Virat Kohli: ಗಂಡು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ; ಜೂನಿಯರ್ ವಿರಾಟ್ ಕೊಹ್ಲಿ ಎಂಟ್ರಿ!
ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸ್ಟಾರ್ ಸೆಲೆಬ್ರಿಟಿ ದಂಪತಿ ಈ ಸುದ್ದಿಯನ್ನು ಮಂಗಳವಾರ, ಫೆಬ್ರವರಿ 20ರಂದು ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಇದು ಗಂಡು ಮಗುವಾಗಿದ್ದು, ಸುಂದರ ದಂಪತಿಗಳು ಮಗನಿಗೆ 'ಅಕಾಯ್' ಎಂದು ಹೆಸರಿಸಿದ್ದಾರೆ. ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕುಟುಂಬದ ಇನ್ನೊಬ್ಬ ಸದಸ್ಯನನ್ನು ಸ್ವಾಗತಿಸಿದ್ದೇವೆ ಎಂದು ಘೋಷಿಸಿದರು.
"ಹೆಚ್ಚಿನ ಸಂತೋಷ ಮತ್ತು ನಮ್ಮ ಹೃದಯಗಳು ಪ್ರೀತಿಯಿಂದ ತುಂಬಿವೆ. ಗುರುವಾರ, ಫೆಬ್ರವರಿ 15ರಂದು, ನಾವು ನಮ್ಮ ಗಂಡು ಮಗು ಮತ್ತು ವಾಮಿಕಾಳ ಕಿರಿಯ ಸಹೋದರ ಅಕಾಯ್‌ನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ".

"ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ನಾವು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುವಂತೆ ನಾವು ವಿನಂತಿಸುತ್ತೇವೆ," ಎಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಡಿಸೆಂಬರ್ 2017ರಲ್ಲಿ ಇಟಲಿಯಲ್ಲಿ ನಡೆದ ಗೌಪ್ಯ ಸಮಾರಂಭದಲ್ಲಿ ವಿವಾಹವಾದರು. ಭಾರತ ಕ್ರಿಕೆಟ್‌ನ ಆದರ್ಶ ದಂಪತಿಗಳಲ್ಲಿ ಈ ಜೋಡಿಯೂ ಒಂದು. ಎರಡು ವರ್ಷಗಳ ಹಿಂದೆ ಅವರು ತಮ್ಮ ಮೊದಲ ಮಗು ವಾಮಿಕಾಳನ್ನು ಸ್ವಾಗತಿಸಿದ್ದರು.
ಭಾರತೀಯ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚಿಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಅವರ ಎರಡನೇ ಮಗುವಿನ ಜನನದ ನಂತರ ಸ್ವಲ್ಪ ಸಮಯವನ್ನು ಕುಟುಂಬದ ಜೊತೆ ಆನಂದಿಸಲಿದ್ದಾರೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ವಿರಾಟ್ ಕೊಹ್ಲಿ ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಆ ಬಳಿಕ ಎಬಿ ಡಿವಿಲಿಯರ್ಸ್ ವಿಷಯ ಬಹಿರಂಗಪಡಿಸಿದ್ದಕ್ಕೆ ವಿರಾಟ್ ಕೊಹ್ಲಿಯ ಕ್ಷಮೆಯಾಚಿಸಿದ್ದರು.
ಅನುಷ್ಕಾ ಶರ್ಮಾ 2018ರಲ್ಲಿ ಅವರ ಚಲನಚಿತ್ರ "ಝೀರೋ" ಬಿಡುಗಡೆಯಾದ ನಂತರ, ನಟನೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರು.
ಜನವರಿ 11, 2021ರಂದು ಮಗಳು ವಾಮಿಕಾ ಜನಿಸಿದಳು. ಅಂದಿನಿಂದ ಅನುಷ್ಕಾ ಶರ್ಮಾ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದಾಗ್ಯೂ, ಅವರು ಕ್ರೀಡಾ ಚಿತ್ರ 'ಚಕ್ಡಾ ಎಕ್ಸ್‌ಪ್ರೆಸ್'ನೊಂದಿಗೆ ತೆರೆಗೆ ಮರಳಲು ಸಿದ್ಧರಾಗಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದರೂ, ಚಿತ್ರದ ಬಿಡುಗಡೆಯ ದಿನಾಂಕವನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications