For Quick Alerts
ALLOW NOTIFICATIONS  
For Daily Alerts

Pairs Olympics 2024: ಒಲಿಂಪಿಕ್ ಪದಕ ಪಟ್ಟಿಯಲ್ಲಿ ಟಾಪ್ ಐದು ದೇಶಗಳು ಯಾವುವು?; ಭಾರತಕ್ಕೆ ಯಾವ ಸ್ಥಾನ?

ಆಗಸ್ಟ್ 11 ಭಾನುವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಅಭಿಯಾನವು ಕೇವಲ 6 ಪದಕಗಳೊಂದಿಗೆ ಕೊನೆಗೊಂಡಿದೆ. ಎರಡಂಕಿಯ ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಪ್ಯಾರಿಸ್‌ಗೆ ತೆರಳಿತ್ತು. ಆದರೆ 6 ಅಥ್ಲೀಟ್‌ಗಳ ನಾಲ್ಕನೇ ಸ್ಥಾನ ಮತ್ತು ನಂತರ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದರಿಂದ ಭಾರತ ನಿರಾಶೆ ಅನುಭವಿಸಿದೆ.

ಹೀಗಾಗಿ ಈ ಬಾರಿಯೂ ಒಲಿಂಪಿಕ್ಸ್‌ನಲ್ಲಿ ಭಾರತ ಎರಡಂಕಿಯ ಪದಕಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಟ್ಟು 206 ದೇಶಗಳು ಭಾಗವಹಿಸಿದ್ದವು. ಇದೀಗ ಪ್ಯಾರಿಸ್‌ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಮತ್ತು ಟಾಪ್ ಐದು ದೇಶಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

What is the position of India in the Olympic medal list

ಪದಕ ಪಟ್ಟಿಯಲ್ಲಿ ಚೀನಾವನ್ನು ಹಿಂದಿಕ್ಕಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಕ್ರೀಡಾಕೂಟದ ಕೊನೆಯ ದಿನವಾದ ಭಾನುವಾರ 40 ಚಿನ್ನ, 27 ಬೆಳ್ಳಿ ಮತ್ತು 24 ಕಂಚಿನ ಪದಕಗಳನ್ನು ಚೀನಾ ಪಡೆದುಕೊಂಡಿದೆ. ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಬೆಳ್ಳಿ ಸೇರಿದಂತೆ ಒಟ್ಟು 126 ಪದಕಗಳನ್ನು ಗೆದ್ದಿದೆ. ಅಮೆರಿಕದ ಮತ್ತು ಚೀನಾ ಎರಡು ದೇಶಗಳ ಬಂಗಾರ ಪದಕದ ಸಂಖ್ಯೆಗಳು ಸಮನಾಗಿರುವುದೆ.ಹೀಗಾಘಿ ಅತಿಹೆಚ್ಚು ಬೆಳ್ಳಿ ಪದಕ ಗೆದ್ದಿರುವ ಅಮೆರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ.

ಆಸ್ಟ್ರೇಲಿಯಾ ಮತ್ತು ಜಪಾನ್ ಕೂಡ ಪ್ಯಾರಿಸ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ಮೂಲಕ ಪದಕಗಳ ಬೇಟೆಯಾಡಿವೆ. ಆಸ್ಟ್ರೇಲಿಯಾ 18 ಚಿನ್ನ, 18 ಬೆಳ್ಳಿ ಮತ್ತು 14 ಕಂಚು ವಶಪಡಿಸಿಕೊಂಡು ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಜಪಾನ್ 18 ಚಿನ್ನ, 12 ಬೆಳ್ಳಿ ಮತ್ತು 13 ಕಂಚು ಸೇರಿದಂತೆ ಒಟ್ಟು 43 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಪ್ರಮುಖವಾಗಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಆತಿಥೇಯ ಫ್ರಾನ್ಸ್ ಟಾಪ್-5ರಲ್ಲಿ ಸ್ಥಾನ ಪಡೆದಿದೆ. ಒಟ್ಟು 16 ಚಿನ್ನ, 24 ಬೆಳ್ಳಿ ಮತ್ತು 22 ಕಂಚು ಸೇರಿದಂತೆ 62 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದೆ. ಇದಲ್ಲದೆ, 14 ಚಿನ್ನ, 22 ಬೆಳ್ಳಿ ಹಾಗೂ 27 ಕಂಚಿನೊಂದಿಗೆ ಒಟ್ಟು 63 ಪದಕಗಳನ್ನು ಗೆದ್ದಿರುವ ಬ್ರಿಟನ್ ಆರನೇ ಸ್ಥಾನಕ್ಕೆ ಪಡೆದು ಅಗ್ರ-5ರಿಂದ ಹೊರಬಿದ್ದಿದೆ.

ಭಾರತಕ್ಕೆ ಯಾವ ಸ್ಥಾನ?

2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 71ನೇ ಸ್ಥಾನದಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. 1 ಬೆಳ್ಳಿ ಮತ್ತು 5 ಕಂಚು ಸೇರಿದಂತೆ ಒಟ್ಟು 6 ಪದಕಗನ್ನು ಭಾರತ ಗೆದ್ದಿದೆ. 1 ಚಿನ್ನದ ಪದಕದೊಂದಿಗೆ ಪಾಕಿಸ್ತಾನ ಕೂಡ ಭಾರತಕ್ಕಿಂತ ಮುಂದಿದ್ದು 62ನೇ ಸ್ಥಾನದಲ್ಲಿದೆ.

Story first published: Sunday, August 11, 2024, 17:58 [IST]
Other articles published on Aug 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+