ಭಾರತಕ್ಕೆ ಅಗ್ರಸ್ಥಾನ ನೀಡಿದ್ದ ಚೇತನ ಶರ್ಮಾ ಹ್ಯಾಟ್ರಿಕ್
ಬೆಂಗಳೂರು, ಫೆ. 9: ಪಾಕಿಸ್ತಾನದ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸ್ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಕೆಲ ಕಾಲ ಗುರಿಯಾಗಿದ್ದ ಚೇತನ್ ಶರ್ಮಾ ಗೆ ಮರುಹುಟ್ಟು ನೀಡಿದ ವಿಶ್ವಕಪ್ ಹ್ಯಾಟ್ರಿಕ್ ಬಗ್ಗೆ ಹೇಳಲೇಬೇಕು.
ಅದು ವಿಶ್ವಕಪ್ ನ ಮೊದಲ ಹ್ಯಾಟ್ರಿಕ್. 1987 ರಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಲೀಗ್ ಹಂತದ ಅಂತಿಮ ಪಂದ್ಯ ಆಡುತ್ತಿತ್ತು. ಭಾರತದ ಸೆಮಿಫೈನಲ್ ಹಾದಿ ಸುಗಮವಾಗಿದ್ದರೂ ಅಂಕಗಳಿಕೆಗೆ ಸ್ಪರ್ಧೆ ಏರ್ಪಟ್ಟಿತ್ತು.[ವಿಶ್ವಕಪ್ ಫೈನಲ್: ಏಳು ಅದ್ಭುತ ಕ್ರೀಡಾಂಗಣಗಳು]

ಚೇತನ್ ಶರ್ಮಾ ಬೌಲಿಂಗ್ ಗೆ ಆಗಮಿಸುವ ವೇಳೆ ನ್ಯೂಜಿಲೆಂಡ್ 41 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತ್ತು. ನಾಗಪುರದಲ್ಲಿ ನಡೆಯುತ್ತಿದ್ದ ಪಂದ್ಯದ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ಭಾರತಕ್ಕೆ 240 ರನ್ ಗುರಿ ನೀಡುವ ಎಲ್ಲ ಲಕ್ಷಣಗಳು ಕಾಣುತ್ತಿದ್ದವು.
ರುದರ್ ಫೋರ್ಡ್ ಮೊದಲ ಬಲಿ
ಶರ್ಮಾ ತಮ್ಮ 6 ನೇ ಓವರ್ ತೆಗೆದುಕೊಂಡು ಬಂದಿದ್ದರು. ಮೊದಲ ಮೂರು ಬಾಲ್ ಗಳಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ ವೇಗದಲ್ಲಿ ಬದಲಾವಣೆ ಮಾಡುವ ಸಾಮರ್ಥ್ಯ ಹೊಂದಿದ್ದದ ಶರ್ಮಾ ಎಸೆದ ನಾಲ್ಕನೇ ಚೆಂಡಿಗೆ 53 ಎಸೆತಗಳಲ್ಲಿ 26 ರನ್ ಗಳಿಸಿದ್ದ ರುದರ್ ಫೋರ್ಡ್ ವಿಕೆಟ್ ಒಪ್ಪಿಸಿದರು.[ಅಭಿಮಾನಿಗಳ ಬೆಂಬಲವೇ ತಂಡಕ್ಕೆ ಸ್ಫೂರ್ತಿ: ಸಚಿನ್]
ಇಯಾನ್ ಸ್ಮಿತ್ ಎರಡನೇ ಬಲಿ
ಶರ್ಮಾ 5ನೇ ಎಸೆತ ಆಡಲು ಧಾವಿಸಿದ ವಿಕೆಟ್ ಕೀಪರ್ ಇಯಾನ್ ಸ್ಮಿತ್ ಚೆಂಡು ಗುರುತಿಸಲಾಗದೆ ವಿಕೆಟ್ ಒಪ್ಪಿಸಿದ್ದರು. ಶರ್ಮಾ ಎಸೆದ ಚೆಂಡು ನೇರವಾಗಿ ವಿಕೆಟ್ ಎಗರಿಸಿತ್ತು.
ಚಾಟ್ ಫೀಲ್ಡ್ ಮೂರನೇ ಬಲಿ
ಹ್ಯಾಟ್ರಿಕ್ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಶರ್ಮಾ ತಮ್ಮ ಕೊನೆಯ ಎಸೆತದಲ್ಲಿ ಚಾಟ್ ಫೀಲ್ಡ್ ಅವರನ್ನು ಬೌಲ್ಡ್ ಮಾಡಿ ವಿಶ್ವಕಪ್ ನ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದರು. ಒಮ್ಮೆಲೆ ವಿಕೆಟ್ ಕಳೆದುಕೊಂಡ ಕಿವೀಸ್ ಆಟಗಾರರು ಅಂತೂ ಇಂತೂ 221 ರನ್ ದಾಖಲಿಸಿದರು.
ಗಾವಸ್ಕರ್ ಏಕೈಕ ಏಕದಿನ ಶತಕ
ಇನ್ನು 17 ಓವರ್ ಬಾಕಿ ಇರುವಂತೆ ಭಾರತ ಗುರಿಮುಟ್ಟಿತು. ಸುನೀಲ್ ಗಾವಸ್ಕರ್ 88 ಎಸೆತಗಳಲ್ಲಿ 103 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಅತಿ ಹೆಚ್ಚು ರನ್ ರೇಟ್ ದಾಖಳಲಿಸಿದ ಭಾರತ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಗೇರಿತು. ಶರ್ಮಾ ಮತ್ತು ಗಾವಸ್ಕರ್ ಇಬ್ಬರಿಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications