಿಯಂತ್ರಿಸಲು ಐಒಎ ವೈದ್ಯಕೀಯ ತಂಡವನ್ನು ಹೊಂದಿರುತ್ತದೆ. ವಿನೇಶ್ ಅವರು ತೂಕ ಹೆಚ್ಚಾಗಲು ಅವರೇ ಕಾರಣ ಎಂದು ಅಧ್ಯಕ್ಷೆ ಪಿಟಿ ಉಷಾ ತಿಳಿಸಿದ್ದಾರೆ. ಅಥ್ಲೀಟ್‌ಗಳ ತೂಕವನ್ನು ಗಮನದಲ್ಲಿಟ್ಟುಕೊಳ್ಳುವುದು ತರಬೇತುದಾರರ ಕರ್ತವ್ಯ, ಐಒಎದಲ್ಲ ಎಂದಿದ್ದಾರೆ. ಭಾರತೀಯ ಕ್ರೀಡಾಪಟುಗಳು ಪರ್ಸನಲ್ ಕೋಚ್ ಹೊಂದಿದ್ದಾರೆ. ಈ ವಿಷಯಕ್ಕೆ ಐಒಎಗೆ ಯಾವುದೇ ಸಂಬಂಧ ಇಲ್ಲ ಎಂದು ಕಡ್ಡಿ ಮುರಿದಂತೆ ಅಧಿಕಾರಿಗಳು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications