MS Dhoni’s 1st Girl-friend: ದುರಂತವಾಗಿ ಸಾವನ್ನಪ್ಪಿದ ಎಂಎಸ್ ಧೋನಿಯ ಮೊದಲ ಗೆಳತಿ ಯಾರು?
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಗತ್ತು ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಎಲ್ಲಾ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ನಾಯಕರಾಗಿದ್ದಾರೆ. ಅಲ್ಲದೇ, ಐಪಿಎಲ್‌ನಲ್ಲಿ ಐದು ಬಾರಿ ಸಿಎಸ್‌ಕೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.
ಎಂಎಸ್ ಧೋನಿ ತುಂಬಾ ಖಾಸಗಿ ವ್ಯಕ್ತಿ ಮತ್ತು ಅವರ ಖಾಸಗಿ ಜೀವನದ ಬಗ್ಗೆ ಬಹಳ ಕಡಿಮೆ ಒಳನೋಟವನ್ನು ಬಹಿರಂಗಪಡಿಸುತ್ತಾರೆ. ಆದರೆ ಬಾಲಿವುಡ್‌ನ ಈ ಸಿನಿಮಾ, 'ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಮೈದಾನದ ಹೊರಗೆ ಧೋನಿ ಅವರ ವೈಯಕ್ತಿಕ ಜೀವನದ ಕುರಿತು ಅಪರೂಪದ ಗುಟ್ಟುಗಳನ್ನು ರಟ್ಟು ಮಾಡಿತ್ತು.

ಭಾರತ ಕ್ರಿಕೆಟ್ ತಂಡದ ಪ್ರವೇಶಕ್ಕೂ ಮುನ್ನ ಎಂಎಸ್ ಧೋನಿಯ ಮೊದಲ ಗೆಳತಿ ಪ್ರಿಯಾಂಕಾ ಝಾ ಅವರ ಪಾತ್ರದಲ್ಲಿ ಬಾಲಿವುಡ್ ತಾರೆ ದಿಶಾ ಪಟಾನಿ ಕಾಣಿಸಿಕೊಂಡಿದ್ದರು. ಇದೀಗ ಭಾರತ ಸೇರಿದಂತೆ ಜಗತ್ತಿನಾದ್ಯಂತ ಧೋನಿಯ ಅಭಿಮಾನಿಗಳು ಮತ್ತೊಮ್ಮೆ ಪ್ರಿಯಾಂಕಾ ಝಾ ಬಗ್ಗೆ ತಿಳಿದುಕೊಳ್ಳಲು ಕಾತರವಾಗಿದೆ.
2002ರಲ್ಲಿ ಎಂಎಸ್ ಧೋನಿ ಇನ್ನೂ ಭಾರತ ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಾಗ ಪ್ರಿಯಾಂಕಾ ಝಾ ಅವರೊಂದಿಗೆ ಪ್ರೀತಿ ಆರಂಭವಾಗಿತ್ತು.
ಎಂಎಸ್ ಧೋನಿ ತಮ್ಮ ಉಳಿದ ಜೀವನವನ್ನು ಪ್ರಿಯಾಂಕಾ ಝಾ ಅವರೊಂದಿಗೆ ಕಳೆಯಲು ಬಯಸಿದ್ದರು. ಆದರೆ ಶೀಘ್ರದಲ್ಲೇ 2003-04ರ ವೇಳೆಗೆ ಜಿಂಬಾಬ್ವೆ ಮತ್ತು ಕೀನ್ಯಾ ಪ್ರವಾಸಕ್ಕಾಗಿ ಭಾರತ 'ಎ' ತಂಡಕ್ಕೆ ಆಯ್ಕೆಯಾದರು.

ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಎರಡು ಶತಕಗಳನ್ನು ಒಳಗೊಂಡಂತೆ, ಪಾಕಿಸ್ತಾನ 'ಎ' ಒಳಗೊಂಡ ಭಾರತ 'ಎ' ತ್ರಿಕೋನ ಸರಣಿಯಲ್ಲಿ ಎಂಎಸ್ ಧೋನಿ 362 ರನ್ ಗಳಿಸಿದರು. ಆದರೆ, ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗುವ ಮುನ್ನವೇ ಎಂಎಸ್ ಧೋನಿಯ ಪ್ರೀತಿಗೆ ದೊಡ್ಡ ಸುನಾಮಿಯೊಂದು ಅಪ್ಪಳಿಸಿತು.
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಿಯಾಂಕಾ ಝಾ
ಎಂಎಸ್ ಧೋನಿ ವಿದೇಶ ಪ್ರವಾಸದಲ್ಲಿದ್ದಾಗ, ಪ್ರಿಯಾಂಕಾ ಝಾ ರಸ್ತೆ ಅಪಘಾತದಲ್ಲಿ ದುರಂತವಾಗಿ ಸಾವನ್ನಪ್ಪಿದರು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದ ಎಂಎಸ್ ಧೋನಿ ಸಿನಿಮಾದಲ್ಲಿ ತೋರಿಸಿರುವುದನ್ನು ಹೊರತುಪಡಿಸಿ, ಪ್ರಿಯಾಂಕಾ ಝಾ ಅವರ ಕುಟುಂಬ ಅಥವಾ ವೃತ್ತಿಯ ಬಗ್ಗೆ ಹೆಚ್ಚು ತಿಳಿದಿಲ್ಲ.
ಆದರೆ, ದಿಶಾ ಪಟಾನಿ ಪಾತ್ರದಲ್ಲಿ ಪ್ರಿಯಾಂಕಾ ಝಾ ಅವರ ಜೀವನವನ್ನು ಬಳಸಿಕೊಳ್ಳಲು ನಿರ್ದೇಶಕ ನೀರಜ್ ಪಾಂಡೆ ಎಂಎಸ್ ಧೋನಿ ಅನುಮತಿಯನ್ನು ತೆಗೆದುಕೊಂಡಿದ್ದರು.
ಪ್ರಿಯಾಂಕಾ ಝಾ ಸಾವಿನ ನಂತರ ಎಂಎಸ್ ಧೋನಿ ಖಿನ್ನತೆಗೊಂಡಿದ್ದರು
ತನ್ನ ಮೊದಲ ಪ್ರೇಯಸಿ ಪ್ರಿಯಾಂಕಾ ಝಾ ಅವರ ಸಾವಿನ ಆಘಾತದಿಂದ ಹೊರಬರಲು ಎಂಎಸ್ ಧೋನಿ ಹೆಚ್ಚು ಸಮಯ ತೆಗೆದುಕೊಂಡರು ಎಂದು ಹೇಳಲಾಗುತ್ತದೆ. ಧೋನಿ ಮೈದಾನದ ಹೊರಗೆ ಸಾಕಷ್ಟು ಸಮಯವನ್ನು ಕಳೆದರು. ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಮುನ್ನ ಬಹಳ ಸಮಯ ವಿಶ್ರಾಂತಿ ಪಡೆದ ಬಳಿಕ ಮತ್ತೆ ವೃತ್ತಿಪರ ಕ್ರಿಕೆಟ್‌ಗೆ ಮರಳುವಲ್ಲಿ ಯಶಸ್ವಿಯಾದರು.
'ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಸಿನಿಮಾದ ಬಹುತೇಕ ಪಾತ್ರಗಳು ನಿಜ ಜೀವನದಿಂದ ಪ್ರೇರಿತವಾಗಿವೆ ಎಂದು ಬಾಲಿವುಟ್ ನಟಿ ದಿಶಾ ಪಟಾನಿ ಇತ್ತೀಚೆಗೆ ಬಹಿರಂಗಪಡಿಸಿದ್ದರು.
"ಚಿತ್ರದ ಪಾತ್ರಗಳು ನಿಜ ಜೀವನದ ಪಾತ್ರಗಳಿಂದ ಕೂಡಿದೆ. ಆದ್ದರಿಂದ, ನೀವು ಸಾಕ್ಷಿ ಸಿಂಗ್‌ರನ್ನು ಕಿಯಾರಾ ಅಡ್ವಾಣಿ ಅವರಲ್ಲಿ ಮತ್ತು ಎಂಎಸ್ ಧೋನಿಯನ್ನು ಸುಶಾಂತ್ ಸಿಂಗ್ ರಜಪೂತ್‌ನಲ್ಲಿ ನೋಡಿದ್ದೀರಿ".
ಈ ಚಿತ್ರದಲ್ಲಿ ಧೋನಿ ಅವರು ನನ್ನಲ್ಲಿ ಪ್ರಿಯಾಂಕಾ ಝಾ ಅವಳನ್ನು ನೋಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆ ಪಾತ್ರಕ್ಕೆ ನನ್ನದೂ ಸ್ವಲ್ಪ ಸೇರಿಸಿದ್ದೇನೆ. ನೀವು ಪ್ರತಿ ಬಾರಿ ತಾಂತ್ರಿಕವಾಗಿ ಹೋಗಲು ಸಾಧ್ಯವಿಲ್ಲ. ನಿಮ್ಮತನವನ್ನು ಸ್ವಲ್ಪ ಸೇರಿಸಬೇಕು ಎಂದು ನಾನು ಭಾವಿಸುತ್ತೇನೆ,'' ಎಂದು ದಿಶಾ ಪಟಾನಿ ಹೇಳಿದ್ದಾರೆ.
'ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಚಲನಚಿತ್ರವು 2023ರ ಜುಲೈ 7ರಂದು ಎಂಎಸ್ ಧೋನಿಯ 42ನೇ ಜನ್ಮದಿನದಂದು ಭಾರತದಲ್ಲಿ ಮರು ಬಿಡುಗಡೆಯಾಗಲಿದೆ. ಎಂಎಸ್ ಧೋನಿ 2010ರಲ್ಲಿ ಇನ್ನೊಬ್ಬ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್ ಅವರನ್ನು ಮದುವೆಯಾದರು ಮತ್ತು ಈ ಜೋಡಿಗೆ ಝೀವಾ ಎಂಬ ಮಗಳಿದ್ದಾಳೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications