'ಅರ್ಜುನ' ಪಡೆಯಲು ನಾನು ಯಾವ ಪದಕ ಗೆಲ್ಲಬೇಕು?: ಮೋದಿಗೆ ಸಾಕ್ಷಿ ಪ್ರಶ್ನೆ!

ನವದೆಹಲಿ: ಭಾರತದ ಕ್ರೀಡಾ ಸಚಿವಾಲಯ ಈ ಬಾರಿಯ ಅರ್ಜುನ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸುವಾಗ ಅದರಲ್ಲಿ ರಸ್ಲರ್ ಸಾಕ್ಷಿ ಮಲಿಕ್ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹೆಸರುಗಳು ಇರಲಿಲ್ಲ. ಇದಕ್ಕೆ ಬೇಸರಗೊಂಡಿರುವ ಸಾಕ್ಷಿ, ತಾನು ಅರ್ಜುನ ಪ್ರಶಸ್ತಿ ಪಡೆಯಬೇಕಾದರೆ ಯಾವ ಪದಕ ಗೆಲ್ಲಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ.
ಅಸಲಿಗೆ ಅರ್ಜುನಕ್ಕೆ ಕ್ರೀಡಾ ಸಚಿವಾಲಯದ ಪಟ್ಟಿಯಲ್ಲಿ ಒಟ್ಟಿಗೆ 29 ಹೆಸರುಗಳಿದ್ದವು. ಇದರಲ್ಲಿ ಸಾಕ್ಷಿ ಮತ್ತು ಚಾನು ಹೆಸರುಗಳನ್ನು ತೆಗೆದು ಹಾಕಿದ ಸಚಿವಾಲಯ 27 ಹೆಸರುಗಳನ್ನಷ್ಟೇ ಪ್ರಕಟಿಸಿತ್ತು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದಕ್ಕಾಗಿ ಸಾಕ್ಷಿಗೆ ಖೇಲ್ ರತ್ನ ಲಭಿಸಿತ್ತು.
2017ರ ವಿಶ್ವ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿಗೂ ಪ್ರತಿಷ್ಠಿತ ಪ್ರಶಸ್ತಿ ದೊರೆತಿತ್ತು. ಹೀಗಾಗಿಯೇ ವಿವಾದ ಸೃಷ್ಠಿಯಾಗಿದೆ.

ಯಾಕೆ ಪ್ರಶಸ್ತಿ ನೀಡಿಲ್ಲ?
ನಿಯಮಗಳ ಪ್ರಕಾರ, ದೇಶದ ಅತ್ಯುನ್ನತ ಕ್ರೀಡಾ ಗೌರವ ಗಳಿಸಿದ ಬಳಿಕ ಅದಕ್ಕಿಂತ ಕೆಳಸ್ತರದ ಪ್ರಶಸ್ತಿಗಳಿಗೆ ಕ್ರೀಡಾಪಟುಗಳನ್ನು ಪರಿಗಣಿಸುವಂತಿಲ್ಲ. ಆದರೂ ಈ ಇಬ್ಬರು ಕ್ರೀಡಾಪಟುಗಳ ಹೆಸರು ಸೇರ್ಪಡೆಯಾದಾಗ ಎಲ್ಲರ ಹುಬ್ಬೇರಿತ್ತು. ಆದರೆ, ನಿಯಮಕ್ಕೆ ಬದ್ಧರಾಗಿ ಈ ಇಬ್ಬರಿಗೂ ಖೇಲ್ ರತ್ನ ಪ್ರಶಸ್ತಿ ಲಭಿಸಿರುವುದರಿಂದ ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿಗೆ ಪರಿಗಣಿಸಿಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟನೆ ನೀಡಿದೆ.

ಖೇಲ್ ರತ್ನ ವಿಜೇತರು
1. ರೋಹಿತ್ ಶರ್ಮ, ಕ್ರಿಕೆಟ್
2. ಮರಿಯಪ್ಪನ್ ತಂಗವೇಲು, ಪ್ಯಾರಾ ಅಥ್ಲೆಟಿಕ್ಸ್
3. ಮಣಿಕಾ ಬಾತ್ರಾ, ಟೇಬಲ್ ಟೆನಿಸ್
4. ವಿನೇಶ್ ಪೋಗಟ್, ಕುಸ್ತಿ
5. ರಾಣಿ ರಾಮ್‌ಪಾಲ್, ಹಾಕಿ

ಪ್ರಧಾನಿ ಮೋದಿಗೆ ಪತ್ರ
ಕ್ರೀಡಾ ಸಚಿವಾಲಯದ ಸ್ಪಷ್ಟನೆ ಸಾಕ್ಷಿಗೆ ಸರಿಕಂಡತೆ ಕಾಣಿಸಿಲ್ಲ. ಹೀಗಾಗಿ ಸಾಕ್ಷಿ, ಪ್ರಧಾನಿ ಮೋದಿಗೆ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜುಗೆ ಪತ್ರ ಬರೆದಿದ್ದಾರೆ. 'ಖೇಲ್ ರತ್ನ ನೀಡಿದ್ದಕ್ಕೆ ನನಗೆ ಹೆಮ್ಮೆಯಿದೆ. ಎಲ್ಲಾ ಕ್ರೀಡಾಪಟುಗಳಿಗೂ ಆ ಕನಸಿದೆ. ನನಗೆ ಅರ್ಜುನ ಗೆಲ್ಲುವ ಕನಸೂ ಇತ್ತು. ನಾನು ಅರ್ಜುನ ಪಡೆಯಲು ನನ್ನ ದೇಶಕ್ಕೆ ಇನ್ನೂ ಹೆಚ್ಚಿಗೆ ಏನು ಪದಕ ಗೆಲ್ಲಬೇಕು,' ಎಂದು ಪತ್ರದ ಮೂಲಕ ಸಾಕ್ಷಿ ಪ್ರಶ್ನಿಸಿದ್ದಾರೆ.

ಅರ್ಜುನ ಪ್ರಶಸ್ತಿ ವಿಜೇತರು
1. ಅತನು ದಾಸ್- ಬಿಲ್ಲುಗಾರಿಕೆ, 2. ದ್ಯುತಿ ಚಂದ್- ಅಥ್ಲೆಟಿಕ್ಸ್, 3. ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ- ಬ್ಯಾಡ್ಮಿಂಟನ್, 4. ಚಿರಾಗ್ ಚಂದ್ರಶೇಖರ್ ಶೆಟ್ಟಿ- ಬ್ಯಾಡ್ಮಿಂಟನ್, 5. ವಿಶೇಷ್ ಭೃಗವಂಶಿ- ಬಾಸ್ಕೆಟ್ ಬಾಲ್, 6. ಸುಬೆದಾರ್ ಮನೀಶ್ ಕೌಶಿಕ್ - ಬಾಕ್ಸಿಂಗ್, 7. ಲೋವ್ಲಿನಾ ಬೊರ್ಗೊಹೈನ್- ಬಾಕ್ಸಿಂಗ್, 8. ಇಶಾಂತ್ ಶರ್ಮಾ- ಕ್ರಿಕೆಟ್, 9. ದೀಪ್ತಿ ಶರ್ಮಾ- ಕ್ರಿಕೆಟ್, 10. ಸಾವಂತ್ ಅಜಯ್ ಅನಂತ್- ಈಕ್ವೆಸ್ಟ್ರಿಯನ್, 11. ಸಂದೇಶ್ ಝಿಂಗನ್- ಫುಟ್ಬಾಲ್, 12. ಅದಿತಿ ಅಶೋಕ್- ಗಾಲ್ಫ್, 13. ಆಕಾಶ್ ದೀಪ್ ಸಿಂಗ್- ಹಾಕಿ, 14. ದೀಪಿಕಾ- ಹಾಕಿ, 15. ದೀಪಕ್-ಕಬಡ್ಡಿ, 16. ಕಾಳೆ ಸಾರಿಕಾ ಸುಧಾಕರ್- ಖೋ ಖೋ, 17. ದತ್ತು ಬಾಬನ್ ಭೊಕಾನಲ್- ರೋಯಿಂಗ್, 18. ಮನು ಭಾಕರ್- ಶೂಟಿಂಗ್, 19. ಸೌರಭ್ ಚೌಧರಿ- ಶೂಟಿಂಗ್, 20. ಮಧುರಿಕಾ ಸುಹಾಸ್ ಪಟ್ಕರ್- ಟೇಬಲ್ ಟೆನ್ನಿಸ್, 21. ದಿವಿರಾಜ್ ಶರಣ್- ಟೆನ್ನಿಸ್, 22. ಶಿವ ಕೇಶವನ್- ವಿಂಟರ್ ಸ್ಪೋರ್ಟ್ಸ್, 23. ದಿವ್ಯಾ ಕಕ್ರನ್- ಕುಸ್ತಿ, 24. ರಾಹುಲ್ ಅವರೆ- ಕುಸ್ತಿ, 25. ಸುಯಾಶ್ ನಾರಾಯಣ್ ಜಾಧವ್- ಪ್ಯಾರಾ ಸ್ವಿಮ್ಮಿಂಗ್, 26, ಸಂದೀಪ್- ಪ್ಯಾರಾ ಅಥ್ಲೆಟಿಕ್ಸ್, 27. ಮನೀಶ್ ನಾರ್ವಾಲ್- ಪ್ಯಾರಾ ಶೂಟಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications