ಕ್ರಿಕೆಟ್‌ನಿಂದ ಮೊದಲ ಗಳಿಕೆಯಲ್ಲಿ 'ಮಯಾಂಕ್' ಖರೀದಿಸಿದ ವಸ್ತು ಯಾವುದು?; 'ಅಗರ್ವಾಲ್' ಬಗ್ಗೆ ಗೊತ್ತಿಲ್ಲದ ವಿಷಯಗಳು
1991ರ ಫೆಬ್ರವರಿ 16ರಂದು ಜನಿಸಿದ ಮಯಾಂಕ್ ಅನುರಾಗ್ ಅಗರ್ವಾಲ್ ಭಾರತ ಕ್ರಿಕೆಟ್ ತಂಡದ ಆಟಗಾರ. ಬಲಗೈ ಅಗ್ರ ಕ್ರಮಾಂಕದ ಬ್ಯಾಟರ್ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ಪರವಾಗಿ ಆಡುತ್ತಾರೆ. ಇನ್ನು ಐಪಿಎಲ್‌ನಲ್ಲಿ ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದಾರೆ.
ಮಯಾಂಕ್ ಅಗರ್ವಾಲ್ 2018ರ ಡಿಸೆಂಬರ್ 26ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕ್ರಿಕೆಟ್ ತಂಡದ ಪರ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 8.5 ಕೋಟಿ ರೂ.ಗೆ ಖರೀದಿಸಿತು.
2008-09 ಮತ್ತು 2010ರ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿನ ಅಂಡರ್-19 ಕೂಚ್ ಬೆಹರ್ ಟ್ರೋಫಿಯಲ್ಲಿ ಮಯಾಂಕ್ ಅಗರ್ವಾಲ್ ತಮ್ಮ ಪ್ರದರ್ಶನದ ಮೂಲಕ ಪ್ರಾಮುಖ್ಯತೆ ಪಡೆದರು. ಇದರಲ್ಲಿ ಅವರು ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.

ಇತ್ತೀಚೆಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೋಸ್ಟ್ ಮಾಡಿದ ಜಿಯೋಸಿನಿಮಾದ ದೈನಂದಿನ ಕಾರ್ಯಕ್ರಮ "ಆಕಾಶವಾಣಿ'ಯಲ್ಲಿ ನಡೆದ ಸಂಭಾಷಣೆಯಲ್ಲಿ ಭಾರತದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರು ಯುವ ಉದಯೋನ್ಮುಖ ಕ್ರಿಕೆಟಿಗನಾಗಿ ಬೆಳೆದಿದ್ದನ್ನು, ಅವರ ಬಗ್ಗೆ ಗೊತ್ತಿಲ್ಲದ ಮತ್ತು ಇತರ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಪ್ರಶ್ನೆ 1) ನೀವು ಮೊದಲ ಹಸ್ತಾಕ್ಷರ ಪಡೆದುಕೊಂಡಿದ್ದು ನೆನಪಿದೆಯೇ?
ಮಯಾಂಕ್ ಅಗರ್ವಾಲ್: ನನಗೆ ಆಟೋಗ್ರಾಫ್ ತೆಗೆದುಕೊಂಡ ನೆನಪಿಲ್ಲ. ಆದರೆ ಅದೃಷ್ಟವಶಾತ್, ನನ್ನ ತಂದೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಆಟೋಗ್ರಾಫ್ ತೆಗೆದುಕೊಂಡಿದ್ದರು.
ಅದು ನಮ್ಮ ಮನೆಯಲ್ಲಿ ಈಗಲೂ ಇದೆ. ಅದು ಪೇಪರ್ ನ್ಯಾಪ್ಕಿನ್ ಆಗಿತ್ತು ಮತ್ತು ಅವರು ತಮ್ಮ ಐದು ಆಟೋಗ್ರಾಫ್‌ಗಳನ್ನು ತೆಗೆದುಕೊಂಡು ಅದನ್ನು ಫ್ರೇಮ್ ಮಾಡಿ ನನಗೆ ಅದನ್ನು ನೀಡಿದರು. ಆಗ ನನಗೆ ಏಳೆಂಟು ವರ್ಷ ಇರಬಹುದು.

ಪ್ರಶ್ನೆ 2) ನೀವು ಕ್ರೀಡಾಂಗಣದಲ್ಲಿ ಲೈವ್ ವೀಕ್ಷಿಸಿದ ಮೊದಲ ಕ್ರಿಕೆಟ್ ಪಂದ್ಯ ಯಾವುದು?
ಮಯಾಂಕ್ ಅಗರ್ವಾಲ್: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಐಪಿಎಲ್ 2008ರ ಪಂದ್ಯವು ಕ್ರೀಡಾಂಗಣದಲ್ಲಿ ವೀಕ್ಷಿಸಿದ ನನ್ನ ಮೊದಲ ಪಂದ್ಯವಾಗಿತ್ತು.
ಪ್ರಶ್ನೆ 3) ನಿಮ್ಮ ಕ್ರಿಕೆಟ್‌ನ ಆರಾಧ್ಯ ದೈವ ಯಾರು?
ಮಯಾಂಕ್ ಅಗರ್ವಾಲ್: ನಾನು ಆಸ್ಟ್ರೇಲಿಯಾ ವಿರುದ್ಧ ಸಚಿನ್ ತೆಂಡೂಲ್ಕರ್ ಪಾಜಿ ಬ್ಯಾಟಿಂಗ್ ನೋಡುವ ಮೂಲಕ ಆಟವನ್ನು ಆಡಲು ಪ್ರಾರಂಭಿಸಿದೆ. ಆದರೆ, ನನ್ನ ಬ್ಯಾಟಿಂಗ್ ಆರಾಧ್ಯ ದೇವರು ವೀರೇಂದ್ರ ಸೆಹ್ವಾಗ್. ನಾನು ಪಂಜಾಬ್ ಕಿಂಗ್ಸ್ ಪರ ಆಡಿದಾಗ ಅವರೊಂದಿಗೆ ಆಡುವ ಅದ್ಭುತ ಅವಕಾಶ ಸಿಕ್ಕಿತ್ತು.
ಪ್ರಶ್ನೆ 4) ನಿಮ್ಮ ಕ್ರಿಕೆಟಿಗನಲ್ಲದ ಹೀರೋ ಯಾರು?
ಮಯಾಂಕ್ ಅಗರ್ವಾಲ್: ಅದು ರೋಜರ್ ಫೆಡರರ್ ಎಂದು ನಾನು ಹೇಳುತ್ತೇನೆ. ಆದರೆ, ನೊವಾಕ್ ಜೊಕೊವಿಕ್ ಆಡುತ್ತಿರುವ ರೀತಿಯನ್ನು ನಾನು ಪ್ರಶಂಸಿಸುತ್ತೇನೆ. ಅವರು ಸ್ಪರ್ಧಿಸುವ ರೀತಿ ನೋಡಿದರೆ ಆಶ್ಚರ್ಯವಾಗುತ್ತದೆ.
ಪ್ರಶ್ನೆ 5) ನಿಮ್ಮ ಮೊದಲ ಕ್ರಿಕೆಟ್ ಕೋಚ್ ಯಾರು?
ಮಯಾಂಕ್ ಅಗರ್ವಾಲ್: ನನ್ನ ಶಾಲಾ ಕೋಚ್ ರಾಮದಾಸ್. ಆದರೆ, ಕಳೆದ ಎಂಟು ವರ್ಷಗಳಿಂದ RX ಮುರಳೀಧರ್ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ನಮ್ಮ ಸಂಬಂಧ ಕೇವಲ ಕೋಚ್ ಮತ್ತು ವಿದ್ಯಾರ್ಥಿಯದ್ದಲ್ಲ. ಇದು ಅದಕ್ಕೂ ಮೀರಿದ ಬಾಂಧವ್ಯವಾಗಿದೆ.
ಪ್ರಶ್ನೆ 6) ನಿಮ್ಮ ಮೊದಲ ಕ್ರಿಕೆಟ್ ಜೆರ್ಸಿ ಯಾವುದು?
ಮಯಾಂಕ್ ಅಗರ್ವಾಲ್: ಅದು ಆರ್‌ಸಿಬಿ ತಂಡದ ಐಪಿಎಲ್ ಜೆರ್ಸಿ ಆಗಿದೆ. ಅದರ ಹೊರತಾಗಿ ನನ್ನ ಅಂಡರ್-13 ಜೆರ್ಸಿ ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದೆ.
ಪ್ರಶ್ನೆ 7) ನೀವು ಕ್ರಿಕೆಟ್ ಮೂಲಕ ಗಳಿಸಿದ ಹಣದಲ್ಲಿ ನಿಮ್ಮ ಮೊದಲ ಖರ್ಚು ಏನು?
ಮಯಾಂಕ್ ಅಗರ್ವಾಲ್: ಅಂಡರ್-13 ಕರ್ನಾಟಕ ತಂಡದಲ್ಲಿ ಆಡುವಾಗ ನಮಗೆ ದಿನಕ್ಕೆ 150 ರೂಪಾಯಿ ನೀಡುತ್ತಿದ್ದರು. ಆಗ ನಾನು ಅದರಿಂದ ಚಾಕೊಲೇಟ್ ಖರೀದಿಸಿದ್ದೆ.
ಪ್ರಶ್ನೆ 8) ನಿಮ್ಮ ಮೊದಲ ಸಂದರ್ಶನವನ್ನು ನೀಡಿದ್ದು ನಿಮಗೆ ನೆನಪಿದೆಯೇ?
ಮಯಾಂಕ್ ಅಗರ್ವಾಲ್: ಅದು ನನ್ನ ಶಾಲಾ ತಂಡದ ಪರ ಬೌಲಿಂಗ್ ಪ್ರದರ್ಶನಕ್ಕಾಗಿ. ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications