Vinesh Phogat: ವಿನೇಶ್ ಫೋಗಟ್ ಭಾರತಕ್ಕೆ ಮರಳುವುದು ಯಾವಾಗ? ಆತ್ಮೀಯ ಸ್ವಾಗತಕ್ಕೆ ಸಿದ್ಧತೆ
ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 50 ಕೆ.ಜಿ ಫ್ರಿ ಸ್ಟೈಲ್ ಕುಸ್ತಿ ವಿಭಾಗದ ಫೈನಲ್‌ಗೆ ಅರ್ಹತೆ ಪಡೆದಿದ್ದ ವಿನೇಶ್ ಪೋಗಟ್, ಫೈನಲ್‌ಗೂ ಮುನ್ನ ಅನರ್ಹರಾಗಿದ್ದರು. ಇದರಿಂದ ಭಾರತೀಯ ಕ್ರೀಡಾಭಿಮಾನಿಗಳು ಭಾರೀ ನಿರಾಸೆ ಆಗಿತ್ತು. ಆದರೆ ವಿನೇಶ್ ತನ್ನ ಮೇಲೆ ಹೇರಿದ್ದ ಅನರ್ಹತೆ ಪ್ರಶ್ನಿಸಿ, ಕ್ರಿಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ತಮಗೂ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ವಿನೇಶ್ ಮನವಿಯನ್ನು ಮಾಡಿಕೊಂಡಿದ್ದರು.
ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿನೇಶ್ ಪೋಗಟ್ ಅವರ ವಿಚಾರಣೆ ನಡೆಯಿತು. ಬಹಳ ಕುತೂಹಲದಿಂದ ಭಾರತೀಯ ಕ್ರೀಡಾಭಿಮಾನಿಗಳು ಕೋರ್ಟ್ ಆದೇಶದತ್ತ ಚಿತ್ತ ನೆಟ್ಟಿದ್ದರು. ಆದರೆ, ಬುಧವಾರ ಕೋರ್ಟ್ ವಿನೇಶ್ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶವನ್ನು ನೀಡಿತ್ತು. ಇದರಿಂದ ಭಾರತದ ಕುಸ್ತಿ ಪಟು ವಿನೇಶ್ ಪೋಗಟ್ ಸೇರಿದಂತೆ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಆಗಿತ್ತು.

ಭಾರತಕ್ಕೆ ಮರಳುವುದು ಯಾವಾಗ?
ಕೋರ್ಟ್ ಆದೇಶ ಹೊರ ಬರುವ ಮುನ್ನವೇ ವಿನೇಶ್ ಪೋಗಟ್, ಒಲಿಂಪಿಕ್ಸ್ ಗ್ರಾಮವನ್ನು ತ್ಯಜಿಸಿದ್ದರು. ಈ ವಿಡಿಯೋ ಸಹ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿತ್ತು. ಆದರೆ ವಿನೇಶ್ ಪೋಗಟ್ ಇನ್ನು ತವರಿಗೆ ವಾಪಸ್ ಆಗಿರಲಿಲ್ಲ. ಇದರಿಂದ ಕ್ರೀಡಾಭಿಮಾನಿಗಳು ವಿನೇಶ್ ಯಾವಗ ತವರಿಗೆ ಮರಳುತ್ತಾರೆ ಎಂದು ಕಾಯುತ್ತಿದ್ದರು. ಈ ಅಭಿಮಾನಿಗಳಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ.
ಮಹಾವೀರ್ ಫೋಗಟ್ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಕೋರ್ಟ್ ನಿರ್ಧಾರವು ತಮ್ಮ ಪರವಾಗಿ ಬರುತ್ತದೆ ಎಂದು ಭಾವಿಸಿದ್ದೇವು ಎಂದು ಹೇಳಿದ್ದಾರೆ. ಇದೇ ವೇಳೆ ವಿನೇಶ್ ಆಗಸ್ಟ್ 17 ರಂದು ಬೆಳಿಗ್ಗೆ 10 ಗಂಟೆಗೆ ಭಾರತಕ್ಕೆ ತಲುಪಲಿದ್ದಾರೆ ಎಂದು ತಿಳಿಸಿದ್ದರೆ.

ನಿಜಕ್ಕೂ ವಿನೇಶ್ ಪದಕ ಗೆಲ್ಲದೇ ಇರುವುದು ನಿರಾಸೆ ಮೂಡಿಸಿದೆ. ಆದರೆ ಚಿನ್ನ ಗೆದ್ದ ಅಥ್ಲೀಟ್‌ನ್ನು ಹೇಗೆ ಬರ ಮಾಡಿಕೊಳ್ಳಲಾಗುತ್ತದೋ ಹಾಗೆ ನಾವು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ ಎಂದು ಮಹಾವೀರ್ ಹೇಳಿದ್ದಾರೆ. ಇನ್ನು ಮುಂದೆ ಮಾತನಾಡಿದ ಅವರು, ಅವರ ನಿವೃತ್ತಿ ನಿರ್ಧಾರದ ಬಗ್ಗೆ ಯೋಚಿಸುವಂತೆ ಕೇಳಿಕೊಳ್ಳಲಾಗುವುದು. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
ವಿನೇಶ್‌ಗೆ ಮೂರನೇ ಒಲಿಂಪಿಕ್ಸ್
ಭಾರತದ ಸ್ಟಾರ್ ಕುಸ್ತಿ ಪಟುಗಳ ಸಾಲಿನಲ್ಲಿ ವಿನೇಶ್ ನಿಲ್ಲುತ್ತಾರೆ. ಇವರು ಈವರೆಗೆ ಮೂರು ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ವಿನೇಶ್ 16ರ ಸುತ್ತಿನಲ್ಲಿ ಅದ್ಭುತ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಎಂಟರ ಘಟ್ಟದ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ಹೊರ ಬೀಳಬೇಕಾಯಿತು. 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಿಂದ ಮುಂದೆ ಹೋಗಲು ಸಾಧ್ಯವಾಗಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಅಲ್ಲದೆ ಪದಕ ಫಿಕ್ಸ್ ಆಗಿತ್ತು. ಆದರೆ ಅನರ್ಹತೆ ಪದಕದ ಆಸೆಗೆ ಬರೆ ಕೊಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications