Paris Olympics 2024: ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಗೆದ್ದ ನಂತರ ಪದಕವನ್ನು ಕಚ್ಚುವುದು ಏಕೆ?
ಜುಲೈ 18 ಗುರುವಾರ, ಸಾಮಾನ್ಯವಾಗಿ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ವಿಜೇತ ಅಥ್ಲೀಟ್ಸ್ ಪದಕಗಳನ್ನು ಕಚ್ಚಿ (Medal Biteing) ಫೋಟೋಗೆ ಪೋಸ್ ಕೊಡುವುದನ್ನು ನಾವು ನೋಡುತ್ತಿರುತ್ತೇವೆ. ಇದು ಯಾಕಾಗಿ? ಎಂಬ ಗೊಂದಲಗಳು ಇಂದಿಗೂ ಆನೇಕ ಮಂದಿಗೆ ತಿಳಿದಿಲ್ಲ.
ಒಲಿಂಪಿಕ್ಸ್‌ನ ಪದಕವನ್ನು ಬಾಯಿಯಿಂದ ಅಥ್ಲೀಟ್ಸ್ ಕಚ್ಚುವುದರ ಹಿಂದೆ ಒಂದು ವಿಶೇಷ ಕಾರಣವಿದೆ. ಪದಕದ ಶುದ್ದತೆಯನ್ನು ಪರಿಶೀಲಿಸಲೇ ಅಥವಾ ಇಂದೊಂದು ಸಂಪ್ರದಾಯವೇ? ಇದು ಯಾವಾಗದಿಂದ ಆಚರಣೆಯಲ್ಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಹಿಂದೆ ಬೆಲೆಬಾಳುವ ಚಿನ್ನವನ್ನು ಕರೆನ್ಸಿಯ ರೂಪದಲ್ಲಿ ಬಳಸಲು ಪ್ರಾರಂಭಿಸಲಾಗುತ್ತಿತ್ತು. ಚಿನ್ನದ ನಾಣ್ಯಗಳ ಪರಿಶುದ್ಧತೆಯನ್ನು ಪರಿಶೀಲಿಸಲು ವ್ಯಾಪಾರಿಗಳು ಅದನ್ನು ಕಚ್ಚಿ ನೋಡುತ್ತಿದ್ದರು.
ಚಿನ್ನವು ಮೃದುವಾದ ಲೋಹವಾಗಿದ್ದು, ಇದರ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಗುರುತಾಗುತ್ತಿತ್ತು. ಹೀಗಾಗಿ ಒಲಿಂಪಿಕ್ಸ್ ವಿಜೇತ ಆಥ್ಲೀಟ್ಸ್ ತಮಗೆ ಸಿಗುವ ಪದಕವನ್ನು ಕಚ್ಚುವ ಮೂಲಕ ನಿಜವಾದ ಚಿನ್ನದದ್ದೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಿದ್ದರು. ಕ್ರಮೇಣ ಒಲಿಂಪಿಕ್ಸ್‌ನಲ್ಲಿ ಇದೊಂದು ಅಭ್ಯಾಸದ ಭಾಗವಾಯಿತು.
ಇದೀಗ ಬಹುತೇಕ ಕ್ರೀಡಾಪಟುಗಳು ತಮ್ಮ ಪದಕವನ್ನು ಬಾಯಲ್ಲಿ ಕಚ್ಚಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಆದರೆ ಈಗ ಪದಕದ ಶುದ್ಧತೆಯನ್ನು ಪರಿಶೀಲಿಸುವುದಕ್ಕಾಗಿ ಅಲ್ಲ.
ಏಕೆಂದರೆ 1912ರಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಶುದ್ಧ ಚಿನ್ನದ ಪದಕಗಳನ್ನು ನೀಡುವುದನ್ನು ನಿಲ್ಲಿಸಿದೆ. ಆದರೆ ಇದರ ಅಭ್ಯಾಸ ಕ್ರಮವನ್ನು ಒಲಿಂಪಿಕ್ಸ್ ಪದಕ ವಿಜೇತ ಅಥ್ಲೀಟ್ಸ್ ಮುಂದುವರೆಸಿಕೊಂಡು ಬಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತ ಅಥ್ಲೆಟಿಕ್ಸ್ ತಂಡ
ಭಾರತೀಯ ಅಥ್ಲೆಟಿಕ್ಸ್ ತಂಡದಲ್ಲಿ 11 ಮಹಿಳೆಯರು ಮತ್ತು 18 ಪುರುಷರು ಇದ್ದಾರೆ. ಶೂಟಿಂಗ್ (21), ಹಾಕಿ (19) ಮತ್ತು ಟೇಬಲ್ ಟೆನಿಸ್‌ನಲ್ಲಿ 8 ಆಟಗಾರರು ಭಾಗವಹಿಸಲಿದ್ದು, ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸೇರಿದಂತೆ ಏಳು ಸ್ಪರ್ಧಿಗಳು ಬ್ಯಾಡ್ಮಿಂಟನ್‌ನಲ್ಲಿ (7) ಸ್ಪರ್ಧೆ ಮಾಡಲಿದ್ದಾರೆ.
ಕುಸ್ತಿ (6), ಬಿಲ್ಲುಗಾರಿಕೆ (6) ಮತ್ತು ಬಾಕ್ಸಿಂಗ್ (6), ಗಾಲ್ಫ್ (4), ಟೆನಿಸ್ (3), ಈಜು (2), ನೌಕಾಯಾನ (2) ಮತ್ತು ಕುದುರೆ ಸವಾರಿ, ಜೂಡೋ, ನೌಕಾಯಾನ ಮತ್ತು ವೇಟ್‌ಲಿಫ್ಟಿಂಗ್‌ನ್ಲಿ ತಲಾ ಒಬ್ಬೊಬ್ಬ ಕ್ರೀಡಾಪಟುಗಳು ಭಾರತ ಪರ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications