For Quick Alerts
ALLOW NOTIFICATIONS  
For Daily Alerts

ಐಷಾರಾಮಿ ವಿಲ್ಲಾ ಖರೀದಿ ಮಾಡಿದ ವಿರಾಟ್ ಕೊಹ್ಲಿ: ಎಲ್ಲಿದೆ ಹೊಸ ಮನೆ, ಬೆಲೆ ಎಷ್ಟು ಕೋಟಿ ಗೊತ್ತಾ?

Virat Kohli Has Bought A Luxury Villa In Alibaug For 6 Crores. Take A Look At Kohlis New Villa

ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗಾಗಲೇ ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಆದರೂ ಈ ಜೋಡಿ ಮುಂಬೈನಿಂದ ದೂರದಲ್ಲಿ ಹೊಸ ವಿಲ್ಲಾವೊಂದನ್ನು ಖರೀದಿ ಮಾಡಿದೆ.

ವಿರಾಟ್ ಕೊಹ್ಲಿ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಸಾವಿರಾರು ಕೋಟಿ ರುಪಾಯಿ ಒಡೆಯರಾಗಿರುವ ಕೊಹ್ಲಿ, ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಹಲವು ಉದ್ಯಮಗಳಲ್ಲಿ ಹಣವನ್ನು ತೊಡಗಿಸಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಬಿಡುವಿನ ವೇಳೆಯನ್ನು ಕಳೆಯಲು ಮುಂಬೈನಿಂದ ದೂರವಿರುವ ಆಲಿಭಾಗ್‌ನಲ್ಲಿ ಹೊಸ ವಿಲ್ಲಾವೊಂದನ್ನು ಖರೀದಿ ಮಾಡಿದ್ದಾರೆ. ವಿಶೇಷ ಎಂದರೆ ಈ ವಿಲ್ಲಾದ ಒಳಾಂಗಣವನ್ನು ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸಾನ್ನೆ ಖಾನ್ ವಿನ್ಯಾಸ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಿರತರಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಬಂಗಲೆ ಖರೀದಿ ಮಾಡುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ವಿರಾಟ್ ಕೊಹ್ಲಿ ಈ ಐಷಾರಮಿ ವಿಲ್ಲಾದ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Virat Kohli Has Bought A Luxury Villa In Alibaug For 6 Crores. Take A Look At Kohlis New Villa

6 ಕೋಟಿ ರುಪಾಯಿ ಬೆಲೆ ಬಾಳುವ ವಿಲ್ಲಾ

ಆಲಿಬಾಗ್‌ನಲ್ಲಿರುವ ಆವಾಸ್ ಗ್ರಾಮದಲ್ಲಿ ವಿರಾಟ್ ಕೊಹ್ಲಿ ಐಷಾರಾಮಿ ವಿಲ್ಲಾವನ್ನು ಖರೀದಿ ಮಾಡಿದ್ದಾರೆ. 2,000 ಚದರ ಅಡಿಯ ವಿಲ್ಲಾಕ್ಕಾಗಿ ಅವರು 6 ಕೋಟಿ ರುಪಾಯಿ ಪಾವತಿ ಮಾಡಿದ್ದಾರೆ. ಈ ಆಸ್ತಿಯ ಮುದ್ರಾಂಕ ಶುಲ್ಕವೇ 36 ಲಕ್ಷ ರುಪಾಯಿ ಎನ್ನಲಾಗಿದೆ.

ಈ ವಿಲ್ಲಾದಲ್ಲಿ 400 ಚದರ ಅಡಿಯ ಈಜುಕೊಳವನ್ನು ಕೂಡ ಹೊಂದಿದೆ. ಆದಾಗ್ಯೂ ಇದು ವಿರಾಟ್ ಅನುಷ್ಕಾ ಅಲಿಬಾಗ್‌ನಲ್ಲಿ ಖರೀದಿ ಮಾಡಿರುವ ಮೊದಲ ಆಸ್ತಿಯಲ್ಲ. ಕಳೆದ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ಅವರು ಅಲಿಬಾಗ್‌ನಲ್ಲಿ 19.24 ಕೋಟಿ ರುಪಾಯಿ ನೀಡಿ ಫಾರ್ಮ್‌ಹೌಸ್ ಖರೀದಿ ಮಾಡಿದ್ದರು. ಅದಕ್ಕಾಗಿ 1.15 ಕೋಟಿ ರುಪಾಯಿ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದರು.

ಗಣ್ಯ ವ್ಯಕ್ತಿಗಳ ನೆಚ್ಚಿನ ವೀಕೆಂಡ್ ಪ್ರವಾಸಿ ಸ್ಥಳ

ಅವಾಸ್ ಲಿವಿಂಗ್ ಅಲಿಬಾಗ್ ಎಲ್‌ಎಲ್‌ಪಿಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಮಹೇಶ್ ಮ್ಹಾತ್ರೆ ಹೇಳಿರುವ ಪ್ರಕಾರ, "ಆವಾಸ್ ನೈಸರ್ಗಿಕ ಸೌಂದರ್ಯದಿಂದಾಗಿ ಎಲ್ಲರ ನೆಚ್ಚಿನ ಸ್ಥಳವಾಗಿದೆ. ಸ್ಪೀಟ್ ಬೋಟ್‌ಗಳಲ್ಲಿ ಮುಂಬೈನಿಂದ ಅಲಿಬಾಗ್‌ಗೆ 15 ನಿಮಿಷಗಳಲ್ಲಿ ಪ್ರಯಾಣಿಸಬಹುದು" ಎಂದು ಹೇಳಿದ್ದಾರೆ.

ಅಲಿಬಾಗ್‌ನಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ, ಇಲ್ಲಿ ಪ್ರತಿ ಚದರ ಅಡಿಗೆ ಸುಮಾರು 3,000 ರುಪಾಯಿಗಳಿಂದ 3,500 ರುಪಾಯಿಗಳಷ್ಟಿದೆ. ಮುಂಬೈನ ಗಣ್ಯ ವ್ಯಕ್ತಿಗಳು ಇಲ್ಲಿ ಆಸ್ತಿ ಖರೀದಿ ಮಾಡಿದ್ದು, ವಾರಾಂತ್ಯದಲ್ಲಿ ವಿಶ್ರಾಂತಿಗೆ ಆಗಮಿಸುತ್ತಾರೆ.

ವಿರಾಟ್ ಕೊಹ್ಲಿ ಮಾತ್ರವಲ್ಲದೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಅಲಿಬಾಗ್‌ನಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ರೋಹಿತ್ ಶರ್ಮಾ 2021 ರಲ್ಲಿ ಮಹತ್ರೋಲಿ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿಯನ್ನು ಖರೀದಿಸಿದ್ದರು.

Story first published: Friday, February 24, 2023, 21:39 [IST]
Other articles published on Feb 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+