Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Chess Championship 2024: ಚೀನಾದ ಡಿಂಗ್ ಲಿರೆನ್ ವಿರುದ್ಧ ಡಿ.ಗುಕೇಶ್‌ಗೆ ಐತಿಹಾಸಿಕ ಗೆಲುವು

ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ 2024ರಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಐತಿಹಾಸಿ ಗೆಲುವು ಸಾಧಿಸಿದ್ದಾರೆ. ಪ್ರಸ್ತುತ ವಿಶ್ವ ಚೆಸ್ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಡಿ.ಗುಕೇಶ್ ಅವರು ಸೋಲಿಸಿದ್ದಾರೆ. ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಡಿ ಗುಕೇಶ್ ಸ್ಕೋರ್ ಅನ್ನು 1.5-1.5 ರಲ್ಲಿ ಸಮಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 25 ರಿಂದ ಆರಂಭವಾಗಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ ಲಿರೆನ್ ವಿರುದ್ಧ 1.5-0.5 ರಿಂದ ಗುಕೇಶ್ ಸೋಲು ಕಂಡಿದ್ದರು. ನಂತರ ಮಂಗಳವಾರ ಎರಡನೇ ಸುತ್ತಿನ ಪಂದ್ಯ ಡ್ರಾ ಆಗಿತ್ತು. ಇದೀಗ ಬುಧವಾರ ನಡೆದ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಗುಕೇಶ್ ಅದ್ಭುತ ಪುನರಾಗಮನ ಮಾಡಿದ್ದಾರೆ.

World Chess Championships 2024 Historic win for D Gukesh against Ding Liren China

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಗುಕೇಶ್ ಅವರಿಗೆ ಇದು ಮೊದಲ ಗೆಲುವಾಗಿದೆ. ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 14 ಸುತ್ತುಗಳು ನಡೆಯಲಿದ್ದು, ಡಿಸೆಂಬರ್ 12 ರವೆರೆಗೆ ನಡೆಯಲಿದೆ. ಒಂದು ವೇಳೆ ಅಗತ್ಯ ಬಿದ್ದರೆ ಡಿಸೆಂಬರ್ 13 ರಂದು ಟೈಬ್ರೇಕರ್ ಸುತ್ತು ನಡೆಸಲು ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.

ಈಗಾಗಲೇ ಲಿರೆನ್ ಮತ್ತು ಗುಕೇಶ್ ಇಬ್ಬರ ನಡುವೆ ಮೂರು ಸುತ್ತಿನ ಪಂದ್ಯಗಳು ನಡೆದಿದ್ದು, ಲಿರೆನ್ ಮತ್ತು ಗುಕೇಶ್ ತಲಾ 1.5 ಅಂಕಗಳೊಂದಿಗೆ ಸಮಬಲದಲ್ಲಿದ್ದಾರೆ. ಇನ್ನೂ 11 ಪಂದ್ಯಗಳು ಬಾಕಿ ಇವೆ. 7.5 ಅಂಕಗಳನ್ನು ತಲುಪುವ ಮೊದಲ ವ್ಯಕ್ತಿಯನ್ನು ಮುಂದಿನ ವಿಶ್ವ ಚೆಸ್ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ವಿಶೇಷವೆನೆಂದರೆ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಷ್ಯಾದ ಇಬ್ಬರು ಆಟಗಾರರು ಸೆಣಸಾಡುತ್ತಿರುವುದು.

ವಿಶ್ವ ದಾಖಲೆ

ಗುಕೇಶ್ ಇತ್ತೀಚೆಗೆ ಕೆನಡಾದ ಟೊರೊಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಈಗ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಗುಕೇಶ್ ದಾಖಲೆ ಸೃಷ್ಟಿಸಲಿದ್ದಾರೆ. ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಕಿರಿಯ ಚೆಸ್ ಚೆತುರ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಲಿದ್ದಾರೆ. ಅಲ್ಲದೆ, ಈ ಸಾಧನೆ ಮಾಡಿದೆ ಎರಡನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಇವರಿಗೂ ಮುನ್ನ ವಿಶ್ವನಾಥನ್ ಆನಂದ್ 5 ಬಾರಿ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

Story first published: Thursday, November 28, 2024, 10:53 [IST]
Other articles published on Nov 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+