For Quick Alerts
ALLOW NOTIFICATIONS  
For Daily Alerts

Women's Day 2025: ವಿಶ್ವ ಮಟ್ಟದ ಕ್ರೀಡೆಗಳಲ್ಲಿ ಸಾಧನೆಗೈದ ಹೆಮ್ಮೆಯ ಭಾರತೀಯ ನಾರಿಯರು

ಮಹಿಳೆಯರಿಗೆ ಗೌರವ ಮತ್ತು ಪ್ರೀತಿಯನ್ನು ನೀಡಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರು ಕೇವಲ ಅಡುಗೆ ಕೆಲಸಕ್ಕೆ ಸೀಮಿತವಾಗಿಲ್ಲ, ಬದಲಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಅದು ರಾಜಕೀಯವಾಗಿರಲಿ, ಕ್ರೀಡಾ ಕ್ಷೇತ್ರವಾಗಿರಲಿ, ವಿಜ್ಞಾನವಾಗಿರಲಿ ಅಥವಾ ಕಲೆಯಾಗಿರಲಿ. ಮಹಿಳೆಯರು ಎಲ್ಲೆಡೆ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.

ಕ್ರೀಡಾ ಜಗತ್ತಿನಲ್ಲಿ ಯುವ ಆಟಗಾರರನ್ನು ಕ್ರೀಡೆಗೆ ಸೆಳೆಯುವ ಇಂತಹ ಅನೇಕ ಮಹಿಳಾ ವಿಶ್ವ ಚಾಂಪಿಯನ್ ಆಟಗಾರ್ತಿಯರು ಇದ್ದಾರೆ. ಇವರಲ್ಲಿ ಮಿಥಾಲಿ ರಾಜ್, ಪಿಟಿ ಉಷಾ, ಮೇರಿ ಕೋಮ್, ಸೈನಾ ನೆಹ್ವಾಲ್ ಅವರಂತಹ ಹೆಮ್ಮೆ ಭಾರತೀಯ ವನಿತೆಯರಿದ್ದಾರೆ.

Women s Day 2025 Proud Indian women who have achieved in world-class sports

ಮಿಥಾಲಿ ರಾಜ್

ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕಿಯರಲ್ಲಿ ಮಿಥಾಲಿ ರಾಜ್ ಕೂಡ ಒಬ್ಬರು. ಅವರು 1982 ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ಜನಿಸಿದರು. ಬಾಲ್ಯದಿಂದಲೂ ಕ್ರಿಕೆಟ್ ಮೇಲಿನ ಅಪಾರ ಪ್ರೀತಿ ಅವರನ್ನು 1999 ರಲ್ಲಿ ಭಾರತ ತಂಡದ ಪರ ಆಡುವಂತೆ ಮಾಡಿತು. ಎರಡು ಏಕದಿನ ವಿಶ್ವಕಪ್ ಫೈನಲ್‌ಗಳಲ್ಲಿ ತಂಡವನ್ನು ಮುನ್ನಡೆಸಿದ ಏಕೈಕ ಭಾರತೀಯ ನಾಯಕಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಜೊತೆಗೆ ಮಹಿಳಾ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಪರ 232 ಏಕದಿನ ಪಂದ್ಯಗಳಲ್ಲಿ 7805 ರನ್ ಗಳಿಸಿದ್ದು, 7 ಶತಕಗಳು ಮತ್ತು 64 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದಲ್ಲದೆ, ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2364 ರನ್‌ಗಳು ಮತ್ತು 12 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 699 ರನ್‌ಗಳನ್ನು ಗಳಿಸಿದ್ದಾರೆ.

ಸೈನಾ ನೆಹ್ವಾಲ್

ಭಾರತ ಇಂದು ಸ್ಟಾರ್ ಬ್ಯಾಡ್ಮಿಂಟನ್‌ ಆಟಗಾರರನ್ನು ಹೊಂದಿದೆ. ಆದರೆ ಹರಿಯಾಣದ ಹಿಸಾರ್ ಮೂಲಕ ಸೈನಾ ನೆಹ್ವಾಲ್ ಅವರು ಬ್ಯಾಡ್ಮಿಂಟನ್ ಜಗತ್ತಿಗೆ ಪ್ರವೇಶಿಸಿದಾಗ, ಭಾರತ ಅಷ್ಟಾಗಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರಲಿಲ್ಲ. ಆಗ ಬ್ಯಾಡ್ಮಿಂಟನ್‌ನಲ್ಲಿ ಚೀನಾ ದೇಶ ಪ್ರಾಬಲ್ಯ ಸಾಧಿಸಿತ್ತು. ಆದರೆ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದರೊಂದಿಗೆ ಅವರು ಒಲಿಂಪಿಕ್ ಬ್ಯಾಡ್ಮಿಂಟನ್ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ದಾಖಲೆ ಮಾಡಿದ್ದರು. ಈ ಮೂಲಕ ಅವರು ಭಾರತದಲ್ಲಿ ಬ್ಯಾಡ್ಮಿಂಟನ್‌ಗೆ ಅಡಿಪಾಯ ಹಾಕಿದ್ದರು. ನೆಹ್ವಾಲ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದರು. ಇದಲ್ಲದೆ, ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಇದಾದ ನಂತರ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಇತಿಹಾಸ ಸೃಷ್ಟಿಸಿದ್ದರು.

ಪಿಟಿ ಉಷಾ

ಕೇರಳದ ಕೋಝಿಕ್ಕೋಡ್‌ ಮೂಲದ ಪಿಟಿ ಉಷಾ ಅವರು ಕೋಟ್ಯಾಂತರ ಭಾರತೀಯರಿಗೆ ಸ್ಪೂರ್ತಿ ಆಗಿದ್ದಾರೆ.
ಕ್ರೀಡಾ ಮೈದಾನದಲ್ಲಿ ಹುಡುಗಿಯರಿಗೆ ಹೆಚ್ಚಿನ ಸೌಲಭ್ಯಗಳು ಲಭ್ಯವಿಲ್ಲದಿದ್ದ ಸಮಯದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಸಾಧನೆ ಮಾಡಿರುವ ಪಿಟಿ ಉಷಾ ಅತ್ಯುತ್ತಮ ಓಟಗಾರ್ತಿ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಸಾಧನೆಗಳ ಶಿಖರವನ್ನು ತಲುಪಿದ್ದಾರೆ. 1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 400 ಮೀ ಹರ್ಡಲ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. ಅವರು ಪದಕ ಗೆಲ್ಲಲು ಸಾಧ್ಯವಾಗದಿದ್ದರೂ, ನಾಲ್ಕನೇ ಸ್ಥಾನ ಪಡೆಯುವುದು ಸುಲಭವಾಗಿರಲಿಲ್ಲ. ಪ್ರಸ್ತುತ ಅವರು ಭಾರತ ಒಲಿಂಪಿಕ್ ಅಸೋಸಿಯೇಷನ್‌ನ ಮುಖ್ಯಸ್ಥರಾಗಿದ್ದಾರೆ. ಜೊತೆಗೆ ರಾಜ್ಯಸಭಾ ಸದಸ್ಯರೂ ಆಗಿದ್ದಾರೆ.

ಮೇರಿ ಕೋಮ್

ವಿಶ್ವದಾದ್ಯಂತ ತ್ರಿವರ್ಣ ಧ್ವಜ ಹಾರಿಸಿದ ಸ್ಟಾರ್ ಬಾಕ್ಸರ್ ಮೇರಿ ಕೋಮ್, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ಕ್ರೀಡಾಪಟು. ಭಾರತದ ಬಾಕ್ಸಿಂಗ್‌ನಲ್ಲಿ ಅಡಿಪಾಯ ಹಾಕಿದರವರಲ್ಲಿ ಮೇರಿ ಕೋಮ್ ಪ್ರಮುಖರು.
ಒಲಿಂಪಿಕ್ಸ್ ಆಗಿರಲಿ ಅಥವಾ ವಿಶ್ವ ಚಾಂಪಿಯನ್‌ಶಿಪ್ ಆಗಿರಲಿ ಪ್ರತಿ ಬಾರಿಯೂ ಮೇರಿ ಕೋಮ್ ಚಾಂಪಿಯನ್. ಇದು ಲೊವ್ಲಿನಾ ಬೊರ್ಗೊಹೈನ್‌ರಂತಹ ಆಟಗಾರ್ತಿಯರನ್ನು ಬಾಕ್ಸಿಂಗ್ ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಿತು. ಕೋಮ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 8 ಪದಕಗಳನ್ನು ಗೆದ್ದಿದ್ದಾರೆ. ಇದಲ್ಲದೆ, ಅವರು ಏಷ್ಯನ್ ಕ್ರೀಡಾಕೂಟ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ತಲಾ ಒಂದು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. ಈ ಮೂಲಕ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಕರ್ಣಂ ಮಲ್ಲೇಶ್ವರಿ

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಕರ್ಣಂ ಮಲ್ಲೇಶ್ವರಿ. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಅವರು ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಒಲಿಂಪಿಕ್ ಪದಕ ಗೆಲ್ಲುವ ಮೂಲಕ ಅವರು ಭಾರತದ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಮಲ್ಲೇಶ್ವರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ನಂತರ, ಕ್ರೀಡೆಯಲ್ಲಿ ಅವರ ಸಾಧನೆಗಳನ್ನು ಕಂಡು ಭಾರತ ಸರ್ಕಾರವು ಅವರಿಗೆ ಖೇಲ್ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

Story first published: Saturday, March 8, 2025, 9:16 [IST]
Other articles published on Mar 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+