
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇಬ್ಬರು ಅಥ್ಲೀಟ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದಾರೆ. ಮುರಳಿ ಶ್ರೀಶಂಕರ್ ಮುರಳಿ ಹಾಗೂ ಅವಿನಾಶ್ ಸಾಬ್ಲೆ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದ್ದು ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ. ಮುರಳಿ ಶ್ರೀಶಂಕರ್ ಲಾಂಗ್ ಜಂಪ್ ವಿಭಾಗದಲ್ಲಿ ಈ ಸಾಧನೆ ಮಾಡಿದರೆ ಅವಿನಾಶ್ ಸಾಬ್ಲೆ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಮಿಂಚಿದ್ದಾರೆ.
ಈ ಋತುವಿನಲ್ಲಿ ನಡೆದ ಸ್ಪರ್ಧೆಗಳಲ್ಲಿ ಇಲ್ಲಿಯವರೆಗೆ ಸ್ಥಿರ ಪ್ರದರ್ಶನ ನೀಡಿದ ಶ್ರೀಶಂಕರ್ ಈ ಪ್ರತಿಷ್ಠಿತ ಸ್ಪರ್ಧೆಯ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲು 8 ಮೀ ಜಿಗಿದಿದು ಸಾಧನೆ ಮಾಡಿದ್ದಾರೆ. ಅವರ ದೇಶವಾಸಿಗಳಾದ ಜೆಸ್ವಿನ್ ಆಲ್ಡ್ರಿನ್ (7.79 ಮೀ) ಮತ್ತು ಮುಹಮ್ಮದ್ ಅನೀಸ್ ಯಾಹಿಯಾ (7.73 ಮೀ) ಅವರಿಗಿಂತ ಮುಂದಿದ್ದಾರೆ.
ಶ್ರೀಶಂಕರ್ ಸ್ಥಿರ ಪ್ರದರ್ಶನ: ಈ ಋತುವಿನಲ್ಲಿ ಇಲ್ಲಿಯವರೆಗೆ ಸ್ಥಿರ ಪ್ರದರ್ಶನ ನೀಡಿದ ಶ್ರೀಶಂಕರ್, ಈವೆಂಟ್‌ನ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲು 8 ಮೀ ಜಿಗಿದಿದ್ದು ಭಾರತದ ಇತರ ಸ್ಪರ್ಧಿಗಳಾದ ಜೆಸ್ವಿನ್ ಆಲ್ಡ್ರಿನ್ (7.79 ಮೀ) ಮತ್ತು ಮುಹಮ್ಮದ್ ಅನೀಸ್ ಯಾಹಿಯಾ (7.73 ಮೀ) ಅವರಿಗಿಂತ ಮುಂದಿದ್ದಾರೆ.
ಐತಿಹಾಸಿಕ ಸಾಧನೆ ಮಾಡಿದ ಮುರಳಿ ಶ್ರೀಶಂಕರ್: ಇನ್ನು ಲಾಂಗ್ ಜಂಪ್‌ನಲ್ಲಿ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಹಂತಕ್ಕೇರುವ ಮೂಲಕ ಭಾರತದ ಮುರಳಿ ಶ್ರೀಶಂಕರ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಲಾಂಗ್‌ಜಂಪ್‌ನಲ್ಲಿ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ಯಾವುದೇ ಅಥ್ಲೀಟ್ ಕೂಡ ಈ ಸಾಧನೆ ಮಾಡಿಲ್ಲ. ಮುರಳಿ ಶಂಕರ್ ಮೊದಲ ಬಾರಿಗೆ ಈ ಸಾಧನೆ ಮಾಡಿದಂತಾಗಿದೆ. ಹೀಗಾಗಿ ಪದಕ ಗೆಲ್ಲುವ ವಿಶ್ವಾಸ ಕೂಡ ಭಾರತದ ಕ್ರೀಡಾಭಿಮಾನಿಗಳಿಗೆ ಹೆಚ್ಚಾಗಿದೆ. ಕಳೆದ ಮೇ ತಿಂಗಳಿನಲ್ಲಿ 8.34 ಮೀ. ಜಿಗಿಯುವ ಮೂಲಕ ಸಾಧನೆ ಮಾಡಿದ್ದ ಶ್ರೀಶಂಕರ್ ಮೇಲೆ ಹೆಚ್ಚಿನ ಭರವಸೆಯಿದೆ.

ಇನ್ನು ಭಾರತದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಿನಾಶ್ ಸಾಬ್ಲೆ ಕೂಡ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ನೇರವಾಗಿ ಫೈನಲ್‌ಗೆ ಅರ್ಹತೆ ಸಂಪಾದಿಸಿದ್ದಾರೆ. 8:18.75 ಸಮಯದಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ ಅವಿನಾಶ್. ಪದಕ ಸುತ್ತಿಗೆ ಅರ್ಹತೆ ಪಡೆಯಲು ತಮ್ಮ ಹೀಟ್ಸ್‌ನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮೊದಲ ದಿನ ಭಾರತದ ಅಥ್ಲೀಟ್‌ಗಳ ಫಲಿತಾಂಶಗಳು
1. ಮಹಿಳೆಯರ 20 ಕಿಮೀ ರೇಸ್ ವಾಕ್ ಫೈನಲ್ಸ್ -ಪ್ರಿಯಾಂಕಾ ಗೋಸ್ವಾಮಿ - 28ನೇ ಫೀಲ್ಡ್‌ನಲ್ಲಿ 1:39:42 ಸೆಕೆಂಡ್‌ಗಳಲ್ಲಿ 34ನೇ ಸ್ಥಾನದೊಂದಿಗೆ ಸ್ಪರ್ಧೆ ಪೂರ್ಣಗೊಳಿಸಿದ್ದಾರೆ
2. ಪುರುಷರ 3000ಮೀ ಸ್ಟೀಪಲ್‌ಚೇಸ್- ಅವಿನಾಶ್ ಸೇಬಲ್ - ಹೀಟ್ಸ್ 3: 8:18.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
3. ಪುರುಷರ 20 ಕಿ.ಮೀ ಓಟದ ನಡಿಗೆ ಫೈನಲ್ಸ್-ಸಂದೀಪ್ ಕುಮಾರ್: 45ನೇ ಫೀಲ್ಡ್‌ನಲ್ಲಿ 1:31:58 ಸೆಕೆಂಡ್‌ಗಳಲ್ಲಿ 40 ನೇ ಸ್ಥಾನದೊಂದಿಗೆ ಸ್ಪರ್ಧೆ ಪೂರ್ಣಗೊಳಿಸಿದ್ದಾರೆ
4. ಪುರುಷರ ಲಾಂಗ್ ಜಂಪ್: ಮುರಳಿ ಶ್ರೀಶಂಕರ್ 8.00 ಮೀ ಜಿಗಿತದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.