Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಬದಲು, 2022ಕ್ಕೆ ಮುಂದೂಡಿಕೆ

World Athletics Championships rescheduled for July 2022

ನವದೆಹಲಿ, ಏಪ್ರಿಲ್ 9: ಯುನೈಟೆಡ್ ಸ್ಟೇಟ್ಸ್‌ನ ಒರೆಗಾನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ವೇಳಾಪಟ್ಟಿ ಬದಲಾಗಿದೆ. ಪ್ರತಿಷ್ಠಿತ ಕ್ರೀಡಾಕೂಟವನ್ನು ಜುಲೈ 15-24ರ 2022ಕ್ಕೆ ಮುಂದೂಡಲಾಗಿದೆ. 2021ರಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ಸ್‌ಗೆ ಎದುರಾಗದಿರಲೆಂದು ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ದಿನಾಂಕ ಬದಲಿಸಲಾಗಿದೆ.

2020ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಕೊರೊನಾವೈರಸ್‌ ಕಾರಣ 2021ರ ಜುಲೈ 23ರಿಂದ 8 ಅಗಸ್ಟ್ ವರೆಗೆ ನಡೆಸಲು ನಿರ್ಧರಿಸಲಾಗಿದೆ. ಅಸಲಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಕೂಡ ಇದೇ ದಿನಾಂಕದಂದು ನಡೆಸಲು ನಿಗದಿಯಾಗಿತ್ತು.

ವರ್ಲ್ಡ್ ಅಥ್ಲೆಟಿಕ್ಸ್ ನಡೆಯಲಿದ್ದ ವೇಳಾಪಟ್ಟಿಯಂದು ಟೋಕಿಯೋ ಒಲಿಂಪಿಕ್ಸ್ ಮುಂದೂಡಲ್ಪಡ್ಡಿರುವುದರಿಂದ ಅನಿವಾರ್ಯವಾಗಿ ವರ್ಲ್ಡ್ ಅಥ್ಲೆಟಿಕ್ಸ್ ಮುಂದೂಡಬೇಕಾಗಿ ಬಂದಿದೆ. ಇದೇ ಕಾರಣಕ್ಕೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಅನ್ನು ಎರಡು ವರ್ಷಗಳ ಕಾಲ ಮುಂದೂಡಲಾಗಿದೆ.

ವಿಶ್ವ ಅಥ್ಲೆಟಿಕ್ಸ್ ನಡೆಸಲು ನಿಗದಿಯಾಗಿರುವ ಹೊಸ ದಿನಾಂಕವನ್ನು ವಿಶ್ವ ಅಥ್ಲೆಟಿಕ್ಸ್ ಕೌನ್ಸಿಲ್ ಚರ್ಚೆಯ ಬಳಿಕ ಅನುಮೋದಿಸಿದೆ. 2022ರ ಜುಲೈ-ಆಗಸ್ಟ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್ವೆಲ್ತ್ ಗೇಮ್ ನಡೆಯಲಿದೆ ಮತ್ತು ಮ್ಯೂನಿಚ್‌ನಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ಸ್ ನಡೆಯಲಿರುವುದರಿಂದ ವಿಶ್ವ ಅಥ್ಲೆಟಿಕ್ಸ್ ದಿನಾಂಕಕ್ಕೆ ಅನುಮೋದಿಸುವ ಮುನ್ನ ವಿಶ್ವ ಅಥ್ಲೆಟಿಕ್ಸ್ ಕೌನ್ಸಿಲ್ ಚರ್ಚೆ ನಡೆಸಿತು.

Story first published: Thursday, April 9, 2020, 13:27 [IST]
Other articles published on Apr 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+