'ಖೇಲ್ ರತ್ನ'ಕ್ಕೆ ಮತ್ತೆ ಸ್ಟಾರ್ ರಸ್ಲರ್ ವಿನೇಶ್ ಫೋಗಟ್ ಹೆಸರು ಶಿಫಾರಸು

ನವದೆಹಲಿ, ಮೇ 31: ಸ್ಟಾರ್ ರಸ್ಲರ್ ವಿನೇಶ್ ಫೋಗಟ್ ಹೆಸರನ್ನು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಿದೆ. ಇಲ್ಲಿಗೆ ಪೋಗಟ್ ಹೆಸರು ಖೇಲ್ ರತ್ನಕ್ಕೆ ಸತತ ಎರಡು ಬಾರಿ ಶಿಫಾರಸು ಮಾಡಿದಂತಾಗುತ್ತದೆ.
25ರ ಹರೆಯದ ವಿನೇಶ್ ಫೋಗಟ್ ಹೆಸರನ್ನು ಡಬ್ಲ್ಯೂಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅಂತಿಮಗೊಳಿಸಿ ಸೋಮವಾರ (ಜೂನ್ 1) ಶಿಫಾರಸು ಪತ್ರವನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಲಿದ್ದಾರೆ. 'ಖೇಲ್ ರತ್ನಕ್ಕೆ ನಮ್ಮಲ್ಲಿರುವ ಏಕೈಕ ಹೆಸರು ವಿನೇಶ್ ಫೋಗಟ್,' ಎಂದು ಡಬ್ಲ್ಯೂಎಫ್‌ಐ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.
ಕಳೆದ ವರ್ಷವೂ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಹೆಸರುಗಳು ಖೇಲ್ ರತ್ನಕ್ಕೆ ಶಿಫಾರಸಾಗಿತ್ತು. ಆದರೆ ಪ್ರಶಸ್ತಿಯು 2016ರ ಪ್ಯಾರಾಲಂಬಿಕ್ಸ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ಪಾಲಾಗಿತ್ತು. ವಿನೇಶ್ ಈ ಹಿಂದೆ 2016ರಲ್ಲಿ ಅರ್ಜುನಾ ಪ್ರಶಸ್ತಿ ಪಡೆದಿದ್ದರು.
ಮಹಿಳಾ ರಸ್ಲಿಂಗ್ 53 ಕೆಜಿ ವಿಭಾಗದ ವಿಶ್ವ ರ್ಯಾಂಕಿಂಗ್‌ನಲ್ಲಿ ವಿನೇಶ್ ಸದ್ಯ 3ನೇ ಶ್ರೇಯಾಂಕದಲ್ಲಿದ್ದಾರೆ. 2019ರ ವರ್ಲ್ಡ್ ರಸ್ಲಿಂಗ್‌ನಲ್ಲಿ ಕಂಚು ಗೆದ್ದಿದ್ದ ಫೋಗಟ್, ಮೊದಲ ಯತ್ನಕ್ಕೇ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications