ಶೂಟಿಂಗ್: ದಿವ್ಯಾನ್ಷ್ ಸಿಂಗ್ ಪನ್ವರ್‌ಗೆ ಒಲಿಂಪಿಕ್ ಟಿಕೆಟ್

ಬೀಜಿಂಗ್, ಏಪ್ರಿಲ್ 26: ಯುವ ಪ್ರತಿಭೆ ರಾಜಸ್ಥಾನದ 17 ವರ್ಷದ ಶೂಟರ್ ದಿವ್ಯಾನ್ಷ್ ಸಿಂಗ್ ಪನ್ವರ್, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ನಾಲ್ಕನೇ ಶೂಟರ್ ಆಗಿ ಅರ್ಹತೆ ಪಡೆದುಕೊಂಡಿದ್ದಾರೆ.
ತಮ್ಮ ವೃತ್ತಿ ಬದುಕಿನಲ್ಲಿ ಎರಡನೇ ಬಾರಿ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ ದಿವ್ಯಾನ್ಷ್, 10 ಮೀ. ಏರ್ ರೈಫಲ್ ವಿಭಾಗದಲ್ಲಿ ಒಟ್ಟಾರೆ 249.0 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕ ಗೆದ್ದರು. ಕೇವಲ 0.4 ಅಂಕಗಳ ಅಂತರದಲ್ಲಿ ಭಾರತೀಯ ಶೂಟರ್‌ಗೆ ಚಿನ್ನ ಕೈತಪ್ಪಿ ಹೋಯಿತು.
ಚೀನಾದ ಶೂಟರ್ ಝಿಚೆಂಗ್ ಹುಯ್, ಒಟ್ಟಾರೆ 249.4 ಆಂಕಗಳನ್ನು ಗಳಿಸಿ ಸ್ವರ್ಣ ಪದಕ ಗೆದ್ದರೆ, 222.5 ಅಂಕಗಳನ್ನು ಗಳಿಸಿದ ರಷ್ಯಾದ ಶೂಟರ್ ಗ್ರಿಗೊರಿ ಶಮಾಕೊವ್ ಕಂಚಿನ ಪದಕಕ್ಕೆ ಗುರಿಯಿಟ್ಟರು.
ಅಂದಹಾಗೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಲಭ್ಯವಾದ ನಾಲ್ಕನೇ ಅರ್ಹತೆ ಇದಾಗಿದೆ. ಇದಕ್ಕೂ ಮೊದಲು ಅಂಜುಮ್ ಮೌದ್ಗಿಲ್ ಮತ್ತು ಅಪೂರ್ವಿ ಚಾಂದೇಲಾ (ಮಹಿಳೆಯರ 10 ಮೀ. ಏರ್ ರೈಫಲ್) ಹಾಗೂ ಸೌರಭ್ ಚೌಧರಿ (ಪುರುಷರ 10 ಮೀ. ಏರ್ ಪಿಸ್ತೂಲ್) ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.
ಇನ್ನು ಆರಂಭಿಕ ಸುತ್ತಿನಲ್ಲಿ ಒಟ್ಟು 60 ಪ್ರಯತ್ನಗಳಲ್ಲಿ 629.2 ಅಂಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿ ಫೈನಲ್‌ಗೆ ಕಾಲಿಟ್ಟಿದ್ದ ದಿವ್ಯಾನ್ಷ್ , ಫೈನಲ್‌ನಲ್ಲಿ 8 ಸ್ಪರ್ಧಿಗಳ ನಡುವಣ ಪೈಪೋಟಿಯಲ್ಲಿ 24 ಪ್ರಯತ್ನಗಳಲ್ಲಿ 249 ಅಂಕಗಳನ್ನು ಗಳಿಸಿದರು. ಅವರ ಪ್ರತಿ ಪ್ರಯತ್ನದಲ್ಲಿ ಅಂಕ ಗಳಿಕೆಯ ಸರಾಸರಿ 10.1ಕ್ಕಿಂತಲೂ ಕಡಿಮೆ ಇರಲಿಲ್ಲ ಎಂಬುದು ವಿಶೇಷ.
ಇದೇ ವಿಭಾಗದಲ್ಲಿ ಭಾರತದ ಮತ್ತಿತರ ಶೂಟರ್‌ಗಳಾದ ರವಿ ಕುಮಾರ್ (624.1) ಮತ್ತು ದೀಪಕ್ ಕುಮಾರ್ (622.6) ಕ್ರಮವಾಗಿ 44 ಮತ್ತು 57ನೇ ಸ್ಥಾನದಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications