Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಮೊದಲ ದಿನ ಕಣಕ್ಕಿಳಿಯಲಿದ್ದಾರೆ ಪ್ರಮುಖ ಕ್ರೀಡಾಪಟುಗಳು

World Athletics Championships 2022: India Day 1 schedule and other details

18ನೇ ಆವೃತ್ತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಶುಕ್ರವಾರದಿಂದ ಆರಂಭವಾಗಲಿದ್ದು ಪ್ರತಿಷ್ಠಿತ ಟೂರ್ನಿಯನ್ನು ಇದೇ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಆತಿಥ್ಯ ವಹಿಸಿಕೊಂಡಿದೆ. 10 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ 200ಕ್ಕೂ ಅಧಿಕ ರಾಷ್ಟ್ರಗಳ ಸುಮಾರು 2000ದಷ್ಟು ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. 49 ಟ್ರ್ಯಾಕ್ ಮತ್ತು ಫಿಲ್ಡ್ ಕ್ರೀಡೆಗಳು ಈ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಡೆಯಲಿದೆ.

ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರ ನೇತೃತ್ವದಲ್ಲಿ ಭಾಗಿಯಾಗಲಿರುವ ಭಾರತ ತಂಡದಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ (ಪುರುಷರ ಶಾಟ್‌ಪುಟ್) ಕಮಲಪ್ರೀತ್ ಕೌರ್ (ಮಹಿಳಾ ಡಿಸ್ಕಸ್ ಥ್ರೋ), ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 20 ಕಿಮೀ ಓಟದ ನಡಿಗೆ), ರಾಹುಲ್ ರೋಹಿಲ್ಲಾ (ಪುರುಷರ 20 ಕಿಮೀ ಓಟದ ನಡಿಗೆ), ಸಂದೀಪ್ ಕುಮಾರ್ (ಪುರುಷರ 20 ಕಿ.ಮೀ ಓಟದ ನಡಿಗೆ), ಮುರಳಿ ಶ್ರೀಶಂಕರ್ (ಪುರುಷರ ಲಾಂಗ್ ಜಂಪ್), ಜೆಸ್ವಿನ್ ಆಲ್ಡ್ರಿನ್ (ಪುರುಷರ ಲಾಂಗ್ ಜಂಪ್), ಅಬ್ದುಲ್ಲಾ ಅಬೂಬಕರ್ (ಪುರುಷರ ಟ್ರಿಪಲ್ ಜಂಪ್), ಅವಿನಾಶ್ ಸೇಬಲ್ (ಪುರುಷರ 3000ಮೀ ಸ್ಟೀಪಲ್‌ಚೇಸ್), ಪ್ರವೀಣ್ ಚಿತ್ರವೇಲ್ (ಪುರುಷರ ಟ್ರಿಪಲ್ ಜಂಪ್), ಸೀಮಾ ಪುನಿಯಾ (ಮಹಿಳಾ ಡಿಸ್ಕಸ್ ಎಸೆತ) ಭಾಗವಹಿಸಲಿದ್ದಾರೆ.

ಮೊದಲ ದಿನ ಸ್ಪರ್ಧೆಯಲ್ಲಿ ಭಾಗಿಯಾಗಲಿರುವ ಭಾರತೀಯ ಅಥ್ಲೀಟ್‌ಗಳು(ಭಾರತೀಯ ಕಾಲಮಾನ ಜುಲೈ 16ರ 1:40ರಿಂದ ಸ್ಪರ್ಧೆಗಳು ಆರಂಭವಾಗಲಿದೆ)
01:40 am: ಮಹಿಳೆಯರ 20 ಕಿಮೀ ರೇಸ್ ವಾಕ್ ಫೈನಲ್
03: 40 am: ಪುರುಷರ 20 ಕಿಮೀ ರೇಸ್ ವಾಕ್ ಫೈನಲ್
ಬೆಳಗ್ಗೆ 05:45: ಪುರುಷರ 3000ಮೀ ಸ್ಟೀಪಲ್‌ಚೇಸ್ ಹೀಟ್ಸ್
ಬೆಳಿಗ್ಗೆ 06:30: ಪುರುಷರ ಲಾಂಗ್ ಜಂಪ್ ಅರ್ಹತಾ ಸುತ್ತು
ಬೆಳಿಗ್ಗೆ 07:25: ಪುರುಷರ ಶಾಟ್‌ಪುಟ್ ಅರ್ಹತಾ ಸುತ್ತು
ರಾತ್ರಿ 11:05: ಮಹಿಳೆಯರ 3000ಮೀ ಸ್ಟೀಪಲ್‌ಚೇಸ್ ಹೀಟ್ಸ್

ಕ್ರೀಡೆಗಳ ನೇರ ಪ್ರಸಾರ: ಭಾರತದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ನೋನಿ ಟೆನ್ 2 ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಇನ್ನು ಸೋನಿ ಲಿವ್‌ನಲ್ಲಿ ಕೂಡ ಲೈವ್ ಸ್ಟ್ರೀಮಿಂಗ್ ವೀಕ್ಷಣೆಗೆ ಅವಕಾಶವಿದೆ.

Story first published: Friday, July 15, 2022, 10:06 [IST]
Other articles published on Jul 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+