ಲಿಫ್ಟರ್ ಸಂಜಿತಾ ಮೇಲಿನ ಡೋಪಿಂಗ್ ಅಮಾನತು ಹಿಂಪಡೆದ ಐಡಬ್ಲ್ಯೂಎಫ್!

ನವದೆಹಲಿ, ಜನವರಿ 23: ಕಾಮನ್ವೆಲ್ತ್ ಗೇಮ್ಸ್ ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದ ಸಂಜಿತಾ ಚಾನು ಮೇಲಿನ ಅಮಾನತನ್ನು ಇಂಟರ್ ನ್ಯಾಷನಲ್ ವೇಟ್ ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯೂಎಫ್) ಬುಧವಾರ (ಜನವರಿ 23) ಹಿಂಪಡೆದಿದೆ. ಉಪ್ಪೀಪನ ಮದ್ದು ಸೇವಿಸಿದ ಆರೋಪದಡಿಯಲ್ಲಿ ಸಂಜಿತಾ ಅವರನ್ನು ಅಮಾನತು ಗೊಳಿಸಲಾಗಿತ್ತು.
2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್‌ನ ಮಹಿಳಾ ವಿಭಾಗದ 53 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಚಂಜಿತಾ ಚಾನು ಚಿನ್ನ ಜಯಿಸಿದ್ದರು. ಅನಂತರ ನಡೆಸಲಾದ ಡೋಪಿಂಗ್ ಟೆಸ್ಟ್ ನಲ್ಲಿ ಸಂಜಿತಾ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ ಅವರನ್ನು ಐಡಬ್ಲ್ಯೂಎಫ್ ಅಮಾನತುಗೊಳಿಸಿತ್ತು.
ತನ್ನ ಮೇಲೆ ಡೋಪಿಂಗ್ ಆರೋಪ ಬಂದಾಗ ಚಾನು ಅವರು ಅದನ್ನು ತೀವ್ರವಾಗಿ ವಿರೋಧಿಸಿದ್ದರು. ತಾನು ತಪ್ಪೆಸಗಿಲ್ಲ ಎಂದು ತಿಳಿಸಿದ್ದರಲ್ಲದೆ, ಡೋಪಿಂಗ್ ಟೆಸ್ಟ್ ವರದಿಯನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡಿದ್ದರು. ಭಾರತ ಲಿಫ್ಟಿಂಗ್ ಫೆಡರೇಷನ್ ಕೂಡ ಚಾನೂಗೆ ಬೆಂಬಲ ಸೂಚಿಸಿತ್ತು.
ಅದರಂತೆ ಪ್ರಕರಣದ ಬಗ್ಗೆ ಮರು ತನಿಖೆ ನಡೆದಾಗ ಡೋಪಿಂಗ್ ಟೆಸ್ಟ್‌ಗಾಗಿ ಪಡೆಯಲಾದ ಮೂತ್ರದ ಮಾದರಿ ಬದಲಾಗಿ ಐಡಬ್ಲ್ಯೂಎಫ್‌ನಿಂದ ಪ್ರಮಾದವಾಗಿದ್ದು ಕಂಡು ಬಂದಿತ್ತು. ಹೀಗಾಗಿ ಪ್ರತಿಭಾನ್ವಿತೆ ಚಾನು ಮೇಲಿನ ಅಮಾನತು ಈಗ ತೆರವಾಗಿದೆ. ಚಾನು ನಿರಾಳರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications