ವಿನೇಶ್ ಪೋಗಟ್ ಭಾರತದ ಸ್ಟಾರ್ ಕುಸ್ತಿ ಪಟು.. ಇವರು ಅಂಗಳಕ್ಕೆ ಇಳಿದರೆ ಮೆಡಲ್ ಫಿಕ್ಸ್.. ವಿನೇಶ್ ಪೋಗಟ್ ಅವರ ಮನೆಯಲ್ಲಿ ಎಲ್ಲ ಕ್ರೀಡಾ ಕೂಟದ ಪದಕಗಳು ಇದ್ದವು. ಆದರೆ ಅವರ ಆ ಒಂದು ತಪ್ಪು ಅವರನ್ನು ಕ್ರೀಡಾ ಕೂಟದಿಂದಲೇ ಹೊರ ಹಾಕುವಂತೆ ಮಾಡಿತ್ತು.
ವಿನೇಶ್ ಪೋಗಟ್ ಅವರ ಆಟವನ್ನು ಕಂಡವರು ಯಾರು ಈ ಬಾರಿ ಅವಳು ಖಾಲಿ ಕೈಯಲ್ಲಿ ಬರಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ಅಂತಹ ಆಟವನ್ನು ಅವರು ಆಡಿದ್ದರು. ವಿಶ್ವದ ನಂಬರ್ 1 ಕುಸ್ತಿ ಪಟುವನ್ನು ಸೋಲಿಸಿದ ಬಳಿಕ ಅವರ ಆತ್ಮ ವಿಶ್ವಾಸ ಇಮ್ಮಡಿಯಾಗಿತ್ತು. ಸೆಮೀಸ್‌ನಲ್ಲೂ ಕ್ಯೂಬಾ ಆಟಗಾರ್ತಿಯನ್ನು ಬಗ್ಗು ಬಡೆದಿದ್ದರು. ಫೈನಲ್‌ನಲ್ಲಿ ಬಂಗಾರ ಗೆದ್ದು ತವರಿಗೆ ಮರಳುವುದಾಗಿ ಭರವಸೆ ಮೂಡಿಸಿದ್ದರು. ಆದರೆ ಎಲ್ಲವೂ ಕಮರಿದೆ.

ಅಂದಹಾಗೆ ವಿನೇಶ್‌ಗೆ ಗಾಯ ಮೊದಲಿನಿಂದಲೂ ಕಾಡುತ್ತಲೇ ಇತ್ತು. ಟೊಕೊಯೋ ಒಲಿಂಪಿಕ್ಸ್‌ನಲ್ಲಿ ವಿನೇಶ್ ಗಾಯದ ಸಮಸ್ಯೆಯಿಂದ ಬಳಲಿ ದೂರ ಉಳಿದಿದ್ದಳು. ಈ ಬಾರಿ ಅವರ ಮೇಲೆ ಎಲ್ಲ ಕಣ್ಣು ಸಹ ನೆಟ್ಟಿದ್ದವು. ಅಲ್ಲದೆ ಮೈದಾನದಲ್ಲೂ ಅವರು ಭರ್ಜರಿ ಪ್ರದರ್ಶನವನ್ನು ಸಹ ನೀಡಿದ್ದರು. ಈ ಮೂಲಕ ಬಂಗಾರದ ಆಸೆಯನ್ನು ಚಿಗುರಿಸಿದ್ದರು. ಆದರೆ ಈಗ ಅವರ ಬಹುದಿನಗಳ ಆಸೆಗೆ ಪೆಟ್ಟು ಬಿದ್ದಿದೆ.
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕುಸ್ತಿ ಪಟುಗಳನ್ನು ಒಲಿಂಪಿಕ್ಸ್ ಅಸೋಸಿಯೇಷನ್ ದಿನವೂ ಪರೀಕ್ಷೆಗೆ ಒಳ ಪಡಿಸುತ್ತದೆ. ಮೊದಲು ಅವರ ಆರೋಗ್ಯ ತಪಾಸಣೆಯನ್ನು ನಡೆಸುವ ಅಸೋಸಿಯೇಷನ್ ಬಳಿಕ ತೂಕವನ್ನು ಪರೀಕ್ಷಿಸುತ್ತದೆ. ಈ ವೇಳೆ ಕ್ರೀಡಾ ಪಟುಗಳ ತೂಕ ಹೆಚ್ಚ ಆದಲ್ಲಿ ಅವರನ್ನು ಒಲಿಂಪಿಕ್ಸ್‌ನಿಂದ ಡಿಸ್ ಕ್ವಾಲಿಫೈ ಮಾಡಲಾಗುತ್ತದೆ.
ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್ ಕುಸ್ತಿ ಪಂದ್ಯಗಳು ಮಂಗಳವಾರ ಆರಂಭವಾದವು. ಈ ವೇಳೆ ಒಲಿಂಪಿಕ್ಸ್ ಅಸೋಸಿಯೇಷನ್ ಮಾನದಂಡದಡಿ ಕುಸ್ತಿ ಪಟುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವೇಳೆ ವಿನೇಶ್ ಸಹ ಪರೀಕ್ಷೆಗೆ ಒಳಪಟ್ಟಿದ್ದರು.
ಮಂಗಳವಾರ ಪಂದ್ಯಗಳನ್ನು ಆಡಿದ ಬಳಿಕ ವಿನೇಶ್‌ಗೆ ಎನರ್ಜಿ ಅವಶ್ಯಕತೆ ಇದ್ದೇ ಇರುತ್ತದೆ. ಈ ಎನರ್ಜಿ ಹಾಗೂ ವಿಟಾಮಿನ್‌ಗಳನ್ನು ಅವರು ಆಹಾರ ರೂಪದಲ್ಲಿ ಪಡೆಯಬೇಕಾಗುತ್ತದೆ. ಇದರಂತೆ ವಿನೇಶ್ ಊಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆಗ ಅವರ ತೂಕದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದು, ರಾತ್ರಿ ಇಡಿ ಅವರು ಬೆವರು ಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳವಾರವೇ ಅವರ ತೂಕ ಹೆಚ್ಚಾಗಿದ್ದು ಅವರ ಅರಿವೆಗೆ ಬಂದಿತ್ತು. ಅವರು ಹೀಗಾಗಿ ರಾತ್ರಿ ಇಡಿ ವ್ಯಾಯಾಮ ಮಾಡಿ ತೂಕ ನಷ್ಟಕ್ಕೆ ಮುಂದಾಗಿದ್ದರು. ಆದರೆ ನಿಗದಿತ ತೂಕಕ್ಕಿಂತ 100 ಗ್ರಾಮ್ ಹೆಚ್ಚು ತೂಕ ಹೊಂದಿದ್ದರಿಂದ ಅವರನ್ನು ಅನರ್ಹ ಗೊಳಿಸಲಾಗಿದೆ.
ಸೆಮಿಫೈನಲ್‌ನಲ್ಲಿ ವಿನೇಶ್ ವಿರುದ್ಧ ಸೋತ ಕ್ಯೂಬಾ ಆಟಗಾರ್ತಿ ಈಗ ಫೈನಲ್‌ನಲ್ಲಿ ಅದೃಷ್ಟ ಪರಿಕ್ಷೆ ನಡೆಸಲಿದ್ದಾರೆ.