Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಪುರುಷರ 4*400 ರಿಲೆಯಲ್ಲಿ ಭಾರತ ನೂತನ ದಾಖಲೆ

ಹಂಗೇರಿಯ ಬುಡಪೆಸ್ಟ್‌ನಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ನಡೆಯುತ್ತಿದೆ. ಈ ಕ್ರೀಡಾಕೂಟದಲ್ಲಿ ಭಾರತದ 4*400 ರಿಲೇ ತಂಡ ನೂತನ ಏಷ್ಯನ್ ದಾಖಲೆ ಬರೆದಿದೆ. ತಮ್ಮ ಹೀಟ್ ವಿಭಾಗದಲ್ಲಿ ಭಾರತ ಎರಡನೇ ಸ್ಥಾನಿಯಾಗಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಈ ಸಾಧನೆಗೈದಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಭಾರತದ ಪುರುಷರ 4x400 ಮೀಟರ್ ರಿಲೇ ತಂಡದ ರೋಚಕ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಬಲಿಷ್ಠ ಯುಎಸ್‌ಎ ಜೊತೆಗೆ ಭಾರತ ಹೀಟ್ 1ರಲ್ಲಿ ಸ್ಪರ್ಧಿಸಿತ್ತು.

ಈ ಸ್ಪರ್ಧೆಯಲ್ಲಿ ಭಾರತ ತಂಡದ ಪರವಾಗಿ ಮುಹಮ್ಮದ್ ಅನಾಸ್ ಯಾಹಿಯಾ ಅವರು ಓಟ ಆರಂಭಿಸಿಸಿದರು ಮೊದಲ ರನ್‌ನಲ್ಲಿ ಆರನೇ ಸ್ಥಾನದಲ್ಲಿತ್ತು ಭಾರತ. ಆದರೆ ನಂತರ ಅಮೋಜ್ ಜೇಕಬ್ ಅಮೋಘ ಓಟದೊಂದಿಗೆ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡಿತು. ನಂತರ ಮುಹಮ್ಮದ್ ಅಜ್ಮಲ್ ವರಿಯತ್ತೋಡಿ ಮತ್ತು ರಾಜೇಶ್ ರಮೇಶ್ ಈ ಅದ್ಭುತ ಮುನ್ನಡೆಯನ್ನು ಉಳಿಸಿಕೊಂಡಿದ್ದಲ್ಲದೆ 2:59.05 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಏಷ್ಯನ್ ದಾಖಲೆಯನ್ನು ಧ್ವಂಸಗೊಳಿಸಿದರು. ಇದಕ್ಕೂ ಮುನ್ನ ಈ ವಿಭಾಗದಲ್ಲಿ ಏಷ್ಯಾದ ದಾಖಲೆ ಜಪಾನ್ ಹೆಸರಿನಲ್ಲಿದ್ದು 2:59.51 ಸೆಕೆಂಡ್‌ನಲ್ಲಿ ದಾಖಲೆ ಬರೆದಿತ್ತು.

World Athletics Championships: Indian men’s 4x400m relay team set new Asian record and enter finals

ಗಮನಾರ್ಹ ಅಂಶವೆಂದರೆ ರಾಜೇಶ್ ಆಂಕರ್ ಲೆಗ್‌ನಲ್ಲಿ ಯುಎಸ್‌ಎಯ ಜಸ್ಟಿನ್ ರಾಬಿನ್‌ಸನ್‌ರನ್ನು ಕ್ಷಣಮಾತ್ರದಲ್ಲಿ ಹಿಂದಿಕ್ಕಿದರು. ಭಾರತೀಯ ಓಟಗಾರರ ಅಸಾಧಾರಣ ಸಾಧನೆ ಭಾರತೀಯ ಕ್ರೀಡಾಪ್ರೇಮಿಗಳನ್ನು ಪುಳಕಿತಗೊಳಿಸಿದೆ. 2:58:47 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಯುಎಸ್‌ಎಗಿಂತ ಅತ್ಯಲ್ಪ ಅಂತರದಿಂದ ಹಿಂದುಳಿದು ಎರಡನೇ ಸ್ಥಾನದೊಂದಿಗೆ ಭಾರತ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಭಾರತ ಇಲ್ಲಿ ಗ್ರೇಟ್ ಬ್ರಿಟನ್ ಮತ್ತು ಬೋಟ್ಸ್ವಾನಾವನ್ನು ಹಿಂದಿಕ್ಕಿತ್ತು. ಈ ಎರಡು ದೇಶಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಮುಗಿಸಿತು. ಎರಡೂ ತಂಡಗಳು 2:59:42 ಸೆಕೆಂಟ್‌ನಲ್ಲಿ ಸ್ಪರ್ಧೆ ಮುಗಿಸಿದ್ದವು. ಅಗ್ರ-ನಾಲ್ಕು ತಂಡಗಳಲ್ಲಿ ಸ್ಥಾನ ಪಡೆಯುವ ಮೂಲಕ ಭಾರತ ಫೈನಲ್‌ಗೆ ನೇರ ಅರ್ಹತೆಯನ್ನು ಪಡೆದುಕೊಂಡಿದೆ.

ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಈವರೆಗೆ ಕೇವಲ ಎರಡು ಪದಕಗಳನ್ನು ಮಾತ್ರವೇ ಗಳಿಸಿದೆ. 2003ರಲ್ಲಿ ಪ್ಯಾರಿಸ್‌ನಲ್ಲಿ ಈ ಕ್ರೀಡಾಕೂಟ ನಡೆದಿದ್ದಾಗ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಭಾರತ ಪದಕವನ್ನು ಗೆದ್ದ ಸಾಧನೆಗೆ ಕಾರಣವಾಗಿದ್ದರು. ಅದಾದ ಬಳಿಕ 2022ರಲ್ಲಿ ಒರೆಗಾನ್‌ನಲ್ಲಿ ನಡೆದಿದ್ದಾಗ ನೀರಜ್ ಚೋಪ್ರ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಭಾನುವಾರ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದ ಕೊನೆಯ ದಿನವಾಗಿದ್ದು ಭಾರತ ಒಂದೆರಡು ಪದಕಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಪುರುಷರ 4*400 ರಿಲೇ ತಂಡ ಫೈನಲ್‌ಗೆ ಪ್ರವೇಶಿಸುವುದರ ಜೊತೆಗೆ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರ ಸೇರಿದಂತೆ ಮೂವರು ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸಲಿದ್ದಾರೆ.

Story first published: Sunday, August 27, 2023, 9:11 [IST]
Other articles published on Aug 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+