Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾತ್ರಿಯಿಡೀ ಪಾರ್ಟಿ ಮಾಡಿ, ಮರುದಿನ 250 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ; ಇಶಾಂತ್ ಶರ್ಮಾ ಬಹಿರಂಗ

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಸ್ಟಾರ್ ವಿರಾಟ್ ಕೊಹ್ಲಿ ಕೂಡ ಒಬ್ಬರೆನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಜೊತೆಗೆ ಭಾರತ ತಂಡದ ಚೇಸಿಂಗ್ ಮಾಸ್ಟರ್, ರನ್ ಮಷಿನ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.

2008ರಲ್ಲಿ ವಿರಾಟ್ ಕೊಹ್ಲಿ ತಮ್ಮ 19ನೇ ವಯಸ್ಸಿನಲ್ಲಿಯೇ ಭಾರತ ತಂಡದ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಕಾಲಕ್ರಮೇಣ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟದ ಮೂಲಕ ತಮ್ಮನ್ನು ತಾವು ಸ್ಥಾಪಿಸಿಕೊಂಡರು.

Virat Kohli Partied All Night And Scored 250 In The Next Day Revealed By Ishant Sharma

ಇನ್ನು ಭಾರತ ತಂಡದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಅವರು ವಿರಾಟ್ ಕೊಹ್ಲಿ ಅವರ ಆಪ್ತ ಗೆಳೆಯರಲ್ಲಿ ಒಬ್ಬರು. ಇದೀಗ ಕೊಹ್ಲಿಯೊಂದಿಗಿನ ಸಂಬಂಧದ ಬಗ್ಗೆ ಇಶಾಂತ್ ಶರ್ಮಾ ಮಾತನಾಡಿದ್ದಾರೆ ಮತ್ತು ಶ್ರೇಷ್ಠ ಕ್ರಿಕೆಟಿಗನ ವಿವಿಧ ಹಂತಗಳನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

ಇಶಾಂತ್ ಶರ್ಮಾ ತಮ್ಮ ಅಂಡರ್-19 ದಿನಗಳ ಕೆಲವು ಹಳೆಯ ಕ್ಷಣಗಳನ್ನು ನೆನಪಿಸಿಕೊಂಡಿದ್ದು, ವಿರಾಟ್ ಕೊಹ್ಲಿ ರಾತ್ರಿಯಿಡೀ ಪಾರ್ಟಿ ಮಾಡಿ, ಮರುದಿನ ಕೋಲ್ಕತ್ತಾದಲ್ಲಿ ಅವರು 250 ರನ್ ಗಳಿಸಿದ್ದರು ಎಂಬುದನ್ನು ಬಹಿರಂಗಪಡಿಸಿದರು.

ದೆಹಲಿಯಲ್ಲಿ ವಾಸಿಸುತ್ತಿದ್ದರು ಎನ್ನುವ ಕಾರಣಕ್ಕಾಗಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಪಾರ್ಟಿ ಮತ್ತು ಟ್ಯಾಟೂ ಕ್ರೇಜ್ ಅನ್ನು ನೋಡಿದ್ದಾರೆ. ಆದರೆ, ಇದೀಗ ಅವರು ಸಂಪೂರ್ಣವಾಗಿ ವಿಭಿನ್ನ ಹಂತವನ್ನು ನೋಡುತ್ತಿದ್ದಾರೆ ಎಂದು ಇಶಾಂತ್ ಶರ್ಮಾ ಹೇಳಿದರು.

Virat Kohli Partied All Night And Scored 250 In The Next Day Revealed By Ishant Sharma

"ಗಮನಾರ್ಹವಾಗಿ, 2012ರಿಂದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಆಹಾರಕ್ರಮವನ್ನು ಬದಲಾಯಿಸಿದರು, ಹಾಗಾಗಿ ಈಗ ಫಿಟ್ ಆಗಿದ್ದಾರೆ. ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಕ್ರಾಂತಿಗೆ ಕಾರಣಕರ್ತರಾದರು. ಎಲ್ಲಾ ಆಟಗಾರರು ಉತ್ತಮ ಫಿಟ್‌ನೆಸ್ ಹೊಂದುವಂತೆ ಕೇಳಿಕೊಂಡರು".

ಇದು ಅಂತಿಮವಾಗಿ ತಂಡವು ಅತ್ಯುತ್ತಮವಾಗಲು ಸಹಾಯ ಮಾಡಿತು. ತಾವು ಕೂಡ ಇದನ್ನು ಒಪ್ಪಿಕೊಂಡಿದ್ದೆ ಮತ್ತು ಇದು ವಿರಾಟ್‌ ಕೊಹ್ಲಿಯ ಅತ್ಯುತ್ತಮ ಭಾಗವಾಗಿದೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

"ನಾವು ಕೋಲ್ಕತ್ತಾದಲ್ಲಿ ಅಂಡರ್-19 ಪಂದ್ಯವನ್ನು ಆಡುತ್ತಿದ್ದೆವು. ಆಗ ವಿರಾಟ್ ಕೊಹ್ಲಿ ರಾತ್ರಿಯಿಡೀ ಪಾರ್ಟಿ ಮಾಡಿದರು, ಆದರೂ ಮರುದಿನ ಅವರು 250 ರನ್ ಗಳಿಸಿದ್ದು ಅಮೋಘವಾಗಿತ್ತು," ಎಂದು ತಿಳಿಸಿದರು.

"ವಿಶ್ವಕಪ್ ನಂತರ ಅವರು 2012ರಲ್ಲಿ ತಮ್ಮ ದೈಹಿಕ ಸ್ಥಿತಿಗತಿಯನ್ನು ಹೇಗೆ ಬದಲಾಯಿಸಿಕೊಂಡರು ಎಂಬುದು ವಿರಾಟ್ ಕೊಹ್ಲಿಯ ಉತ್ತಮ ವಿಷಯಗಳಲ್ಲಿ ಒಂದಾಗಿದೆ. ಅವರು ಪ್ರತಿನಿತ್ಯ ತರಬೇತಿ ಪಡೆಯುತ್ತಿದ್ದರು. ಆದರೆ ಅವರು ಅನುಸರಿಸಿದ ಆಹಾರಕ್ರಮದಿಂದಾಗಿ, ಅವರ ಮಾನಸಿಕ ಶಕ್ತಿ ಮತ್ತು ಕ್ರಿಕೆಟ್ ವಿಭಿನ್ನ ಮಟ್ಟಕ್ಕೆ ಹೋಯಿತು," ಎಂದು ಭಾರತ ತಂಡದ ಬೌಲರ್ ಇಶಾಂತ್ ಶರ್ಮಾ ಅವರು ರಣವೀರ್ ಅಲ್ಲಾಬಾಡಿಯಾ ಅವರ ಯೂಟ್ಯೂಬ್ ಚಾನೆಲ್‌ಗೆ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಚೋಲೆ ಭಾತುರೆ ತಿನ್ನುವುದನ್ನು ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೋಡಿದ್ದೇನೆ

ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ ಚೋಲೆ ಭಾತುರೆ ಮೇಲಿನ ಪ್ರೀತಿ ರಹಸ್ಯವೇನಲ್ಲ. ಈ ಹಿಂದೆ ಇದು ತಮ್ಮ ನೆಚ್ಚಿನ ಆಹಾರವೆಂದು ಅವರೇ ಬಹಿರಂಗಪಡಿಸಿದ್ದರು. ಆದರೆ ಇಶಾಂತ್ ಶರ್ಮಾ ಅವರ ಪ್ರಕಾರ, ವಿರಾಟ್ ಕೊಹ್ಲಿ 2012ರಿಂದ ಒಮ್ಮೆ ಅಥವಾ ಎರಡು ಬಾರಿ ಅದನ್ನು ಸೇವಿಸಿರಬಹುದು ಎಂದಿದ್ದಾರೆ.

"ದೆಹಲಿ ಜನರು ಚೋಲೆ ಭಾತುರೆ ತಿನ್ನುವುದನ್ನು ಬಹಳಷ್ಟು ಇಷ್ಟಪಡುತ್ತಾರೆ. ಆದರೆ ವಿರಾಟ್ ಕೊಹ್ಲಿ ಕ್ರಿಕೆಟ್‌ಗಾಗಿ ಮತ್ತು ಫಿಟ್‌ನೆಸ್‌ಗಾಗಿ ಎಲ್ಲವನ್ನೂ ತೊರೆದರು. 2012ರಿಂದ ಇಲ್ಲಿಯವರೆಗೆ ಅವರು ಚೋಲೆ ಭಾತುರೆ ತಿನ್ನುವುದನ್ನು ನಾನು ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೋಡಿದ್ದೇನೆ," ಎಂದು ಭಾರತೀಯ ವೇಗದ ಬೌಲರ್ ಇಶಾಂತ್ ಶರ್ಮಾ ಹೇಳಿದರು.

Story first published: Monday, June 26, 2023, 10:52 [IST]
Other articles published on Jun 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+