ಚಳಿಗಾಲದ ಒಲಿಂಪಿಕ್ಸ್: ಐತಿಹಾಸಿಕ ಸಾಧನೆಗೆ ಸಜ್ಜಾಗಿದ್ದಾರೆ ಭಾರತದ ಆರಿಫ್ ಖಾನ್

ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ನ ಆರಂಭಕ್ಕೆ ದಿನಗಣನೆ ಆರಂಭಗಿದೆ. ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಈ ಕ್ರೀಡಾಕೂಟ ಆರಂಭವಾಗುವ ಮುನ್ನವೇ ವಿವಾದದ ಕೇಂದ್ರಬಿಂದುವಾಗಿದೆ. ರಾಜಕೀಯ ಕಾರಣಗಳನ್ನು ಮುಂದೊಡ್ಡಿ ಅಮೆರಿಕಾ, ಆಸ್ಟ್ರೇಲಿಯಾ ಸಹಿತ ಅನೇಕ ರಾಷ್ಟ್ರಗಳು ರಾಜತಾಂತ್ರಿಕ ಬಹಿಷ್ಕಾರವನ್ನು ಹಾಕಿದೆ. ಈ ಎಲ್ಲದರ ಮಧ್ಯೆಯೂ ಕ್ರೀಡಾ ಕೂಟದ ಆರಂಭಕ್ಕೆ ಬೀಜಿಂಗ್ ಸರ್ವ ಸನ್ನಧವಾಗಿದೆ.
ಇನ್ನು ಈ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಓರ್ವ ಕ್ರೀಡಾಪಟು ಮಾತ್ರವೇ ಭಾಗವಹಿಸುತ್ತಿದ್ದಾರೆ ಎಂಬುದು ಗಮನಾರ್ಹ. 31ರ ಹರೆಯದ ಕಾಶ್ಮೀರ ಮೂಲದ ಆರಿಫ್ ಖಾನ್ ಈ ಚಳಿಗಾದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ. ಈ ಮೂಲಕ ಕಾಶ್ಮೀರ ಹಾಗೂ ಭಾರತದ ಹೆಮ್ಮೆಗೆ ಕಾರಣವಾಗಿದ್ದಾರೆ.
ಕಳೆದ 13 ವರ್ಷಗಳಲ್ಲಿ ಭಾರತದ ಯಾವ ಕ್ರೀಡಾಪಟು ಕೂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಅರ್ಹತೆಯನ್ನು ಪಡೆಯಲು ವಿಫಲವಾಗಿದ್ದರು. ಆದರೆ ಈ ಬಾರಿಯ ವಿಂಟರ್ ಒಲಿಂಪಿಕ್ಸ್‌ಗೆ ಆರಿಫ್ ಖಾನ್ ಅರ್ಹತೆ ಸಂಪಾದಿಸುವ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ.
ಇನ್ನು ಆರಿಫ್ ಖಾನ್ ಈ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಲು ಕೂಡ ಸಜ್ಜಾಗಿದ್ದಾರೆ. ಭಾರತದ ಯಾವ ಕ್ರೀಡಾಪಟು ಕೂಡ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಎರಡು ವಿಭಿನ್ನ ವಿಭಾಗದಲ್ಲಿ ಅರ್ಹತೆ ಸಂಪಾದಿಸಿದ ಸಾಧನೆ ಮಾಡಿರಲಿಲ್ಲ. ಆದರೆ ಆರಿಫ್ ಖಾನ್ ಮೊದಲ ಬಾರಿಗೆ ವಿಶೇಷ ಸಾಧನೆ ಮಾಡಿದ್ದಾರೆ.
ಹಾಜಿಬಲ್ ತಂಗ್ಮಾರ್ಗ್ ಪ್ರದೇಶದ 31ರ ಹರೆಯದ ಆರಿಫ್ ಖಾನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈವರೆಗೆ ಜಗತ್ತಿನಾದ್ಯಂತ ಸ್ಕೀಯಿಂಗ್‌ನ 127 ಅಂತರಾಷ್ಟ್ರೀಯ ಈವೆಂಟ್‌ಗಳಲ್ಲಿ ಭಾಗವಹಿಸಿದ ಸಾಧನೆ ಮಾಡಿರುವುದಾಗಿಯೂ ಆರಿಫ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರಿಫ್ ಖಾನ್ "ನನಗೊಂದು ಕನಸಿತ್ತು ಅದು ಈಗ ನನಸಾಗುತ್ತಿದೆ. ನನ್ನ ತಂದೆ ನನಗಾಗಿ ಕಂಡ ಕನಸು ನನಸಾಗಲು ನಾನು ಸಾಕಷ್ಟು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಅದೀಗ ನನಸಾಗುತ್ತಿರುವುದು ಅದ್ಭುತ ಅನುಭವ ನೀಡುತ್ತಿದೆ" ಎಂದಿದ್ದಾರೆ ಆರಿಪ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications