Virat Kohli: ವಿರಾಟ್ ಕೊಹ್ಲಿಗೆ ಕಾದಿದೆ ಕಷ್ಟದ ದಿನಗಳು; ಹಿಂದೆ ಹೇಳಿದ್ದೆಲ್ಲವೂ ನಿಜವಾಗಿದೆ ಈ ಶಾಕಿಂಗ್ ಭವಿಷ್ಯ!
ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಹಾಗೂ ಸಮಕಾಲೀನ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಅವರು ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದು, ಲಂಡನ್ನಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಒಂದಯ ವಾರದ ಹಿಂದೆಯಷ್ಟೆ ಪತ್ನಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದು, ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಈ ಮೊದಲು 2021ರಲ್ಲಿ ಹೆಣ್ಣು ಮಗು ವಾಮಿಕಾಳನ್ನು ಸ್ಟಾರ್ ದಂಪತಿ ಸ್ವಾಗತಿಸಿದ್ದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಮಗೆ ಗಂಡುಮಗು ಜನಿಸಿದ ಈ ಸುದ್ದಿಯನ್ನು ಫೆಬ್ರವರಿ 20ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಫೆಬ್ರವರಿ 15ರಂದು ಬಾಲಿವುಡ್ ನಟಿ ಅನುಷ್ಕಾ ಶರ್ಮ ಗಂಡು ಮಗನಿಗೆ ಜನ್ಮ ನೀಡಿದ್ದಾರೆ. ಈ ಮಗುವಿಗೆ ಅಕಾಯ್ ಎಂದು ಹೆಸರು ಕೂಡ ಇಡಲಾಗಿದೆ. ವಿರಾಟ್ ಕೊಹ್ಲಿ ಸದ್ಯಕ್ಕೆ ಕ್ರಿಕೆಟ್ ಮೈದಾನಕ್ಕೆ ಮರಳುವ ನಿರೀಕ್ಷೆ ಇಲ್ಲ. ನೇರವಾಗಿ 2024ರ ಐಪಿಎಲ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಕುಡಿಕೊಳ್ಳಲಿದ್ದಾರೆ.

ಆದರೆ, ಇದರ ನಡುವೆ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ದೊಡ್ಡ ಆಘಾತ ಕೂಡ ಎದುರಾಗಿದೆ. ಮುಂಬರುವ ದಿನಗಳಲ್ಲಿ ವಿರಾಟ್ ಕೊಹ್ಲಿ ಭವಿಷ್ಯವು ಕಠಿಣವಾಗಿರಲಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಜ್ಯೋತಿಷಿಯೊಬ್ಬರು ವಿರಾಟ್ ಕೊಹ್ಲಿಗೆ ಸಂಬಂಧಿಸಿದ ಹಲವು ಭವಿಷ್ಯ ನುಡಿದಿದ್ದಾರೆ. ಅಚ್ಚರಿ ಎಂದರೆ, ಈ ಹಿಂದೆ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕುರಿತು ಜ್ಯೋತಿಷಿ ಹೇಳಿರುವ ಭವಿಷ್ಯ ಈವರೆಗೆ ಎಲ್ಲವೂ ನಿಜವಾಗಿವೆ. ಇದೀಗ ಈ ಜ್ಯೋತಿಷಿ ಕೆಲವೊಂದು ಶಾಕಿಂಗ್ ವಿಚಾರಗಳ ಕೂಡ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ 2024ರಲ್ಲಿ ಮತ್ತೊಮ್ಮೆ ತಂದೆ ಆಗಲಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಇದೀಗ ಅಕಾಯ್ ಜನನದ ಮೂಲಕ ಅದು ನಿಜವಾಗಿದೆ. ಗಮನಾರ್ಹವೆಂದರೆ, ಇದು 2016ರಲ್ಲಿ ಪ್ರಕಟವಾದ ಪೋಸ್ಟ್ ಆಗಿದೆ.
ಇದರಲ್ಲಿ ವಿರಾಟ್ ಕೊಹ್ಲಿ ಕುರಿತ ಬರೆದಿರುವ ಎಲ್ಲ ಭವಿಷ್ಯವು ಸಂಪೂರ್ಣವಾಗಿ ನಿಜವಾಗಿವೆ. ಅಲ್ಲದೆ, 2024 ಹಾಗೂ 2025ರಲ್ಲಿ ವಿರಾಟ್ ಕೊಹ್ಲಿಗೆ ಏನೆಲ್ಲ ಆಗಲಿದೆ ಎಂದು ಕೂಡ ಇದರಲ್ಲಿ ಬರೆಯಲಾಗಿದೆ.
ಈ ಭವಿಷ್ಯದ ಪ್ರಕಾರ, ವಿರಾಟ್ ಕೊಹ್ಲಿ ಆಗಸ್ಟ್ 2025ರಿಂದ ಫೆಬ್ರವರಿ 2027ರವರೆಗೆ ಕೆಟ್ಟ ಬ್ಯಾಟಿಂಗ್ ಫಾರ್ಮ್‌ನೊಂದಿಗೆ ಮತ್ತೊಮ್ಮೆ ಹೋರಾಡಲಿದ್ದಾರೆ ಎಂದು ಹೇಳಲಾಗಿದೆ.
2027ರಲ್ಲಿ ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ವೃತ್ತಿಜೀವನವು ಉತ್ತುಂಗಕ್ಕೇರಲಿದೆ. ನಂತರ 2028ರ ಮಾರ್ಚ್‌ನಲ್ಲಿ ಕೊಹ್ಲಿ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳುತ್ತಾರೆ ಎಂದು ಜ್ಯೋತಿಷಿ ಬರೆದುಕೊಂಡಿದ್ದಾರೆ.
2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ನಂತರ, ಅದನ್ನು ನೆನಪಿಸುವ ಸಂಭಾಷಣೆಗಳನ್ನು ಪ್ರಚೋದಿಸುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಮರುಕಳಿಸಿದೆ.
ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆ ಆಗಲಿದ್ದಾರೆ ಮತ್ತು ಅನುಷ್ಕಾ ಶರ್ಮಾ ಗರ್ಭಿಣಿ ಎಂಬ ಸುದ್ದಿ ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದವು. ಆದರೆ, ಇದನ್ನು ಸ್ಟಾರ್ ದಂಪತಿ ಖಚಿತಪಡಿಸಿರಲಿಲ್ಲ. ಇದೀಗ ಇಬ್ಬರೂ ಈ ಬಗ್ಗೆ ತಿಳಿಸಿ ಮಗುವಿಗೆ ಅಕಾಯ್ ಎಂದು ಹೆರಿಟ್ಟಿದ್ದೇವೆ ಎಂದಿದ್ದಾರೆ.
ಅಕಾಯ್ ಎಂಬ ಹೆಸರಿಗೆ ಎರಡು ಅರ್ಥಗಳಿವೆ. ಅಕಾಯ್ ಎಂಬುದು ಸಂಸ್ಕೃತ ಪದವಾಗಿದ್ದು, ದೈಹಿಕ ಶಕ್ತಿಯನ್ನು ಮೀರಿದವನು ಎಂದರ್ಥ. ಈ ಹೆಸರು ಶಿವನ ಸಾವಿರ ನಾಮಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.
ಅಕಾಯ್ ಎಂಬ ಅದೇ ಹೆಸರು ಟರ್ಕಿಶ್ ಭಾಷೆಯಲ್ಲಿಯೂ ಇದೆ. ಇದರರ್ಥ "ಹೊಳೆಯುತ್ತಿರುವ ಚಂದ್ರ'. ಇನ್ನು ವಿರಾಟ್ ಕೊಹ್ಲಿ ದಂಪತಿ ತಮ್ಮ ಮೊದಲ ಮಗುವಿಗೆ ವಾಮಿಕಾ ಎಂದು ಹೆಸರಿಟ್ಟಿದ್ದಾರೆ. ಇದು ದುರ್ಗಾ ದೇವಿಯ ಹೆಸರನ್ನು ಸೂಚಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications