Paris Olympics 2024:'ಭಾರತ ಧ್ವಜ ಹಿಡಿಯುವ ದಿನಕ್ಕಾಗಿ ಕಾಯುತ್ತಿದ್ದೇನೆ'; ಶರತ್ ಕಮಲ್
ಜುಲೈ 10 ಬುಧವಾರ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ವಿವಿಧ ಕ್ರೀಡೆಗಳ ಆಟಗಾರರ ಬಹುದಿನಗಳ ಕನಸಾಗಿದೆ. ಈ ಮೆಗಾ ಕ್ರೀಡಾಕೂಟದಲ್ಲಿ ಭಾರತದಿಂದ ವಿವಿಧ ಸ್ಪರ್ಧೆಯಲ್ಲಿ ಹಲವು ಕ್ರೀಡಾಪಟುಗಳು ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತರುತ್ತಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 11 ರವರೆಗೆ ಸ್ಪರ್ಧೆಗಳು ನಡೆಯಲಿವೆ. ಈ ಕ್ರೀಡಾಕೂಟದಲ್ಲಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮತ್ತು
ಟೇಬಲ್ ಟೆನಿಸ್ ಪಟು ಶರತ್ ಕಮಲ್ ಅವರು ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದಕ್ಕೂ ಮನ್ನ ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅವರನ್ನು ಸನ್ಮಾನಿಸಲು ಗೋ ಫಾರ್ ಗೋಲ್ಡ್ ಎಂಬ ಖಾಸಗಿ ಸಂಸ್ಥೆ (ಜುಲೈ 8) ಚೆನ್ನೈನ ಅಣ್ಣಾ ನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರತ್ ಕಮಲ್, 'ನಾನು ಈಗ 5ನೇ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಡಲಿದ್ದೇನೆ. ಮೊದಲ ಬಾರಿಗೆ ನಮ್ಮ ತಂಡ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಆಯ್ಕೆಯಾಗಿದೆ.
ಇಲ್ಲಿಯವರೆಗೆ ನಾವು ತಂಡ ಮತ್ತು ವೈಯಕ್ತಿಕ ವಿಭಾಗಗಳಲ್ಲಿ ಆಡಿದ್ದೇವೆ. ಈ ಬಾರಿ ನಮಗೆ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಭಾರತ ಧ್ವಜ ಹಿಡಿಯುವ ದಿನಕ್ಕಾಗಿ ಕಾಯುತ್ತಿದ್ದೇನೆ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಾಧಾರಿ ಆಗಿರುವುದು ನನಗೆ ಮಾತ್ರವಲ್ಲದೆ ವಿಶ್ವದ ಟೇಬಲ್ ಟೆನಿಸ್ ಆಟಗಾರರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಶರತ್ ತಿಳಿಸಿದ್ದಾರೆ.
ನಾನು ಜುಲೈ 26 ರಂದು ರಾಷ್ಟ್ರಧ್ವಜವನ್ನು ಹೊತ್ತೊಯ್ಯುವ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ. ಕಳೆದ ನಾಲ್ಕು ತಿಂಗಳಿನಿಂದ ಒಲಿಂಪಿಕ್ಸ್‌ಗಾಗಿ ತರಬೇತಿ ಪಡೆಯುತ್ತಿದ್ದೇನೆ. ಈ ಒಲಿಂಪಿಕ್ಸ್‌ಗಾಗಿ ನಾನು ಸರಿಯಾಗಿ ತರಬೇತಿ ಪಡೆದಿದ್ದೇನೆ.
ಈಗ ಸ್ಪರ್ಧೆಯಲ್ಲಿ ಭಾಗವಹಿಸುವ ಅಂತಿಮ ಹಂತದಲ್ಲಿದ್ದೇನೆ. ಇನ್ನು 10 ದಿನಗಳಲ್ಲಿ ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ತರಬೇತಿ ಪಡೆದು ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತೇನೆ ಎಂದು ಶರತ್ ನುಡಿದ್ದಾರೆ.
ಶಾಲೆಗಳಲ್ಲಿ ಕ್ರೀಡಾಗೆ ಪ್ರಾಮುಖ್ಯತೆ ನೀಡಬೇಕು
'ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ನಾವು ಖಂಡಿತವಾಗಿಯೂ ಒಂದು ಪದಕವನ್ನು ಗೆಲ್ಲುತ್ತೇವೆ. ನಾನು 4ನೇ ವಯಸ್ಸಿನಲ್ಲೇ ಟೇಬಲ್ ಟೆನ್ನಿಸ್ ಆಡಲು ಪ್ರಾರಂಭಿಸಿದೆ. ನನ್ನ ಶಾಲೆಯಿಂದ ನನಗೆ ದೊರೆತ ಸಂಪೂರ್ಣ ಬೆಂಬಲದಿಂದಾಗಿ ನಾನು ಈ ಸ್ಥಾನಕ್ಕೆ ಬಂದಿದ್ದೇನೆ.
ಒಬ್ಬ ಆಟಗಾರ ಎಷ್ಟೇ ಯಶಸ್ವಿಯಾದರೂ ಶಾಲೆಯ ಬೆಂಬಲವಿಲ್ಲದೆ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಶಾಲೆಗಳಲ್ಲಿ ಹೆಚ್ಚಿನ ಬೆಂಬಲವಿದ್ದರೆ ಕ್ರೀಡೆಯಲ್ಲಿ ಯಶಸ್ಸು ಸಾಧಿಸಬಹುದು.
ನಮ್ಮ ದೇಶದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಬಾಲ್ಯದಿಂದಲೇ ಸೂಕ್ತ ತರಬೇತಿ ನೀಡಿದರೆ ಖಂಡಿತ ಯಶಸ್ಸು ಸಾಧಿಸಬಹುದು. ಇದು ಹೆಚ್ಚು ವಿಜೇತರನ್ನು ಸೃಷ್ಟಿಸುತ್ತದೆ ಎಂದು ಶರತ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications